ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಮಿಕ್ರಾನ್​ಗೆ ತುತ್ತಾಗಬೇಕೇ? ತಜ್ಞರ ಎಚ್ಚರಿಕೆಯೇನು? ಇಲ್ಲಿದೆ ಮಾಹಿತಿ | Dont get infected in self to omicron virus its too dangours said by experts


ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಮಿಕ್ರಾನ್​ಗೆ ತುತ್ತಾಗಬೇಕೇ? ತಜ್ಞರ ಎಚ್ಚರಿಕೆಯೇನು? ಇಲ್ಲಿದೆ ಮಾಹಿತಿ

ಪ್ರಾತಿನಿಧಿಕ ಚಿತ್ರ

ಕೊರೊನಾ (Corona) ಆರಂಭವಾದ ದಿನದಿಂದ ಜನ ಹೆಚ್ಚು ಸ್ವಚ್ಛತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ದೇಹವನ್ನು ರೋಗದಿಂದ ಕಾಪಾಡಿಕೊಳ್ಳಲ್ಲು ಮಾಸ್ಕ್​, ಸ್ಯಾನಿಟೈಸರ್​ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ನಡುವೆ ನಡೆದ ಅಧ್ಯಯನವೊಂದು  ವೈದ್ಯರಿಗೇ ಅಚ್ಚರಿ ಮೂಡಿಸಿದೆ. ಹೌದು ಜನ  ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಬೇಕಂತೆಯೇ ಒಮಿಕ್ರಾನ್​ (Omicron) ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಒಂದು ಬಾರಿ ಸೋಂಕು ತಗುಲಿ ಗುಣಮುಖರಾದ ಮೇಲೆ ಅಂತಹವರಲ್ಲಿ ರೋಗ ನಿರೋಧಕ ಶಕ್ತಿ (Immunity Power) ಹೆಚ್ಚು ಇರುತ್ತದೆ ಎನ್ನುವ ಕಲ್ಪನೆಯಲ್ಲಿ ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ತಜ್ಞರು ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.

ಜನ ಬೇಂಕತೆಯೇ ಸೋಂಕಿಗೆ ತುತ್ತಾಗಲು ಕಾರಣವೇನು?
ಕೊರೊನಾ ದೀರ್ಘಕಾಲದ ರೋಗವಾಗಿದೆ. ಒಮಿಕ್ರಾನ್​ ಕೇವಲ ಸಣ್ಣ ಪ್ರಮಾಣದಲ್ಲಿ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅಲ್ಲದೆ ಒಂದು ಬಾರಿ ಸೋಂಕಿಗೆ ತುತ್ತಾದ ಮೆಲೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹ ಒಂದು ಬಾರಿ ರೋಗಕ್ಕೆ ತುತ್ತಾದ ಮೇಲೆ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಸಿಕೊಳ್ಳುತ್ತದೆ. ಅದೂ ಅಲ್ಲದೆ ವ್ಯಾಕ್ಸಿನೇಷನ್​ ಪಡೆದಿದ್ದರೆ ದೇಹ ಇನ್ನಷ್ಟು ದೀರ್ಘಕಾಲದ ರೋಗಕ್ಕೆ ತುತ್ತಾಗುವುದನ್ನು ತಡೆಯುತ್ತದೆ ಎನ್ನುವ ಕಲ್ಪನೆಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ತಜ್ಞರು ಅಧ್ಯಯನದಲ್ಲಿ  ಪತ್ತೆ ಮಾಡಿದ್ದಾರೆ.

ಸೋಂಕು ಬರುವಂತೆ ಮಾಡಿಕೊಳ್ಳುವುದು ಒಳ್ಳೆಯದಲ್ಲ
ಬೇಕಂತೆಯೇ ಸೋಂಕು ತಗುಲುವಂತೆ ಮಾಡಿಕೊಳ್ಳುವುದು ಮೂರ್ಖತನದ ಲಕ್ಷಣವಾಗಿದೆ. ತಗುಲಿರುವ ಸೋಂಕು ಒಮಿಕ್ರಾನ್​ ಅಥವಾ ಡೆಲ್ಟಾ ಎಂದು ಗುರುತಿಸಲು ಸಾಧ್ಯವಿಲ್ಲ. ಸದ್ಯ ಇನ್ನೂ 10 ರಿಂದ 15 ಪ್ರತಿಶದಷ್ಟು ಡೆಲ್ಟಾ ಸೋಂಕು ಹರಡುತ್ತಿದೆ. ಹೀಗಾಗಿ ಒಂದು ಬಾರಿ ಸೋಂಕು ತಗುಲಿದ ಮೇಲೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೆ ಕಾಯಿಲೆ ದೇಹಕ್ಕೆ ಯಾವ ರೀತಿ  ತಗುಲುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಕೆಲವೊಂದು ವೈರಸ್​ಗಳು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಆದರೆ ವ್ಯಕ್ತಿಯ ದೇಹಕ್ಕೆ ಸಾಂಕ್ರಾಮಿಕದ ರೀತಿಯಲ್ಲಿ ಹೊಕ್ಕಿದರೆ ದೇಹದ ಆರೋಗ್ಯ ಮತ್ತಷ್ಟು ಹದಗೆಡಬಹುದು ಎನ್ನುತ್ತಾರೆ ವೈದ್ಯರು.

ಸೌಮ್ಯ ಲಕ್ಷಣಗಳ್ಳ ವೈರಸ್​ ಒಮಿಕ್ರಾನ್ ಎನ್ನುವ ಕಲ್ಪನೆ
ಒಮಿಕ್ರಾನ್​ ತೀವ್ರವಾದ ಪರಿಣಾಮವನ್ನು ಬೀರುವುದಿಲ್ಲ ಎನ್ನುವ ಕಲ್ಪನೆಯಲ್ಲಿ ಜನ ಬದುಕುತ್ತಿದ್ದಾರೆ. ಕೊರೊನಾಕ್ಕೆ ಹೋಲಿಸಿದರೆ ಸೌಮ್ಯ ಲಕ್ಷಣಗಳನ್ನು ಹೊಂದಿರಬಹುದು. ಆದರೆ ಒಮಿಕ್ರಾನ್ ಕೂಡ ದೀರ್ಘಕಾಲದ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಒಂದು ಬಾರಿ ಒಮಿಕ್ರಾನ್​ ದೇಹವನ್ನು ಹೊಕ್ಕಿ ಎಷ್ಟೇ ಗುಣಮುಖವಾಗಿದೆ ಎಂದರೂ ಮುಂದಿನ ದಿನಗಳಲ್ಲಿ ದೇಹದಲ್ಲಿ ಕೊಂಚ ಏರುಪೇರಾದರೂ ನೇರವಾಗಿ ಶೀತ, ಕೆಮ್ಮಿಗೆ ತಿರುಗಬಹುದು ಎನ್ನುವುದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಬೇರೆಯವರಿಗೆ ಸೋಂಕು ಹರಡಬಲ್ಲದು
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಹುಚ್ಚು ನಿರ್ಧಾರದಿಂದ ಸೋಂಕಿಗೆ ತುತ್ತಾದರೆ, ಅದು ಬೇರೆಯವರಿಗೂ ಹರಡುವ ಸಾಧ್ಯತೆ ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ.

ಎಚ್ಚರಿಕೆ ಅಗತ್ಯ
ಯಾವ ವೈರಸ್​​ನಿಂದಲೂ ದೇಹ ಇನ್ನಷ್ಟು ಸುರಕ್ಷಿತವಾಗಬಲ್ಲದು ಎನ್ನುವ ತಪ್ಪು ಕಲ್ಪನೆ ಬೇಡ. ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಎಚ್ಚರಿಕೆಯಿಂದಿರಿ. ಕೊರೊನಾಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸಿ. ರೋಗದಿಂದ ಪಾರಾಗಲು ಬೇಕಾಗಿರುವುದು ಆರೋಗ್ಯಯುತ ಆಹಾರ ಹಾಗೂ ಲಸಿಕೆಯನ್ನು ಪಡೆಯುವುದು. ಹೀಗಾಗಿ ಪ್ರತೀ ಹಂತದಲ್ಲೂ ಮುನ್ನಚ್ಚರಿಕೆ ವಹಿಸುವುದು ಮುಖ್ಯ ಎನ್ನುವುದು ವೈದ್ಯರ ಎಚ್ಚರಿಕೆ.

(ಈ ಮೇಲಿನ ಮಾಹಿತಿಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ.ಟೈಮ್ಸ್​ ಆಫ್​ ಇಂಡಿಯಾಗೆ ವೈದ್ಯ ಡಾ.ರಾಕೇಶ್​ ಪಂಡಿತ್​ ನೀಡಿದ ಸಲಹೆಗಳನ್ನು ಆಧರಿಸಿದೆ)

TV9 Kannada


Leave a Reply

Your email address will not be published.