ನ್ಯೂಜಿಲೆಂಡ್​ ವಿರುದ್ಧ ಟೀಂ ಇಂಡಿಯಾಗೆ 73 ರನ್​​ ಭರ್ಜರಿ ಜಯ


ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ T20 ಸರಣಿಯ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ನೀಡಿದ ಟಾರ್ಗೆಟ್​​ ಬೆನ್ನತ್ತಿದ ನ್ಯೂಜಿಲೆಂಡ್​​ 18 ಓವರ್​​ನಲ್ಲಿ ಕೇವಲ 115 ರನ್​​ ಗಳಿಸಿ ಆಲ್​​ಔಟ್​​ ಆದರು. ಈ ಮೂಲಕ ಮೂರನೇ ಪಂದ್ಯವೂ ನ್ಯೂಜಿಲೆಂಡ್​​ ಹೀನಾಯವಾಗಿ ಸೋಲು ಕಂಡಿತು.

ಟಾಸ್​​​ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​​ನಲ್ಲಿ 7 ವಿಕೆಟ್​ ನಷ್ಟಕ್ಕೆ 184 ರನ್​​ ಗಳಿಸಿತು. ಟೀಂ ಇಂಡಿಯಾ ಪರ ರೋಹಿತ್​ ಶರ್ಮಾ 56, ಇಶಾನ್​​ ಕಿಶನ್​​ 29, ಶ್ರೇಯಸ್​ ಅಯ್ಯರ್ 25, ವೆಂಕಟೇಶ್​​ ಅಯ್ಯರ್ 20, ಹರ್ಷಲ್​​ ಪಟೇಲ್​ 18, ದೀಪಕ್​ ಚಹರ್​​ 21 ರನ್​​ ಗಳಿಸಿದರು. ರೋಹಿತ್​​​ ಶರ್ಮಾ ಸಿಡಿಲಬ್ಬರದ ಶತಕದಿಂದ ಟೀಂ ಇಂಡಿಯಾ ಉತ್ತಮ ಮೊತ್ತ ಪೇರಿಸಲಾಯ್ತು.

ನ್ಯೂಜಿಲೆಂಡ್​ ಪರ ಮಾರ್ಟಿನ್ ಗಪ್ಟಿಲ್ 51, ಟಿಮ್ ಸೀಫರ್ಟ್ 17, ಲಾಕಿ ಫರ್ಗ್ಯೂಸನ್ 14 ರನ್​ ಗಳಿಸಿದರು.

News First Live Kannada


Leave a Reply

Your email address will not be published. Required fields are marked *