ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಯ ನಡುವೆಯೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ಜೋರಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್​​ವೈ, ದೆಹಲಿಗೆ ಯಾರು ಹೋಗಿ ಬಂದ್ರೆ ಅದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನೆಹರೂ ಅವರು 57ನೇ ಪುಣ್ಯ ತಿಥಿ ಅಂಗವಾಗಿ ಗೌರವ ಸಲ್ಲಿಸಿ ಮಾತನಾಡಿದ ಸಿಎಂ ಅವರು, ನನ್ನ ಮುಂದೆ ಇರುವುದು ಕೋವಿಡ್-19 ವಿಚಾರ ಮಾತ್ರ. ಇದು ಮಾತ್ರ ನನ್ನ ಆಯ್ಕೆ. ದೆಹಲಿಗೆ ಯಾರೋ ಹೋಗಿ ಬಂದ್ರೆ ಅದು ನನಗೆ ಗೊತ್ತಿಲ್ಲ. ಹೋಗಿದ್ದವರಿಗೆ ಉತ್ತರ ಕೊಟ್ಟು ಕಳುಹಿಸಿದ್ದಾರೆ ತಾನೇ. ಅದೂ ನಿಮಗೆ ಎಲ್ಲಾ ಗೊತ್ತಿಗೆ ತಾನೇ. ರಾಜ್ಯದಲ್ಲಿ ಕೊರೊನಾ ಕಾರಣದಿಂದ ಸಾವು ನೋವು ಜಾಸ್ತಿ ಆಗುತ್ತಿದೆ. ಅದನ್ನ ತಡೆಯುವ ಕೆಲಸ ಮಾಡಬೇಕು. ಎಲ್ಲರೂ ಒಟ್ಟಾಗಿ ಹೋರಾಡುವುದು ಈಗ ಅನಿವಾರ್ಯ ಎಂದರು. ಇದೇ ವೇಳೆ ಶಾಸಕಾಂಗ ಸಭೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಅದು ನಿಮ್ಮ ಮುಂದೆ ಹೇಳುವ ವಿಚಾರವಲ್ಲ ಎಂದರು.

The post ‘ನೋಡಣ್ಣ ಒಂದು ಮಾತ್​ ಹೇಳ್ತೀನಿ ಕೇಳು’ – ಸಿಎಂ ಬದಲಾವಣೆ ಬಗ್ಗೆ ಉತ್ತರ ಕೊಟ್ಟ ಬಿಎಸ್​ವೈ appeared first on News First Kannada.

Source: newsfirstlive.com

Source link