‘ನ್ಯೂಜಿಲೆಂಡ್​​​ನಿಂದ ಭಾರತ ತಂಡ ಈ ಪಾಠ ಕಲಿಯಲೇಬೇಕು’ ಎಂದ ಸೆಹ್ವಾಗ್ ಇನ್ನೇನಂದ್ರು?​​


ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್​​​​ನಲ್ಲಿ ಇಂಗ್ಲೆಂಡ್​ ತಂಡವನ್ನ ಮಣಿಸಿ ನ್ಯೂಜಿಲೆಂಡ್​ಗೆ ಲಗ್ಗೆ ಇಟ್ಟಿದೆ. ಈ ವಿಶ್ವಕಪ್​ ಬಳಿಕ ಭಾರತದೊಂದಿಗೆ ಟಿ20 ಸರಣಿಯನ್ನ ಆಡಲಿದೆ. ಅದಕ್ಕಾಗಿ ಟೀಮ್​ ಇಂಡಿಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇನ್ನು, ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​, ನ್ಯೂಜಿಲೆಂಡ್​ ತಂಡದಿಂದ ಪ್ರಮುಖ ಅಂಶವೊಂದನ್ನ ಭಾರತ ಕಲಿಯಬೇಕು ಎಂದು ಸೂಚಿಸಿದ್ದಾರೆ. ಟೀಮ್​ ಇಂಡಿಯಾ ಅತ್ಯದ್ಭುತ ತಂಡ. ಹಾಗಾಗಿ ನ್ಯೂಜಿಲೆಂಡ್​​ ಅವರಿಂದ ಏನನ್ನೂ ಕಲಿಯುವ ಅವಶ್ಯಕತೆ ಇಲ್ಲ. ಯಾವುದೇ ಸಂದರ್ಭದಲ್ಲಿ ಯಾವುದೇ ತಂಡವನ್ನ ಸೋಲಿಸುವ ಶಕ್ತಿ ಇದೆ. ಆದರೂ ಟೀಮ್​ ಇಂಡಿಯಾ ಖಂಡಿತವಾಗಿಯೂ ಕಲಿಯಬಹುದಾದ ಒಂದು ಪಾಠ ಇದೆ ಎಂದರು.

ಅದು ಪಾಸಿಟಿವ್​​ ಆಗಿ ಆಡುವುದು. ಏಕೆಂದರೆ T20 ಕ್ರಿಕೆಟ್​​ ಕೆಚ್ಚೆದೆಯ ಆಟಗಾರರ ಮಾದರಿ. ಇಲ್ಲಿ ಕೆಲವು ರಿಸ್ಕ್​​ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಪಾಸಿಟಿವ್​ ಮೈಂಡ್​ ಹೊಂದಿರಬೇಕು ಎಂದು ಸೆಹ್ವಾಗ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​​ಗೆ​​​ ವಿರಾಟ್​​ ಕೊಹ್ಲಿ ಹೇಳುತ್ತಾರಾ ಗುಡ್​​ ಬೈ?

ಈ ಪಾಸಿಟಿವ್​ ಆಟದಿಂದಾಗಿಯೇ ನ್ಯೂಜಿಲೆಂಡ್​​ ಗೆದ್ದಿದೆ. ಪಂದ್ಯದ ಫಲಿತಾಂಶಗಳ ಬಗ್ಗೆ ಚಿಂತಿಸಬೇಡಿ. ಧೈರ್ಯದಿಂದ, ಪಾಸಿಟಿವ್​ ಆಗಿ ಆಡಿ ಎಂದು ತಿಳಿಸಿದ್ದಾರೆ.

News First Live Kannada


Leave a Reply

Your email address will not be published.