ಶಿಲಾಬಾಲಿಕೆಯೇನೋ ಅನ್ನೋ ಹಾಗೆ ಮೈಮಾಟ ಹೊಂದಿರೋ ನೋರಾ ಫತೇಹಿ ಅಂದ್ರೆನೇ ಸಾಕು ಹರೆಯದ ವಯಸ್ಸಿನ ಯುವಕರೂ… ವಯಸ್ಸಾದ್ರೂ ಯುವಕರ ಮನಸ್ಸಿನ ಮುದುಕರೂ ಒಂದು ಕ್ಷಣ ವ್ಹಾ.. ಕ್ಯಾ ಬಾತ್ ಹೈ ಅಂತಾ ಉದ್ಘಾರ ತೆಗಿತಾರೆ.. ಹಾಯ್​.. ಗರ್ಮಿ ಅಂತಾ ಆಕೆ ನೆಲದ ಮೇಲೆ ಮಲಗಿ ಸೊಂಟ ಮಣಿಸುತ್ತಾ ಸ್ಟೆಪ್ಸ್​ ಆಗ್ತಿದ್ರೆ ಬೆವತು ನೀರಾಗಿ ಬಿಡ್ತಾರೆ.. ಅಂಥ ಸುರ ಸುಂದರಾಗಿ ಬಿಕಿನಿಲಿ ಬಂದ್ರೆ ಕೇಳ ಬೇಕಾ? ಆ ಭರಪೂರ ದೃಶ್ಯವನ್ನ ಕಣ್ತುಂಬಿಕೊಳ್ಳಲು.. ತುದಿಗಾಲ ಮೇಲೆ ನಿಂತವರ ಸಂಖ್ಯೆ ಬದಲು ತಲೆ ಕೂದಲು ಎಣಿಸೋದು ಸುಲಭವಾಗಿ ಬಿಡುತ್ತೆ..! ಅಂಥ ನೋರಾ ಫತೇಹಿ ಬಿಕಿನಿಲಿ ಬಂದ್ರೆ ಬಾಲಿವುಡ್​ ಹೀರೋ ಬಿದ್ದು ಬಿದ್ದು ನಕ್ಕು ಬಿಟ್ಟಿದ್ದಾರೆ.. ಹೀಗೆ ನಕ್ಕಿದ್ದೂ ಈಗ ಸಾಕಷ್ಟು ವೈರಸ್ ಆಗಿದೆ..

ನೋರಾ ಫತೇಹಿ, ವರುಣ್ ಧವನ್

ಹಾಗೆ ನೋಡಿದ್ರೆ ವರುಣ್ ಮತ್ತು ನೋರಾ ಫತೇಹಿ ಇಬ್ಬರೂ ಉತ್ತಮವಾದ ಸ್ನೇಹಿತರು. ಹೀಗಿದ್ದೂ ನೋರಾ ಬಿಕಿನಿ ಫೋಟೋಗೆ ಯಾಕೆ ವರುಣ್ ನಕ್ಕರು ಅನ್ನೋದು ಹಲವರ ಪ್ರಶ್ನೆ.. ವರುಣ್ ನಗೋದಕ್ಕೆ ಕಾರಣವಾದ್ರೂ ಏನು? ನೋರಾ ಫತೇಹಿ ಶೇಪ್ ಏನಾದ್ರೂ ಔಟ್ ಆಗಿದೆಯಾ? ಅವರ ಪರ್ಫೆಕ್ಟ್​ ಫಿಗರ್ ಈಗಿಲ್ವಾ? ಅಥವಾ ನೋರಾ ಮೇಲೇನಾದ್ರೂ ವರುಣ್​ಗೆ ಕೋಪಾನಾ? ಅಥವಾ ಸುಮ್ಮನೆ ಕಾಮಿಡಿಗಾಗಿ ಈ ಥರ ನಕ್ಕಿದ್ದಾರಾ? ಅಂತಾ ನೋಡೋದಾದ್ರೆ.. ಖಂಡಿತವಾಗಿ ಈಗಲೂ ನೋರಾ ಫತೇಹಿ ಫಿಗರ್​ ಅದ್ಭುತವಾಗಿಯೇ ಇದೆ.. ಬೇಕಿದ್ರೆ ನೀವೇ ನೋಡಿ..!

ಹಾಗಿದ್ರೆ ಆಗಿದ್ದೇನು? ವರುಣ್ ಧವನ್ ನಕ್ಕಿದ್ದಾದ್ರೂ ಯಾಕೆ? ಅಂತ ನೋಡಿದ್ರೆ.. ಇಲ್ಲಿ ಆ್ಯಕ್ಚುವಲಿ ನೋರಾ ಫತೇಹಿ ಬಿಕಿನಿ ಹಾಕಿದ್ದಾರೆ.. ಆದ್ರೆ ತಮ್ಮ ಸಹಜ ಸೌಂದರ್ಯದ ದೇಹದ ಮೇಲೆ ಅಲ್ಲ.. ಬದಲಿಗೆ ತಾವೇ ದೊಡ್ಡದಾಗಿ ಹಾಕಿಕೊಂಡಿರೋ ಜಾಕೆಟ್​​ ಮೇಲೆ..! ಹೌದು.. ಹೀಗೆ ಜಾಕೆಟ್​ ಮೇಲೆ ಅವರು ಬಿಕಿನಿ ಹಾಕಿರೋದು ನೋಡಿ.. ಸಿಕ್ಕಾಪಟ್ಟೆ ಜನ ನಕ್ಕಿದ್ದಾರೆ.. 10 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.. ಅವರಷ್ಟೇ ಅಲ್ಲ ಅದನ್ನ ನೋಡಿದ್ರೆ ನೀವು ಕಂಡಿತವಾಗಿ ನಗ್ತೀರಾ..

 

View this post on Instagram

 

A post shared by Nora Fatehi (@norafatehi)

The post ನೊರಾ ಫತೇಹಿ ಬಿಕಿನಿ ವಿಡಿಯೋಗೆ ಬಿದ್ದು ಬಿದ್ದು ನಕ್ಕಿದ್ಯಾಕೆ ವರುಣ್ ಧವನ್? appeared first on News First Kannada.

Source: newsfirstlive.com

Source link