ದೊಡ್ಮನೆಯಲ್ಲಿ ಕಣ್ಮಣಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಶಮಂತ್, ಕಣ್ಮಣಿಗಾಗಿಯೇ ಹಾಡೊಂದನ್ನು ಬರೆದಿದ್ದರು. ಈ ಹಾಡನ್ನು ಕ್ಯಾಮೆರಾ ಮುಂದೆ ದಿವ್ಯಾ ಉರುಡುಗ ಸಾರಥ್ಯದಲ್ಲಿ ಶಮಂತ್ ಹಾಡಿದ್ದರು. ಈ ವೇಳೆ ನನ್ನನ್ನು ಕಡೆಗಣಿಸಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಶಮಂತ್ ವಿರುದ್ಧ ಬೇಸರಗೊಂಡಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಬಾತ್‍ರೂ ಏರಿಯಾದ ಕ್ಯಾಮೆರಾ ಮುಂದೆ ಶಮಂತ್ ಕಣ್ಮಣಿ ಕುರಿತಂತೆ ಹಾಡೊಂದನ್ನು ಹಾಡಿದ್ದು, ದಿವ್ಯಾ ಉರುಡುಗ ಹಾಡಿಗೆ ತಕ್ಕಂತೆ ತಾಳ ಹಾಕಿದ್ದಾರೆ.

ನಂತರ ಬೇಸರಗೊಂಡಿದ್ದ ಪ್ರಶಾಂತ್‍ರನ್ನು ಗಮನಿಸಿದ ಶಮಂತ್ ಬಾತ್ ರೂ ಏರಿಯಾಗೆ ಕರೆದುಕೊಂಡು ಹೋಗಿ, ದಿವ್ಯಾ ಉರುಡುಗಗೆ ತಾಳ ಹಾಕಲು ಹೇಳಿದ್ದೆ, ಅರವಿಂದ್ ಬ್ರೋ ಬೇಗ ಹಾಡುತ್ತೀಯಾ ನಮಗೆಲ್ಲಾ ನಿದ್ದೆ ಬರುತ್ತಿದೆ ಅಂತ ಹೇಳಿದ್ರು ಹಾಗಾಗಿ ಸಾಂಗ್ ಹಾಡಿದೆ ಅಂತ ಹೇಳುತ್ತಾರೆ.

ಪ್ರಶಾಂತ್ ಬ್ರೋ ಬನ್ನಿ ಎಂದು ಕರೆಯಬೇಕಾಗಿತ್ತು. ಧ್ವನಿಗಿಂತ ನಮ್ಮ ನಡವಳಿಕೆ ಹೆಚ್ಚಾಗಿ ಮಾತನಾಡುತ್ತದೆ. ನಿನ್ನ ನಡುವಳಿಕೆಯಲ್ಲಿ ಗೊತ್ತಾಗುತ್ತದೆ. ನಿನ್ನ ತೆಲೆಯಲ್ಲಿ ಏನಿದೆ. ನಿನ್ನ ಎದೆಯಲ್ಲಿ ಏನಿದೆ ಎಂದು ಪ್ರಶಾಂತ್ ಹೇಳುತ್ತಾರೆ. ಆಗ ಶಮಂತ್ ನಾನು ಆಗಲಿಂದಲೂ ಯಾಕೆ ಸೈಲೆಂಟ್ ಆಗಿದ್ದೀರಾ ಎಂದು ಕೇಳುತ್ತಲೆ ಇದ್ದೇನೆ. ಈಗ ಹಾಡು ಹೇಳಲು ಕರೆಯಲಿಲ್ಲ ಎಂದು ಇಷ್ಟೊಂದು ಬೇಜಾರ? ಎಂದು ಪ್ರಶ್ನಿಸುತ್ತಾರೆ.

ಆಗ ಪ್ರಶಾಂತ್ ಹಾಡೊಂದೇ ಅಲ್ಲ, ನೋಡುತ್ತಿದ್ದೇನೆ ನಿನ್ನ ಆಟ ಎನ್ನುತ್ತಾರೆ. ಅಯ್ಯೋ ಬ್ರೋ ಏನು ಆಟಯೆಲ್ಲಾ, ಹೊಸದಾಗಿ ಏನೇನೋ ಅಂದುಕೊಂಡ್ರಾ ಎಂದು ಶಮಂತ್ ಹೇಳುತ್ತಾ, ಕಣ್ಮಣಿಗೆ ಹಾಡನ್ನು ಹೇಳಿದೆ ಅಷ್ಟೇ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತು, ನೀನು ಹಾಡಿನ ಫಸ್ಟ್ ಲೈನ್ ಬರೆಯಬೇಕಾದರೆ ನಾನು ಇದ್ದೆ. ಜಡೆ ಕಟ್ಟುವುದು ಎಲ್ಲೋ, ಹೂವಿನ ಹಾರ ಕಟ್ಟುವುದು ಎಲ್ಲೋ, ಹಾಕುವುದು ಎಲ್ಲೋ ಎಂದು ಹೇಳುತ್ತಾರೆ.

ಏನೇನೋ ಯೋಚನೆ ಮಾಡುತ್ತೀರಾ ನೀವು ಎಂದು ಶಮಂತ್ ಮತ್ತೆ ಹೇಳುತ್ತಾರೆ. ಆಗ ಪ್ರಶಾಂತ್, ಏನೇನೋ ಯೋಚನೆ ಮಾಡಿ ಹೇಳುತ್ತಿಲ್ಲ. ನಡೆದಿರುವುದನ್ನು ಹೇಳುತ್ತಿದ್ದೇನೆ ಅಷ್ಟೇ. ಕಣ್ಮಣಿಗೆ ಹಾಡು ಹೇಳಲು ಒಂದು ಲೈನ್ ಬೇರೆ ಕೊಟ್ಟಿದ್ದೇನೆ. ಅದರಲ್ಲಿ ನನ್ನ ಇನ್ವಾಲ್‍ಮೆಂಟ್ ಕೂಡ ತೋರಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಒಂದು ಸಲ ಮದ್ವೆ ಆದ್ಮೇಲೆ ಯಾವತ್ತು ಮೋಸ ಮಾಡಲ್ಲ: ವೈಷ್ಣವಿ

The post ನೋಡ್ತಾ ಇದ್ದೀನಿ ನಿನ್ನ ಆಟ ಎಲ್ಲ – ಶಮಂತ್‍ಗೆ ಪ್ರಶಾಂತ್ ಟಾಂಗ್ appeared first on Public TV.

Source: publictv.in

Source link