ಕೇರಳ: ​ಕ್ರಿಕೆಟ್ ಅನ್ನೋ ಕ್ರೀಡೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂಥ ಆಟ. ಪುಟ್ಟ ಹುಡುಗನಿಂದ ಹಿಡಿದು ಹಣ್ಣು ಹಣ್ಣು​ ಅಜ್ಜರ ತನಕ ಎಲ್ಲರೂ ಕ್ರಿಕೆಟ್​ ಅಂದ್ರೆ ಸಾಕು ರಿಮೋಟ್​ ಕೈನಲ್ಲಿ ಹಿಡಿದು ಕೂತುಬಿಡ್ತಾರೆ. ಅಷ್ಟರ ಮಟ್ಟಿಗೆ ಈ ಆಟದ ಕ್ರೇಜ್ ಇದೆ​. ಇದೀಗ, ಸಾಮಾಜಿಕ ಜಾಲತಾಣದಲ್ಲಿ 6 ವರ್ಷದ ಪುಟ್ಟ ಬಾಲಕಿಯೊಬ್ಬಳು ಭಯವಿಲ್ಲದೇ, ಬ್ಯಾಟ್​ ಎತ್ತಿ ಸಿಕ್ಸ್​, ಬೌಂಡರಿಗಳನ್ನ ಬಾರಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೇರಳದ ಕೋಯಿಕೋಡ್​ ಮೂಲದ ಮೆಹಕ್​ ಫಾತಿಮಾ ಎಂಬ 6 ವರ್ಷದ ಬಾಲಕಿ, ಕ್ರಿಕೆಟ್​ ಪ್ಯಾಡ್ಸ್​, ಹೆಲ್ಮೆಟ್​ ಹಾಕಿಕೊಂಡು ಎದುರು ಬರುತ್ತಿರೋ ಚೆಂಡನ್ನ ಸಖತ್​ ಕಾನ್ಫಿಡೆಂಟ್​ ಆಗಿ ಬೀಸುತ್ತಿರೋ ವಿಡಿಯೋ ಫುಲ್​ ವೈರಲ್​ ಆಗಿದೆ. ಅಲ್ಲದೇ, ಈ ಮಗು ಮುಂದೆ ನಮ್ಮ ಮಹಿಳೆಯರ ಕ್ರಿಕೆಟ್​ ತಂಡಕ್ಕೆ ಸೇರ್ಪಡೆಯಾಗೋ ಎಲ್ಲಾ ಲಕ್ಷಣಗಳು ಇವೆ ಅಂತ ಜನರು ಕಮೆಂಟ್​ ಮಾಡ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಅಲ್ಲದೆ ಭಾರತೀಯ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೊಡ್ರಿಗ್ಯಸ್​ ಅವರ ಗಮನವನ್ನೂ ಸೆಳೆದಿದೆ. ಸೂಪರ್ಬ್​​​ ಮೆಹಕ್ ಅಂತ ಅವರು ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Biju George (@shams_oftabriz)

The post ನೋಡೋಕಷ್ಟೇ 6 ವರ್ಷದ ಪುಟ್ಟ ಪೋರಿ.. ಬ್ಯಾಟ್ ಎತ್ತಿದ್ರೆ ಮಾತ್ರ ಸಿಕ್ಸರ್​​, ಬೌಂಡರಿ appeared first on News First Kannada.

Source: newsfirstlive.com

Source link