ಬೆಂಗಳೂರು: ಕೋವಿಡ್‌ ಲಸಿಕೆ ಮತ್ತು ಆಮ್ಲಜನಕ ಪೂರೈಕೆ ವಿಚಾರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೈಕೋರ್ಟ್‌ ಆದೇಶ ಕುರಿತಂತೆ ನೀಡಿದ್ದ ಹೇಳಿಕೆಗಳನ್ನು ಅನಗತ್ಯ ಹೇಳಿಕೆಗೆ ಎಂದು ಪರಿಗಣಿಸಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ನ್ಯಾಯಾಂಗದ ಬಗ್ಗೆ ಸಿ.ಟಿ.ರವಿ, ಸದಾನಂದಗೌಡರ ಹೇಳಿಕೆ‌‌‌ ವಿಚಾರವಾಗಿ ಅನೇಕ ಮಂದಿ ಸುಮೋಟೋ ಕೇಸ್ ದಾಖಲಿಸಲು ಇ-ಮೇಲ್ ಮೂಲಕ ಮನವಿ ಮಾಡಿದ್ದರು. ಈ ಕುರಿತಂತೆ ಇಂದು ಕೋರ್ಟ್ ಕಲಾಪದ ವೇಳೆ ಪ್ರಸ್ತಾಪ ಮಾಡಿದ ಸಿಜೆ ಎ.ಎಸ್.ಒಕಾ ಅವರು, ರಾಜಕಾರಣಿಗಳ ಟೀಕೆ ಬಗ್ಗೆ ಕ್ರಮಕ್ಕೆ ಕೆಲವರು ಮೇಲ್ ಕಳುಹಿಸಿದ್ದಾರೆ. ನಮಗೆ ಈ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸಮಯವಿಲ್ಲ. ನಾವು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇವೆ. ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಆ ಮೂಲಕ ಸಿ.ಟಿ.ರವಿ, ಸದಾನಂದ ಗೌಡ ಹೇಳಿಕೆಗಳನ್ನು ಅನಗತ್ಯ ಹೇಳಿಕೆಗಳು ಎಂದು ಪರಿಗಣಿಸಿ ಪ್ರತಿಕ್ರಿಯೆ ನೀಡಲ್ಲ ಎಂದು ಕೋರ್ಟ್​​​ ಪರೋಕ್ಷವಾಗಿ ಹೇಳಿದೆ.

ಸಿ.ಟಿ.ರವಿ, ಸದಾನಂದಗೌಡ ಏನು ಹೇಳಿದ್ದರು..?
ಲಸಿಕೆ ಉತ್ಪಾದನೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೇಂದ್ರ ಸಚಿವ ಸದಾನಂದ ಗೌಡ ಅವರು, ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳೋಕೆ ಆಗುತ್ತಾ ಎಂದಿದ್ದರು. ಇತ್ತ ಆಕ್ಸಿಜನ್​ ಪೂರೈಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಿ.ಟಿ ರವಿ ಅವರು, ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದರು. ಈ ಹೇಳಿಕೆಗಳ ವಿರುದ್ಧ ವಿಪಕ್ಷ ನಾಯಕರು ಸೇರಿದಂತೆ, ವ್ಯಾಪಕ ಜನಕ್ರೋಶ ಎದುರಾಗಿತ್ತು.

The post ನ್ಯಾಯಾಂಗ ವಿಮರ್ಶೆ; ಸಿ.ಟಿ ರವಿ, ಡಿವಿಎಸ್ ಹೇಳಿಕೆಗೆ ಹೈಕೋರ್ಟ್​​ ಹೇಳಿದ್ದೇನು? appeared first on News First Kannada.

Source: newsfirstlive.com

Source link