ನ್ಯೂಜಿಲೆಂಡ್​​ ತಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​​ ಪಟ್ಟ ಮುಡಿಗೇರಿಸಿಕೊಂಡಿದೆ. ರೋಚಕ ಘಟ್ಟ ತಲುಪಿದ್ದ ಪಂದ್ಯವನ್ನ ಕಿವೀಸ್​​​ __ ವಿಕೆಟ್​​ಗಳಿಂದ ತನ್ನದಾಗಿಸಿಕೊಂಡಿದೆ. ಕೊನೆಯ ದಿನವಾದ ಇಂದು, 64 ರನ್​​​ಗಳೊಂದಿಗೆ ಆಟ ಆರಂಭಿಸಿದ ಟೀಮ್​​ ಇಂಡಿಯಾ, ನ್ಯೂಜಿಲೆಂಡ್​ ವೇಗಿಗಳ ದಾಳಿಗೆ ತತ್ತರಿಸಿತು. ನಾಯಕ ವಿರಾಟ್​ ಕೊಹ್ಲಿ 13 ರನ್​​ ಮತ್ತು ಚೇತೇಶ್ವರ್​ ಪೂಜಾರ 15ರನ್​ಗಳಿಸಿ ಕೈಲ್​​​ ಜೆಮಿಸನ್​​ಗೆ ವಿಕೆಟ್​​ ಒಪ್ಪಿಸಿದ್ರು. ನಂತರ ಅಜಿಂಕ್ಯಾ ರಹಾನೆ 15ರನ್​​ಗಳಿಸಿ ನಿರ್ಗಮಿಸಿದ್ರೆ, ಅಶ್ವಿನ್​ 7, ಶಮಿ 13 ರನ್​ಗಳಿಸಿ ಪೆವಿಲಿಯನ್​ ಸೇರಿಕೊಂಡ್ರು. ಕೊನೆಗೆ ಏಕಾಂಗಿ ಹೋರಾಟ ನಡೆಸಿದ ರಿಷಭ್​ ಪಂತ್​​ 41 ರನ್​ಗಳಿಸಿ ತನ್ನ ಹೋರಾಟವನ್ನ ಅಂತ್ಯಗೊಳಿಸಿದ್ರು. ಅಂತಿಮವಾಗಿ ಟೀಮ್​ ಇಂಡಿಯಾ, 2ನೇ ಇನ್ನಿಂಗ್ಸ್​​ನಲ್ಲಿ ಕೇವಲ 170 ರನ್​​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು. ಕಿವೀಸ್​ ಪರ ಟಿಮ್​ ಸೌಥಿ 4, ಟ್ರೆಂಟ್​ ಬೋಲ್ಟ್​ 3, ಜೆಮಿಸನ್​ 2, ನೀಲ್​ ವ್ಯಾಗ್ನರ್ 1ವಿಕೆಟ್​ ಪಡೆದು ಮಿಂಚಿದ್ರು.

139 ರನ್​​ಗಳ ಸವಾಲನ್ನ ಬೆನ್ನಟ್ಟಿದ ನ್ಯೂಜಿಲೆಂಡ್​​ ತಂಡಕ್ಕೆ, ಅಶ್ವಿನ್​ ಆರಂಭಿಕ ಆಘಾತ ನೀಡಿದ್ರು. ಆರಂಭಿಕರಾದ ಟಾಮ್ ಲಾಥನ್ 9 ರನ್ ಮತ್ತು ಡಿವೊನ್ ಕಾನ್ವೆ 19 ರನ್​ಗಳಿಸಿ, ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ರು. 3ನೇ ವಿಕೆಟ್​ಗೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್, ಭರ್ಜರಿ ಜೊತೆಯಾಟವಾಡಿದ್ರು. ಟೀಮ್ ಇಂಡಿಯಾ ಬೌಲರ್​ಗಳ ಬೆವರಿಳಿಸಿದ ಈ ಜೋಡಿ 95 ರನ್​ಗಳ ಕಾಣಿಕೆ ನೀಡಿತು. ಆ ಮೂಲಕ ತಂಡಕ್ಕೆ 8 ವಿಕೆಟ್​ಗಳ ಗೆಲುವು ತಂದುಕೊಡ್ತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್, ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತು.

The post ನ್ಯೂಜಿಲೆಂಡ್​ ತಂಡಕ್ಕೆ ‘ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​’ ಪಟ್ಟ appeared first on News First Kannada.

Source: newsfirstlive.com

Source link