ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್​ ಯಾಕೆ ಬೇಕಿತ್ತು..? ತಿವಿದ ಪ್ರತಾಪ್​ ಸಿಂಹ


ಮೈಸೂರು: ರಾಜ್ಯದಲ್ಲಿ ವಿಧಿಸಿರುವ ನೈಟ್​ ಕರ್ಫ್ಯೂವನ್ನು ಕೂಡಲೇ ತೆರವು ಮಾಡಿ ಎಂದು ಸಂಸದ ಪ್ರತಾಪ್​ ಸಿಂಹ ಗರಂ ಆಗಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು ಲಾಕ್ ಡೌನ್, ಕರ್ಫ್ಯೂಗಳಂತ ಅಸ್ತ್ರಗಳನ್ನು ಪ್ರಯೋಗಿಸುವುದಾದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು.? ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ, ಅಲ್ಲಿ ಪ್ರಚಾರ,ಱಲಿ ನಡೆಯುತ್ತದೆ ತಾನೇ.? ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ ವಿಧಿಸಿ ಜನರನ್ನು ಕಂಗಾಲು ಮಾಡ್ತಿದ್ದಿರಿ ಎಂದು ಪ್ರತಾಪ್​ ಸಿಂಹ ಸ್ವಪಕ್ಷೀಯ ಸರರ್ಕಾರದ ವಿರುದ್ಧವೆ ಕಿಡಿಕಾರಿದ್ದಾರೆ.

ಕರ್ಫ್ಯೂ, ಲಾಕ್ ಡೌನ್ ನಿಂದ ಜನರಿಗೆ ಬಹಳ ತೊಂದರೆಯಾಗಿದೆ. ಜನರಿಗೆ ಜೀವನ, ಜೀವ ಎರಡು ಮುಖ್ಯ. ಜೀವ ಉಳಿಸಿ ಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಯ ಬೇಕಾದರೆ ಕರ್ಫ್ಯೂ, ತೆಗೆಯಿರಿ. ಸಿಎಂ ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಪ್ರತಾಪ್​ ಸಿಂಹ ಭರವಸೆ ವ್ಯಕ್ತಪಡಿಸಿದ್ದಾರೆ.

 

News First Live Kannada


Leave a Reply

Your email address will not be published. Required fields are marked *