ನ್ಯಾಷನಲ್​ ಕ್ರಷ್​ ಸ್ಮೃತಿ ಮಂದಾನಗೆ ಹುಟ್ಟುಹಬ್ಬದ ಸಂಭ್ರಮ

ನ್ಯಾಷನಲ್​ ಕ್ರಷ್​ ಸ್ಮೃತಿ ಮಂದಾನಗೆ ಹುಟ್ಟುಹಬ್ಬದ ಸಂಭ್ರಮ

ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಶ್ರೀನಿವಾಸ್​ ಮಂದಾನ, ಇಂದು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕ್ರಿಕೆಟ್​ ಲೋಕದ ಅಭಿಮಾನಿಗಳ ಕ್ರಷ್​ ಆಗಿರುವ ಮಂದಾನಗೆ, ಮಾಜಿ-ಹಾಲಿ ಕ್ರಿಕೆಟಿಗರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಟಿ-20 ಕ್ರಿಕೆಟ್​​ನಲ್ಲಿ ಭಾರತದ ಹೆಚ್ಚು ರನ್​ ಕಲೆಹಾಕಿದ ಮೂರನೇ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ ಮಂದಾನ. ಹಾಗೆಯೇ ಚೇಸಿಂಗ್​​ನಲ್ಲಿ ಸತತ 10 ಅರ್ಧಶತಕ ಸಿಡಿಸಿದ ಮೊದಲ ಆಟಗಾರ್ತಿ. ಇನ್ನು ಟಿ20 ಱಂಕಿಂಗ್​​ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

2019ರ ಫೆಬ್ರವರಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕಿಯಾಗಿ ಆಯ್ಕೆಯಾಗಿದ್ದ ಮಂದಾನ, ಅತಿ ಚಿಕ್ಕ ವಯಸ್ಸಿನಲ್ಲಿ (22 ವರ್ಷ) ನಾಯಕತ್ವ ವಹಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 1000 ರನ್​ಗಳನ್ನು ವೇಗವಾಗಿ ಪೂರೈಸಿದ ಎರಡನೇ ಆಟಗಾರ್ತಿ ಕೂಡ ಹೌದು. ದೇಶೀಯ ಏಕದಿನ ಕ್ರಿಕೆಟ್​​​ನಲ್ಲಿ ಗುಜರಾತ್​ ವಿರುದ್ಧ ಮಹಾರಾಷ್ಟ್ರದ ಮಂದಾನ, 150 ಎಸೆತಗಳಲ್ಲಿ 224 ಗಳಿಸಿ, ಏಕದಿನದಲ್ಲಿ ದ್ವಿಶತಕ ಸಿಡಿಸಿದ ಮೊದಲ ಪ್ರಥಮ ಆಟಗಾರ್ತಿ ಎಂಬ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡರು. ಇವರ ಆಟಕ್ಕೆ ಮನಸೋತ ದಿಗ್ಗಜ ರಾಹುಲ್​ ದ್ರಾವಿಡ್​, ವಿಶೇಷ ಬ್ಯಾಟೊಂದನ್ನ ಉಡುಗೊರೆಯಾಗಿ ನೀಡಿದ್ರು.

ಮಂದಾನ ಪದಾರ್ಪಣೆ

  • 1996ರ ಜುಲೈ 18ರಂದು ಮುಂಬೈನಲ್ಲಿ ಜನಿಸಿದ್ದ ಮಂದಾನ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ಪದಾರ್ಪಣೆ ಮಾಡಿದ್ದರು. 2013ರ ಏಪ್ರಿಲ್​ 5ರಂದು ಬಾಂಗ್ಲಾದೇಶದ ವಿರುದ್ಧ ಮಂದಾನ ತಮ್ಮ ಮೊದಲ ಟಿ-20 ಪಂದ್ಯ ಆಡಿದ್ದಾಗ ಆಕೆಯ ವಯಸ್ಸು 16 ಆಗಿತ್ತು. ಈ ಪಂದ್ಯದಲ್ಲಿ ಮಂದಾನ 39ರನ್​ ಗಳಿಸಿದ್ರು.
  • ಇನ್ನು ಏಕದಿನ ಕ್ರಿಕೆಟ್​ಗೆ ಅದೇ ವರ್ಷ ಏಪ್ರಿಲ್​ 10ರಂದು ಪದಾರ್ಪಣೆ ಮಾಡಿದ್ರು. ಬಾಂಗ್ಲಾ ವಿರುದ್ಧವೇ ಕಣಕ್ಕಿಳಿದಿದ್ದ ಮಂದಾನ, ಈ ಪಂದ್ಯದಲ್ಲಿ 25 ರನ್​ ಗಳಿಸಿದ್ದರು.
  • ಉಳಿದಂತೆ 2014ರ ಆಗಸ್ಟ್​​ 13ರಂದು ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದ ಮಂದಾನ, ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಂದಾನ ಸಾಧನೆ

ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಕಾಲಿಟ್ಟಾಗಿನಿಂದ 81 ಟಿ-20 ಪಂದ್ಯಗಳಲ್ಲಿ ಬ್ಯಾಟ್​​ ಬೀಸಿರುವ ಮಂದಾನ, 13 ಅರ್ಧಶತಕ ನೆರವಿನಿಂದ 1,901 ರನ್ ಕಲೆ ಹಾಕಿದ್ದಾರೆ. ಹಾಗೆಯೇ ಏಕದಿನದಲ್ಲಿ 59 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 18 ಅರ್ಧಶತಕ, 4 ಶತಕಗಳ ಬಲದಿಂದ 2,253 ರನ್​​ ಗಳಿಸಿದ್ದಾರೆ. ಇನ್ನು ಆಡಿರುವ ಮೂರು ಟೆಸ್ಟ್​ಗಳಲ್ಲಿ 167 ರನ್​ ಮಾತ್ರ ಗಳಿಸಿದ್ದಾರೆ.

 

View this post on Instagram

 

A post shared by Smriti Mandhana (@smriti_mandhana)

The post ನ್ಯಾಷನಲ್​ ಕ್ರಷ್​ ಸ್ಮೃತಿ ಮಂದಾನಗೆ ಹುಟ್ಟುಹಬ್ಬದ ಸಂಭ್ರಮ appeared first on News First Kannada.

Source: newsfirstlive.com

Source link