ದೇಶೀಯವಾಗಿ ಅಭಿವೃದ್ಧಿಪಡಿಸಿರುವ ನೆಲದಿಂದ ನಭಕ್ಕೆ ಚಿಮ್ಮುವ (Vertical Launch Short Range Surface-to-Air Missile – VLSRSAM) ಮಾಡಬಹುದಾದ ನೂತನ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಸಕ್ಸಸ್ ಆಗಿದೆ.
ಡಿಆರ್ಡಿಒ ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಕರಾವಳಿಯ ಚಾಂಡಿಪುರ್ನಲ್ಲಿ ನಡೆಸಲಾಯ್ತು. ಈ ಕ್ಷಿಪಣಿಯ ಕಾರ್ಯವ್ಯಾಪ್ತಿ 15 ಕಿ.ಮೀ ಆಗಿದೆ ಎಂದು ಡಿಆರ್ಡಿಒ ಸಂಸ್ಥೆ ತಿಳಿಸಿದೆ. ಅಲ್ಲದೆ ಈ ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸಲಾಗುವುದು ಅಂತಾ ಡಿಆರ್ಡಿಒ ತಿಳಿಸಿದೆ.
ಕ್ಷಿಪಣಿಯು ಅಂದುಕೊಂಡಂತೆ ಕೆಲಸ ನಿಭಾಯಿಸಿದೆ. ಪರೀಕ್ಷಾ ಉಡಾವಣೆಯನ್ನು ಡಿಆರ್ಡಿಒ ಮತ್ತು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿದ್ದಾರೆ. ಇನ್ನು ಇದರ ಮೊದಲ ಪ್ರಯೋಗವು ಪೆಬ್ರವರಿ 22, 2021 ರಂದು ನಡೆಸಲಾಗಿತ್ತು.