ನೋಡಿ ಸ್ವಾಮಿ ಇವನು ಇರೋದೆ ಹೀಗೆ.. ಹೀಗೆ ಅಂತಿರೋ ಇವನು ಯಾರು?!

ನೋಡಿ ಸ್ವಾಮಿ ಇವನು ಇರೋದೆ ಹೀಗೆ.. ಹೀಗೆ ಅಂತಿರೋ ಇವನು ಯಾರು?!

ಕವಲು ದಾರಿಯಲ್ಲಿ ಕನ್ನಡಿಗರ ಮನದ ಗೆದ್ದಿದ್ದ ರಿಷಿ ಈಗ ದ್ವಿಭಾಷೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಈಗಾಗಲೇ ಚಿತ್ರ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದ್ದು.. ಇಂದು ಸರ್​ಪ್ರೈಸ್ ಆಗಿ ಚಿತ್ರದ ಪೋಸ್ಟರ್​ ಅನ್ನ ರಿಷಿ ರಿಲೀಸ್ ಮಾಡಿದ್ದಾರೆ. ಲೆಜೆಂಡರಿ ಶಂಕರ್ ನಾಗ್ ಅವರ ಪ್ರಖ್ಯಾತ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ಅನ್ನೋ ಚಿತ್ರ ನೆನಪಿಸುವಂತೆ  ನೋಡಿ ಸ್ವಾಮಿ ಇವನು ಇರೋದೆ ಹೀಗೆ ಅಂತ ಕನ್ನಡದಲ್ಲಿ ಹೆಸರಿಟ್ಟಿದ್ದಾರೆ. ತೆಲುಗಿನಲ್ಲಿ ಈ ಚಿತ್ರಕ್ಕೆ ವದ್ದುರಾ ಸೋದರ ಅಂತಾ ಹೆಸರನ್ನ ಇಡಲಾಗಿದೆ.

ನೀವು ಸಿಹಿಯ ರುಚಿಯನ್ನ ಮರೆತಾಗ.. ಕಹಿಯೇ ಸಿಹಿಯಾಗುತ್ತೆ.. ಇಂಥದ್ದೇ ಸಿಹಿ ಕಹಿ ಸಿನಿಮಾವನ್ನ ನಿಮಗೆ ನೀಡುತ್ತಿದ್ದೇವೆ ಅಂತಾ ರಿಷಿ ಬರೆದಿದ್ದು, ಚಿತ್ರದ ಪೋಸ್ಟರ್​ ಕೂಡ ವಿಭಿನ್ನವಾಗಿದೆ.

ರಿಷಿ ಅಭಿನಯದ ಈ ಚಿತ್ರವನ್ನ ಇಸ್ಲಾವುದ್ದೀನ್ ಅನ್ನೋರು ನಿರ್ದೇಶಿಸಿದ್ದು, ಅಮ್ರೇಜ್ ಸೂರ್ಯವಂಶಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಂಪೂರ್ಣ ಮುಕ್ತಾಯವಾದ ಬಳಿಕ ಚಿತ್ರ ತಂಡ ರಿಲೀಸ್ ದಿನಾಂಕ ಘೋಷಿಸೋ ಸಾಧ್ಯತೆ ಇದೆ.

The post ನೋಡಿ ಸ್ವಾಮಿ ಇವನು ಇರೋದೆ ಹೀಗೆ.. ಹೀಗೆ ಅಂತಿರೋ ಇವನು ಯಾರು?! appeared first on News First Kannada.

Source: newsfirstlive.com

Source link