ಮುಂಬೈ: ನಗರದ ಘಾಟಕೋಪರ ಪಶ್ಚಿಮದಲ್ಲಿ ಪಾರ್ಕ್ ಮಾಡಿದ್ದ ಕಾರು ಬಾವಿಗೆ ಬಿದ್ದಿರುವ ಘಟನೆ ನಡೆದಿದ್ದು, ವೀಡಿಯೋ ಫುಲ್ ವೈರಲ್ ಆಗಿದೆ.

ಕಳೆದ ಹಲವು ವರ್ಷಗಳ ಹಿಂದೆ ಬಾವಿಯನ್ನು ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಿದ್ದು, ಅಪಾರ್ಟಮೆಂಟ್ ಸೊಸೈಟಿಯ ಜನ ಅದರ ಮೇಲೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ರಭಸಕ್ಕೆ ಸಿಮೆಂಟ್ ಕಾಂಕ್ರೀಟ್ ಕುಸಿದು, ಅದರ ಮೇಲೆ ನಿಂತಿದ್ದ ಕಾರು ಬಾವಿ ಪಾಲಾಗಿದೆ. ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಘಟನೆ ಬಳಿಕ ಬಾವಿಯಲ್ಲಿದ್ದ ನೀರನ್ನು ಹೊರ ತಗೆದು ಕ್ರೇನ್ ಬಳಿಸಿ, ಕಾರನ್ನು ಹೊರ ತೆರೆಯುವ ಕಾರ್ಯ ನಡೆದಿದೆ. ಪಕ್ಕದಲ್ಲಿ ಎರಡೂ ಬದಿ ಕಾರ್ ಗಳು ನಿಂತಿದ್ದರೂ ಏನೂ ಆಗಿಲ್ಲ ಆದರೆ ಈ ಕಾರ್ ಮಾತ್ರ ಮುಳುಗಿದೆ.

ಮುಂಗಾರು ಚುರುಕಾಗಿರುವುದರಿಂದ ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮುಂಬೈನಲ್ಲಿ ಸಹ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.

The post ನೋಡ ನೋಡುತ್ತಿದ್ದಂತೆ ಬಾವಿ ಪಾಲಾದ ಕಾರು appeared first on Public TV.

Source: publictv.in

Source link