ನೋಟುಗಳಲ್ಲಿ ಲಕ್ಷ್ಮೀ, ಗಣೇಶರ ಚಿತ್ರ ಮುದ್ರಿಸಬಹುದೇ, ಆರ್​ಬಿಐ ನಿಯಮದಲ್ಲೇನಿದೆ? ಇಲ್ಲಿದೆ ಮಾಹಿತಿ – Arvind Kejriwals Lakshmi Ganesh Pitch For Indian Currency Who Designs Rupee Notes And How Does The Process Work What RBI rules says


ಕರೆನ್ಸಿ ನೋಟಿನ ವಿನ್ಯಾಸ ಮಾಡುವುದು ಯಾರು? ಅದಕ್ಕೆ ಅನುಮತಿ ನೀಡುವುದು ಯಾರು? ಭಾರತದ ಕರೆನ್ಸಿ ನೋಟುಗಳ ಇತಿಹಾಸವೇನು? ವಿವರ ಇಲ್ಲಿದೆ.

ನೋಟುಗಳಲ್ಲಿ ಲಕ್ಷ್ಮೀ, ಗಣೇಶರ ಚಿತ್ರ ಮುದ್ರಿಸಬಹುದೇ, ಆರ್​ಬಿಐ ನಿಯಮದಲ್ಲೇನಿದೆ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

Image Credit source: Reuters

ಕರೆನ್ಸಿ ನೋಟಿನಲ್ಲಿ (Currency Notes) ಹಿಂದೂ (Hindu) ದೇವರುಗಳಾದ ಲಕ್ಷ್ಮೀ ಮತ್ತು ಗಣೇಶ ಭಾವಚಿತ್ರವನ್ನು ಮುದ್ರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ‘ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ದೈವಾನುಗ್ರಹ ಬೇಕಾಗುತ್ತದೆ. ಹೀಗಾಗಿ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಚಿತ್ರದ ಜೊತೆ, ಲಕ್ಷ್ಮೀ ಮತ್ತು ಗಣೇಶರ ಚಿತ್ರವನ್ನು ಮುದ್ರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಲಹೆ ನೀಡುತ್ತೇನೆ’ ಎಂದು ಅವರು ಹೇಳಿದ್ದರು. ಜತೆಗೆ ಈ ವಿಚಾರವಾಗಿ ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು. ಹಾಗಿದ್ದರೆ, ಕರೆನ್ಸಿ ನೋಟಿನ ವಿನ್ಯಾಸ ಮಾಡುವುದು ಯಾರು? ಅದಕ್ಕೆ ಅನುಮತಿ ನೀಡುವುದು ಯಾರು? ಭಾರತದ ಕರೆನ್ಸಿ ನೋಟುಗಳ ಇತಿಹಾಸವೇನು? ವಿವರ ಇಲ್ಲಿದೆ.

ಕರೆನ್ಸಿ ನೋಟುಗಳ ವಿನ್ಯಾಸ ಮಾಡುವುದು ಯಾರು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರಕ್ಕೆ ಕರೆನ್ಸಿ ನೋಟುಗಳ ವಿನ್ಯಾಸ ಮಾಡುವ ಅಧಿಕಾರವಿದೆ. ಕರೆನ್ಸಿ ನೋಟು ವಿನ್ಯಾಸದಲ್ಲಿ ಏನೇ ಬದಲಾವಣೆ ಮಾಡುವುದಿದ್ದರೂ ಆರ್​ಬಿಐನ ಕೇಂದ್ರೀಯ ಮಂಡಳಿ ಮತ್ತು ಕೇಂದ್ರ ಸರ್ಕಾರದ ಅನುಮೋದನೆ ಅತ್ಯಗತ್ಯ. ಕೇಂದ್ರ ಸರ್ಕಾರಕ್ಕೆ ಕೂಡ ಕರೆನ್ಸಿ ನೋಟುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡುವ ಅಧಿಕಾರವಿದೆ.

1934ರ ಆರ್​ಬಿಐ ಕಾಯ್ದೆಯ ಸೆಕ್ಷನ್ 25 ರ ಪ್ರಕಾರ, ಕರೆನ್ಸಿ ನೋಟುಗಳ ವಿನ್ಯಾಸವನ್ನು ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸಿನ ಪ್ರಕಾರ ರೂಪಿಸಬೇಕು. ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯಬೇಕು. ಕರೆನ್ಸಿಗಳಿಗೆ ಸಂಬಂಧಿಸಿದ ಮುಖ್ಯವಾದ ಕಾರ್ಯಗಳನ್ನು ಆರ್‌ಬಿಐನ ಕರೆನ್ಸಿ ನಿರ್ವಹಣಾ ವಿಭಾಗ ನಿರ್ವಹಿಸುತ್ತದೆ. ಕರೆನ್ಸಿ ನಿರ್ವಹಣೆ ಎಂದರೆ, ಕರೆನ್ಸಿ ನೋಟುಗಳನ್ನು ಮತ್ತು ಕಾಯಿನ್​ಗಳನ್ನು ಚಲಾವಣೆಗೆ ತರುವುದು ಹಾಗೂ ಹಳೆಯದಾಗಿರುವ ಕರೆನ್ಸಿಗಳನ್ನು ವಾಪಸ್ ಪಡೆದುಕೊಳ್ಳುವುದಾಗಿದೆ.

TV9 Kannada


Leave a Reply

Your email address will not be published.