ನೊಬೆಲ್​ ವಿಶ್ವ ದಾಖಲೆ ಪಟ್ಟಿ ಸೇರಿದ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ ಹೆಸರು | Allu Arha Holds Noble Book of World Records for Youngest Chess Trainer


ನೊಬೆಲ್​ ವಿಶ್ವ ದಾಖಲೆ ಪಟ್ಟಿ ಸೇರಿದ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ ಹೆಸರು

ಅಲ್ಲು ಅರ್ಹಾ-ಅಲ್ಲು ಅರ್ಜುನ್​ ದಂಪತಿ

ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​ಗೆ ದೊಡ್ಡ ಅಭಿಮಾನ ಬಳಗ ಇದೆ. ಅವರ ಇಡೀ ಕುಟುಂಬವೇ ಹಲವು ದಶಕಗಳಿಂದ ಸಿನಿಮಾ ಕೆಲಸಗಳಲ್ಲಿ ನಿರತವಾಗಿದೆ. ಈಗ ಅಲ್ಲು​ ಫ್ಯಾಮಿಲಿಯ ನಾಲ್ಕನೇ ತಲೆಮಾರಿನ ಪ್ರತಿಭೆ, ಅಂದರೆ ಅಲ್ಲು ಅರ್ಜುನ್​ ಅವರ ಪುತ್ರಿ ಅಲ್ಲು ಅರ್ಹಾ ಕೂಡ ಚಿತ್ರರಂಗಕ್ಕೆ ಬರುತ್ತಿದ್ದಾಳೆ. ಅವಳು ಇತ್ತೀಚೆಗೆ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಮಧ್ಯೆ ಅವಳ ಹೆಸರಲ್ಲಿ ನೊಬೆಲ್ ದಾಖಲೆ ನಿರ್ಮಾಣ ಆಗಿದೆ.  ಅತಿ ಚಿಕ್ಕ ವಯಸ್ಸಿಗೆ ಅಲ್ಲು ಅರ್ಹಾ ಚೆಸ್​ ಟ್ರೇನರ್​ ಆಗಿದ್ದಾಳೆ.

ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್​ ಆಡಿದ್ದಾಳೆ. ಈ ವಿಡಿಯೋವನ್ನು ಅಲ್ಲು ಅರ್ಜುನ್​ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್​ ವರ್ಲ್ಡ್​ ರೆಕಾರ್ಡ್​ ನೀಡಿ ಗೌರವಿಸಲಾಗಿದೆ. ಇದು ಅಲ್ಲು ಅರ್ಜುನ್​ ಕುಟುಂಬಕ್ಕೆ ಖುಷಿ ನೀಡಿದೆ.

ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾಗೆ ಇನ್ನೂ 5ರ ಪ್ರಾಯ. ಈ ಪುಟಾಣಿಗೆ ಸಮಂತಾ ಅಕ್ಕಿನೇನಿ ನಟನೆಯ ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಿದ್ದಾಳೆ.

‘ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಅಲ್ಲು ಅರ್ಜುನ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ

ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್​ ಸಹಾಯಕ್ಕೆ ನಿಂತ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ

TV9 Kannada


Leave a Reply

Your email address will not be published. Required fields are marked *