ಯಾದಗಿರಿ: ಹಾಸ್ಟೆಲ್​​​ಗಳಿಗೆ ಬೆಡ್ ಸಾಗಿಸುತ್ತಿದ್ದ ಲಾರಿ ಮೇಲೆ ವಿದ್ಯುತ್ ತಂತಿ ಬಿದ್ದು ಲಾರಿ ಹೊತ್ತಿ ಉರಿದ ಘಟನೆ ಯಾದಗಿರಿ ನಗರದ ಹೊಸ ಸರ್ಕಿಟ್ ಹೌಸ್ ಬಳಿ ನಡೆದಿದೆ.

ನಗರದ ಬಿಸಿಎಂ ಹಾಸ್ಟೆಲ್​ಗೆ ಪೂರೈಕೆ ಮಾಡಲು ಬೆಡ್ ಹೊತ್ತು ಸಾಗಿದ್ದ ಲಾರಿ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೊನೆಗೂ ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಎರಡು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಲಾರಿ ತುಂಬ ಬೆಡ್ ಇದ್ದ ಬೆಂಕಿ ಕೆನ್ನಾಲಿಗೆಯನ್ನು ಹತೋಟಿಗೆ ತರಲು ಸಿಬ್ಬಂದಿ ಸಾಕಷ್ಟು ಶ್ರಮವಹಿಸಬೇಕಾಯ್ತು. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ನೋಡ ನೋಡುತ್ತಿದ್ದಂತೆಯೇ ನಡುರಸ್ತೆಯಲ್ಲಿ ಹೊತ್ತಿ ಉರಿದ ಲಾರಿ appeared first on News First Kannada.

Source: newsfirstlive.com

Source link