Nancy Pelosi’s Taiwan visit ನ್ಯಾನ್ಸಿ ಪೆಲೋಸಿ ತನ್ನ ಏಷ್ಯಾ ಪ್ರವಾಸದ ವೇಳೆ ತೈವಾನ್ಗೆ ಭೇಟಿ ನೀಡಿದರೆ ಅಮೆರಿಕ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಮಂಗಳವಾರ ಎಚ್ಚರಿಕೆ ನೀಡಿದ್ದರ ಬೆನ್ನಲ್ಲೇ ಅಮೆರಿಕ ಈ ನೌಕೆಗಳ ನಿಯೋಜನೆ ಮಾಡಿದೆ

ನ್ಯಾನ್ಸಿ ಪೆಲೋಸಿ
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ತನ್ನ ಏಷ್ಯಾ ಪ್ರವಾಸದ ವೇಳೆ ತೈವಾನ್ಗೆ (Taiwan) ಭೇಟಿ ನೀಡಲಿದ್ದಾರೆ ಎಂಬ ವರದಿಗಳ ಮಧ್ಯೆ, ಅಮೆರಿಕ ತಮ್ಮ ಮಿಲಿಟರಿ ವಿಮಾನವಾಹಕ ನೌಕೆ ಮತ್ತು ದೊಡ್ಡ ವಿಮಾನಗಳನ್ನು ದ್ವೀಪದ ಹತ್ತಿರ ನಿಯೋಜಿಸಿದೆ. ವರದಿಗಳ ಪ್ರಕಾರ, ಪೆಲೋಸಿ ತೈವಾನ್ಗೆ ಭೇಟಿ ನೀಡಲು ನಿರ್ಧರಿಸಿದರೆ ಅವರ ವಿಮಾನಕ್ಕಾಗಿ ಮಿಲಿಟರಿ ಬಫರ್ ವಲಯವನ್ನು ರಚಿಸಲು ನೋಡುತ್ತಿದೆ. ಪೆಲೋಸಿ ತನ್ನ ಏಷ್ಯಾ ಪ್ರವಾಸದ ಸಮಯದಲ್ಲಿ ತೈವಾನ್ಗೆ ಭೇಟಿ ನೀಡಿದರೆ ಅಮೆರಿಕ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ (China) ಮಂಗಳವಾರ ಎಚ್ಚರಿಕೆ ನೀಡಿದ್ದರ ಬೆನ್ನಲ್ಲೇ ಅಮೆರಿಕ ಈ ನೌಕೆಗಳ ನಿಯೋಜನೆ ಮಾಡಿದೆ. ವರದಿಗಳ ಪ್ರಕಾರ ಅಮೆರಿಕದ ನೌಕಾಪಡೆ ಈ ಪ್ರದೇಶದಲ್ಲಿ ಎರಡು ವಿಮಾನವಾಹಕ ನೌಕೆ ಗುಂಪುಗಳು ಮತ್ತು ಎರಡು ಉಭಯಚರ ಆಕ್ರಮಣ ಗುಂಪುಗಳನ್ನು ಹೊಂದಿದೆ. ಯುಎಸ್ಎಸ್ ರೊನಾಲ್ಡ್ ರೇಗನ್ ಗೈಡೆಡ್ ಕ್ಷಿಪಣಿ ಕ್ರೂಸರ್ ಆಗಿದ್ದು ಯುಎಸ್ಎಸ್ ಅಂಟಿಯೇಟಂ ,ವಿಧ್ವಂಸಕ ಯುಎಸ್ಎಸ್ ಹಿಗ್ಗಿನ್ಸ್ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಸ್ತುತ ತೈವಾನ್ನ ಪೂರ್ವ ಮತ್ತು ಫಿಲಿಪೈನ್ಸ್ ಮತ್ತು ಜಪಾನ್ನ ದಕ್ಷಿಣಕ್ಕೆ ಫಿಲಿಪೈನ್ಸ್ ಸಮುದ್ರದಲ್ಲಿದೆ. ಉಭಯಚರ ದಾಳಿ ಹಡಗು ಯುಎಸ್ಎಸ್ ಟ್ರಿಪೋಲಿಯು ಸ್ಯಾನ್ ಡಿಯಾಗೋದಿಂದ ಮೇಯಲ್ಲಿ ಹೊರಟಿದ್ದು ನಿಯೋಜನೆಯ ಭಾಗವಾಗಿ ಇಲ್ಲಿದೆ. ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ (CVN-72) ಮತ್ತು ಉಭಯಚರ ದಾಳಿ ಹಡಗು ಯುಎಸ್ಎಸ್ ಅಮೆರಿಕ (LHA-6) ಕೂಡಾ ಇದೇ ಪ್ರದೇಶದಲ್ಲಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)