ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​​ನಲ್ಲಿ ಹೊಸ ದಾಖಲೆ ಬರೆಯೋಕೆ ಹೊರಟ ರವಿಚಂದ್ರನ್ ಅಶ್ವಿನ್


ಸದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ​ ಮೊದಲ ಟೆಸ್ಟ್​ನಲ್ಲಿ ಅಶ್ವಿನ್​​​ ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಮೂರು ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 4 ವಿಕೆಟ್ ಪಡೆದರೆ, 417 ವಿಕೆಟ್ ಪಡೆದು ಭಾರತದ ಪರ ಹೆಚ್ಚು ವಿಕೆಟ್ ಪಡೆದ 3ನೇ ಸ್ಪಿನ್ನರ್ ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದಾರೆ.

ಸದ್ಯ ಅಶ್ವಿನ್ ಆಡಿರುವ 79 ಟೆಸ್ಟ್‌ ಪಂದ್ಯಗಳಲ್ಲಿ 413 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮತ್ತೋರ್ವ ಹಿರಿಯ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ 417 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ್ದು, ಭಜ್ಜಿ ದಾಖಲೆಯನ್ನು ಮುರಿಯಲು ಅಶ್ವಿನ್‌ಗೆ ಕೇವಲ 4 ವಿಕೆಟ್‌ ಅಗತ್ಯವಿದೆ.

ಇನ್ನು ಅಶ್ವಿನ್ 10 ವಿಕೆಟ್ ಪಡೆದರೆ ಒಂದು ಟೆಸ್ಟ್ ನಲ್ಲಿ ಅತೀ ಹೆಚ್ಚು ಬಾರಿ 10 ವಿಕೆಟ್ ಪಡೆದ ಅನಿಲ್ ಕುಂಬ್ಳೆ ದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಕೇನ್‌ ವಿಲಿಯಮ್ಸನ್‌ ಅವರನ್ನು ಅಶ್ವಿನ್‌ ಐದು ಬಾರಿ ಔಟ್‌ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರಗ್ಯಾನ್ ಓಜಾ ಕೂಡ 5 ಬಾರಿ ಬ್ಕ್ಯಾಕ್‌ಕ್ಯಾಪ್ಸ್‌ ನಾಯಕನನ್ನು ಔಟ್‌ ಮಾಡಿದ್ದರು. ಇದೀಗ ಈ ಇಬ್ಬರೂ ಜಂಟಿ ದಾಖಲೆಯನ್ನು ಹೊಂದಿದ್ದಾರೆ.

ಹಾಗಾಗಿ, ಟೆಸ್ಟ್ ಸರಣಿಯಲ್ಲಿ ಕೇನ್‌ ವಿಲಿಯಮ್ಸನ್‌ ಅವರನ್ನು ಆರ್‌ ಅಶ್ವಿನ್‌ ಒಮ್ಮೆ ಔಟ್‌ ಮಾಡಿದರೆ, ನ್ಯೂಜಿಲೆಂಡ್‌ ನಾಯಕನನ್ನು ಅತಿ ಹೆಚ್ಚು ಬಾರಿ ಔಟ್‌ ಮಾಡಿದ ಭಾರತದ ಮೊದಲ ಬೌಲರ್‌ ಎಂಬ ದಾಖಲೆಗೆ ಅಶ್ವಿನ್ ಭಾಜನರಾಗಲಿದ್ದಾರೆ.

News First Live Kannada


Leave a Reply

Your email address will not be published. Required fields are marked *