‘ನೋಟ್​ನಲ್ಲಿ ಗಾಂಧಿ ಫೋಟೋ ಬೇಡ’ ಎಂದ ಕಾಂಗ್ರೆಸ್​ ನಾಯಕ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ರಾಮುಲು ಕಾರು ತಡೆದು ರೈತರ ಆಕ್ರೋಶ
ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಸಾವಿನ ಘಟನೆ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ರು. ಸಾರಿಗೆ ಸಚಿವ ಶ್ರೀರಾಮುಲು ಅವ್ರ ಕಾರನ್ನ ತಡೆದು ಮಸ್ಕಿ ಪಟ್ಟಣದ ರೈತ ಸಂಘದವರು ಪ್ರತಿಭಟನೆ ನಡೆಸಿದ್ರು. ಸಚಿವರ ಕಾರು ತಡೆದ ರೈತರು ಶ್ರೀರಾಮುಲು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನ ಕೂಗಿದ್ರು. ರೈತರ ಮೇಲೆ ಕ್ರೂರತ್ವ ತೋರಿದ್ರು, ಈವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲವ್ಯಾಕೆ..? ಅನ್ನದಾತರ ಜೀವಕ್ಕೆ ಬೆಲೆ ಇಲ್ವಾ ಅಂತ ಸಚಿವರ ವಿರುದ್ಧ ಕಿಡಿಕಾರಿದ್ರು. ಅಲ್ಲದೇ, ರೈತರ ಮೇಲೆ ಅಹಂ ತೋರಿಸುವ ಬಿಜೆಪಿ ಪಾಳಯದವ್ರು ದೇಶ ಬಿಟ್ಟು ಹೋಗಲಿ, ಶ್ರೀರಾಮುಲು ನೀವು ರಾಜ್ಯ ಬಿಟ್ಟು ತೊಗಲಿ ಅಂತ ಅಕ್ರೋಶ ಹೊರಹಾಕಿದ್ರು.

ನಿರ್ದೇಶಕ ಎಸ್. ನಾರಾಯಣ್ ಹೆಸರಿನಲ್ಲಿ ವಂಚನೆ
ಸ್ಯಾಂಡಲ್‍ವುಡ್ ನಟ, ನಿರ್ದೇಶಕ ಎಸ್. ನಾರಾಯಣ್ ಅವರ ಹೆಸರಿನಲ್ಲಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಎಸ್.ನಾರಾಯಣ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ನಿರ್ದೇಶಕನ ಹೆಸರು ಹೇಳಿಕೊಂಡು ಕಿಡಿಗೇಡಿಗಳು ದುಡ್ಡು ಕೀಳುತ್ತಿದ್ದಾರೆ. ಈ ವಿಚಾರವಾಗಿ ಎಸ್.ನಾರಾಯಣ್ ವೀಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಹೆಸರಿನಲ್ಲಿ ಹ್ಯಾಕರ್ಸ್‍ಗಳು ದುಡ್ಡು ಕೇಳುತ್ತಿದ್ದಾರೆ. ನನ್ನ ಹೆಸರಿನಲ್ಲಿ ದುಡ್ಡು ಕೇಳಿದರೆ ಕೊಡಬೇಡಿ. ಯಾರಾದರೂ ಹಣವನ್ನು ಕೊಟ್ಟು ಮೋಸ ಹೋದರೆ ನಾನು ಜವಾಬ್ಧಾರನಲ್ಲ. ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ. ನಾನು ಪೊಲೀಸ್‍ಗೆ ದೂರು ಕೊಟ್ಟಿದ್ದೇನೆ ಎಂದು ಎಸ್.ನಾರಾಯಣ್ ವೀಡಿಯೋ ಮಾಡಿ ಮನವಿ ಮಾಡಿದ್ದಾರೆ.

ನೋಟ್​ನಲ್ಲಿ ಗಾಂಧೀಜಿ ಪೋಟೋ ಬೇಡ ಎಂದ ಕೈ ಶಾಸಕ
500 ರೂಪಾಯಿ 2 ಸಾವಿರ ರೂಪಾಯಿ ನೋಟುಗಳಿಂದ ಮಹಾತ್ಮಾ ಗಾಂಧಿಯವರ ಫೋಟೋ ತೆಗೆಯಿರಿ. ಏಕೆಂದರೆ ಅದನ್ನು ಭ್ರಷ್ಟಾಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಹೀಗಂತ ರಾಜಸ್ಥಾನ ಕಾಂಗ್ರೆಸ್‌ ಶಾಸಕ ಭರತ್‌ ಸಿಂಗ್‌ ಕುಂದನ್‌ಪುರ್‌ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇದು ಗಾಂಧಿಜೀಗೆ ಮಾಡುವ ಅವಮಾನ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗಾಂಧಿಯವರು ಸತ್ಯದ ಪ್ರತೀಕ ಎಂದು ಬಣ್ಣಿಸಿರುವ ಭರತ್‌ ಸಿಂಗ್‌, 500 ರೂಪಾಯಿ 2 ಸಾವಿರ ರೂಪಾಯಿ ನೋಟುಗಳನ್ನು ಲಂಚ ನೀಡಲು, ಬಾರ್‌ಗಳಲ್ಲಿ ಮದ್ಯದ ಪಾರ್ಟಿಗಳಿಗೆ ನೀಡಲಾಗುತ್ತದೆ.. ಇದರಿಂದ ಅವರ ಘನತೆಗೆ ಧಕ್ಕೆ ತಂದಂತೆ ಆಗುತ್ತದೆ ಅಂತ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಇಂದು ಪೊಲೀಸರಿಂದ ಅಜಯ್‌ ಮಿಶ್ರಾ ವಿಚಾರಣೆ!
ಲಖೀಂಪುರ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಇಂದು ಪೊಲೀಸರ ಮುಂದೆ ಹಾಜರಾಗಲಿದ್ದಾರೆ. ಈ ಬಗ್ಗೆ ಸ್ವತಃ ಕೇಂದ್ರ ಸಚಿವ ಅಜಯ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಶಿಶ್‌ ಮಿಶ್ರಾಗೆ ಪೊಲೀಸರು ಸಮನ್ಸ್ ನೀಡಿದ್ದರು. ಆದರೆ, ಆಶಿಶ್‌ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಹೊಸ ಸಮನ್ಸ್‌ ನೀಡಿರುವ ಪೊಲೀಸರು ಇಂದು ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಿದ್ದಾರೆ. ಜತೆಗೆ, ವಿಚಾರಣೆಗೆ ಹಾಜರಾಗದಿದ್ದರೆ ಆಶಿಶ್‌ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗಡಿಯಲ್ಲಿ ಮತ್ತೆ ಚೀನಾ ಕ್ಯಾತೆ
ಭಾರತ ಮತ್ತು ಚೀನಾ ಸೈನಿಕರು ಅರುಣಾಚಲ ಪ್ರದೇಶದ ತವಾಂಗ್ ಬಳಿಯ ಯೆಂಗ್‌ಟ್ಸೆ ಎಂಬಲ್ಲಿ ಮುಖಾಮುಖಿಯಾಗಿದ್ದಾರೆ. ಚೀನಾ ಸೈನಿಕರು ಭಾರತದ ಗಡಿಯನ್ನು ಅತಿಕ್ರಮಿಸುವುದನ್ನು ತಡೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದೆ, ಎರಡೂ ಕಡೆಯ ಸೈನಿಕರು ತಮ್ಮ ಸ್ಥಾನಗಳಿಗೆ ಮರಳಿದ್ದಾರೆ ಎಂದು ಮೂಲಗಳು ಹೇಳಿವೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಈ ಘಟನೆ ನಡೆದಿದ್ದು. ಪೂರ್ವ ಲಡಾಖ್‌ನಲ್ಲಿನ ಸಂಘರ್ಷದ ಸಂಬಂಧ ಎರಡೂ ಕಡೆಯ ಸೇನಾಧಿಕಾರಿಗಳ ನೇತೃತ್ವದಲ್ಲಿ ಮುಂದಿನ ವಾರ ಸಭೆ ನಡೆಯಲಿದೆ. ಆದರೆ ಅದಕ್ಕೂ ಮುನ್ನವೇ ಈ ಮುಖಾಮುಖಿ ನಡೆದಿದೆ.

ಯಾರೋ ನೋಡಿ.. ನೀರನ್ನ ಆಚೆ ಇಟ್ಟಿದ್ದಾರೆ


ನೀರು ಯಾರಿಗೆ ತಾನೆ ಬೇಡ ಹೇಳಿ. ಒಂದು ಹನಿ ನೀರು ಕುಡಿದ್ರೆ, ಎಲ್ಲಿಲ್ಲದ ನೆಮ್ಮದಿ ಸಿಕ್ಕಂತೆ ಆಗುವುದಂತೂ ಖಚಿತ.. ಹಾಗೆಯೇ.., ಈ ಆನೆ ಮರಿ ಕೂಡ ನೀರಿಗಾಗಿ ಪರದಾಡಿತ್ತು, ಆ ನಂತರ ತಾನಿದ್ದ ಗೋಡೆಯ ಹೊರಗೆ ಒಂದು ಬಕೆಟ್‌ನಲ್ಲಿ ನೀರು ಇರುವುದು ಗೊತ್ತಾಗಿದೆ. ಕೂಡಲೇ ತನ್ನ ಸೊಂಡಲಿನ ಸಹಾಯದಿಂದ ಹೊರಗಡೆ ಇಟ್ಟಿದ್ದ ನೀರನ್ನ ತೆಗೆದುಕೊಂಡು ಕುಡಿದಿದೆ. ಎರಡು ಬಾರಿ ನೀರು ಕುಡಿದ ಆನೆ ಮರಿಗೆ ಸಂತೋಷ ದುಪ್ಪಟ್ಟಾಗಿತ್ತು. ನೀರಿನ ದಾಹ ತೀರಿಸಿಕೊಳ್ಳಲು ಆನೆ ಮರಿ ಮಾಡಿದ ಸರ್ಕಸ್‌ ಎಲ್ಲರ ಮನಗೆದ್ದಿದೆ.. ಇನ್ನು ಆನೆಮರಿಯ ಈ ಚಾಣಾಕ್ಷ ಬುದ್ಧಿಗೆ ನೆಟ್ಟಿಗರು ಪುಲ್‌ ಫಿದಾ ಆಗಿದ್ದಾರೆ.

ಮುತ್ತೊಂದ ತಂದಿರುವೆ ಹತ್ತಿರ.. ಹತ್ತಿರ.. ಬಾ


ಮನುಷ್ಯರು ಪ್ರೀತಿ ಹೆಚ್ಚಾದ್ರೆ ಮುತ್ತು ಕೊಡುವುದನ್ನ ನೋಡಿದ್ದೇವೆ.. ಕೇಳಿದ್ದೇವೆ.. ಪಕ್ಷಿಗಳು ಮುತ್ತಿಡುವುದನ್ನ ನೋಡಿದ್ದೇವೆ.., ಆದ್ರೆ ಈ ವಿಡಿಯೋ ಆನೆಮರಿಗಳು ಪರಸ್ಪರ ಒಂದಕ್ಕೊಂದು ಪ್ರೀತಿ ಹೆಚ್ಚಾಗಿ ಮುದ್ದಾಡಿವೆ. ಅದಷ್ಟೇ ಅಲ್ಲದೇ ತಮ್ಮ ಸೊಂಡಿಲಿನಿಂದ ಆ ಎರಡು ಆನೆಗಳು ಒಂದಕ್ಕೊಂದು ಮತ್ತಿಟ್ಟುಕೊಂಡಿದೆ. ಯಾವ ಹಿರೋಯಿನ್‌ಗಳಿಗೆ ನಾವೇನ್‌ ಕಮ್ಮಿಯಿಲ್ಲ ಎಂಬಂತೆ ಮುತ್ತಿನ ಮಳೆಯನ್ನೇ ಸುರಿಸಿವೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಆನೆ ಮರಿಗಳ ಪ್ರೀತಿಗೆ ಸಖತ್‌ ಫಿದಾ ಆಗಿದ್ದಾರೆ.

ವಯಸ್ಸು ಕೇವಲ ಸಂಖ್ಯೆ, ಪ್ರೀತಿಗೆ ಅಲ್ಲ


ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ, ನಿಜವಾದ ಪ್ರೀತಿಗೆ ಯಾವುದೇ ಮಿತಿ ಇರುವುದಿಲ್ಲ ಎನ್ನುವುದಕ್ಕೆ ವೃದ್ದ ಜೋಡಿಯೊಂದು ಸಾಕ್ಷಿಯಾಗಿದೆ. ಆನ್​ಲೈನ್​ ಡೇಟಿಂಗ್​ ಆ್ಯಪ್​ನಲ್ಲಿ ಶುರವಾದ ವೃದ್ಧರ ಪ್ರೇಮ ಕಹಾನಿ ವಿವಾಹಕ್ಕೆ ತಿರುಗಿದೆ. ಜಿಮ್​ ಆಡಮ್ಸ್ ಮತ್ತು ಆಡ್ರೆ ಕೌಟ್ಸ್ ಆನ್‌ಲೈನ್‌ನಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಭೇಟಿ ಆಗಿದ್ರು, ಭೇಟಿಯಾದ 8 ತಿಂಗಳ ನಂತರ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಅಬ್ಬರದಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾದ ಇಬ್ಬರ ಪ್ರೇಮ. ದಿನಗಳೆದಂತೆ ಹೆಚ್ಚಾಗಿತ್ತು, ಲಾಕ್‌ಡೌನ್‌ ಸಡಿಲಿಕೆಯಾಗಿದ್ದೇ ತಡ ವಿವಾಹವಾಗಿದ್ದಾರೆ.

ಆರ್‌ಸಿಬಿ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಶತಕದ ಜೊತೆಯಾಟದ ನೆರವಿನಿಂದ ಆಸಿಬಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿದೆ. ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶ್ರೀಕರ್ ಭರತ್ ಗೆಲುವಿನ ರೂವಾರಿ ಎನಿಸಿದರು. ಆಗಲೇ ಪ್ಲೇ-ಆಫ್ ಖಚಿತಪಡಿಸಿರುವ ಎರಡು ತಂಡಗಳ ಬಲಾಬಲ ಪ್ರದರ್ಶನಕ್ಕಷ್ಟೇ ಈ ಪಂದ್ಯವು ಸೀಮಿತಗೊಂಡಿತ್ತು. ವಿರಾಟ್ ಕೊಹ್ಲಿ ಬಳಗ ಅಕ್ಟೋಬರ್ 11ರಂದು ನಡೆಯಲಿರುವ ಎಲಿಮಿನೇಟರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಯುವರಾಜ್‌ ಸಿನಿಮಾ ಕೈ ಬಿಟ್ಟ ಕರಣ್ ಜೋಹರ್
ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡುವೆ ಸಿನಿಮಾ ಒಂದಕ್ಕೆ ಸಂಬಂಧಿಸಿದಂತೆ ಕಿರಿಕ್ ಆಗಿದ್ದು ಕರಣ್ ಜೋಹರ್ ತಾವು ನಿರ್ಮಿಸಲಿದ್ದ ಸಿನಿಮಾವನ್ನು ಕೈಬಿಟ್ಟಿದ್ದಾರೆ. ಕ್ರಿಕೆಟಿಗ ಯುವರಾಜ್ ಸಿಂಗ್ ಜೀವನ ಆಧರಿಸಿದ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಲಿದ್ದರು, ಆದರೆ ಯುವರಾಜ್ ಸಿಂಗ್ ಮಾಡಿದ ಡಿಮ್ಯಾಂಡ್‌ನಿಂದಾಗಿ ಕರಣ್ ಜೋಹರ್ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ.

News First Live Kannada

Leave a comment

Your email address will not be published. Required fields are marked *