ನ್ಯೂಜಿಲೆಂಡ್​ ವಿರುದ್ಧ 7 ವಿಕೆಟ್​​​​ ಭರ್ಜರಿ ಜಯ; ಟಿ20 ಸರಣಿ ಗೆದ್ದ ಭಾರತ


ಇಂದು ಜಾರ್ಖಂಡ್‌ನ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 8 ವಿಕೆಟ್​​ ಭರ್ಜರಿ ಗೆಲವು ಸಾಧಿಸಿದೆ. ನ್ಯೂಜಿಲೆಂಡ್​​ ನೀಡಿದ ಟಾರ್ಗೆಟ್​​ ಬೆನ್ನತ್ತಿದ ಟೀಂ ಇಂಡಿಯಾ ಕೆ.ಎಲ್​​ ರಾಹುಲ್​​ ಮತ್ತು ನಾಯಕ ರೋಹಿತ್​​ ಶರ್ಮಾ ಅವರ ಅರ್ಧಶತಕದ ನೆರವಿನಿಂದ 17.1 ಓವರ್​​ನಲ್ಲಿ 154 ರನ್​​ ಗಳಿಸಿ ಗೆದ್ದು ಬೀಗಿದೆ.

ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ನ್ಯೂಜಿಲೆಂಡ್​​ ತಂಡ ನಿಗದಿತ 20 ಓವರ್​​ನಲ್ಲಿ 6 ವಿಕೆಟ್​ ನಷ್ಟಕ್ಕೆ 153 ರನ್​​ ಗಳಿಸಿತ್ತು. ಕಿವೀಸ್​ ಪರ ಬ್ಯಾಟಿಂಗ್​​ ಮಾಡಿದ ಮಾರ್ಟಿನ್ ಗಪ್ಟಿಲ್ 31, ಡೇರಿಲ್ ಮಿಚೆಲ್ 31, ಮಾರ್ಕ್ ಚಾಪ್ಮನ್ 21, ಗ್ಲೆನ್ ಫಿಲಿಪ್ಸ್ 34, ಟಿಮ್ ಸೀಫರ್ಟ್ 13 ರನ್​​ ಬಾರಿಸಿದರು.

ಇನ್ನು, ಟೀಂ ಇಂಡಿಯಾ ಪರ ಕೆ.ಎಲ್​​ ರಾಹುಲ್​​ 65, ರೋಹಿತ್​ ಶರ್ಮಾ 55 ರನ್​ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಎರಡನೇ ಪಂದ್ಯ ಗೆಲ್ಲುವ ಮೂಲಕ ಭಾರತ ನ್ಯೂಜಿಲೆಂಡ್​​ ವಿರುದ್ಧ ಟಿ20 ಸರಣಿ ಗೆದ್ದಿದೆ.

News First Live Kannada


Leave a Reply

Your email address will not be published. Required fields are marked *