ಅಗ್ನಿಸಾಕ್ಷಿ, ಕಮಲಿ, ನಾಗಿಣಿ ಸೇರಿದಂತೆ ಅನೇಕ ಹಿಟ್ ಧಾರಾವಾಹಿಗಳ ನಿರ್ದೇಶಕ ಹಾಗೂ ನಿರ್ಮಾಪಕರಾಗಿರೋ ಹಯವಧನ್ ಅವರ ನಿರ್ದೇಶನದಲ್ಲಿ ಮೂಡಿಬರ್ತಿರೋ ಧಾರಾವಾಹಿಯೇ ಆಕಾಶ ದೀಪ.
ದಿವ್ಯಾ ವಿಕಲಾಂಗ ಆಕಾಶ್ ಹಾಗೂ ಬಡ ಕುಟುಂಬದ ಛಲಗಾತಿ ದೀಪ ಸುತ್ತ ಹೆಣೆದಿರುವ ಕತೆಯೇ ಆಕಾಶ ದೀಪದ ಸತ್ವ. ಸದ್ಯ ಈ ಧಾರಾವಾಹಿಯಲ್ಲಿ ಆಕಾಶ್ ಮತ್ತು ದೀಪಾ ಮದ್ವೆ ಎಪಿಸೋಡ್ಗಳು ಟೆಲಿಕಾಸ್ಟ್ ಆಗ್ತಿವೆ.
ಯಾವುದೇ ಸೀರಿಯಲ್ ಆಗಿರಲಿ, ಮದ್ವೆ ನಂತರ ಟ್ವಿಸ್ಟ್ಗಳು ಇರೋದು ಸಹಜ. ಮದುವೆಯ ನಂತರ ಒಂದಷ್ಟು ಎಪಿಸೋಡ್ಗಳು ಪ್ರಸಾರವಾಗೋದು ಸಂಪ್ರದಾಯ. ಆದ್ರೆ, ಆಕಾಶ ದೀಪ ಸೀರಿಯಲ್ ವಿಚಾರದಲ್ಲಿ ಹೀಗೇ ಆಗಿಲ್ಲ. ಯಾಕಂದ್ರೆ, ಮದುವೆಯ ನಂತರ ಆಕಾಶ ದೀಪ ಎಪಿಸೋಡ್ ವೈಂಡಪ್ ಆಗ್ಲಿದೆ.
ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಮದುವೆಯ ನಂತರ ಈ ಸೀರಿಯಲ್ನಲ್ಲಿ ಹೀರೋಯಿನ್ ಕೂಡ ಬ್ಲೈಂಡ್ ಆಗ್ತಿದ್ಲು. ಆ ನಂತರ ಇವರಿಬ್ಬರು ಹೇಗೇ ಸಂಸಾರ ಅನ್ನೋ ನೌಕೆಯನ್ನು ಮುಂದುವರೆಸಿಕೊಂಡು ಹೋಗ್ತಿದ್ರು ಅನ್ನೋ ಕಥೆ ಶುರುವಾಗ್ಬೇಕಿತ್ತು. ಆದ್ರೆ, ಆಕಾಶ ದೀಪದ ನೈಜ ಕತೆ ಶುರುವಾಗೋ ಮುನ್ನವೇ ಈ ಧಾರಾವಾಹಿಯ ಕಥೆ ಮುಗಿಯುತ್ತಿದೆ.
ಸೀರಿಯಲ್ನ ಪ್ರಮುಖ ಪಾತ್ರಗಳಲ್ಲಿ ಜೇ ಡಿಸೋಜಾ, ಚಂದನಾ ಎಂ ರಾವ್ ಹಾಗೂ ಹಿರಿಯ ನಟಿ ಪಂಚಮಿ ಅಭಿನಯಿಸಿದ್ದರು. ಆ ಧಾರಾವಾಹಿಯನ್ನ ಮೊದಲಿನಿಂದಲೂ ಫಾಲೋ ಮಾಡ್ತಿದ್ದ ವೀಕ್ಷಕರಿಗೆ ಈ ವಿಚಾರ ಬೇಸರ ತರಿಸಲಿದೆ.