ಸೌತ್​ ಆಫ್ರಿಕಾ.. ವಿಶ್ವ ಕ್ರಿಕೆಟ್​​ನ ಮೋಸ್ಟ್​ ಡೇಂಜರಸ್​​ ಟೀಮ್​​ಗಳ ಪೈಕಿ ಒಂದು. ಟೆಸ್ಟ್​, ಟಿ20, ಏಕದಿನ ಹೀಗೇ ಮೂರು ಫಾರ್ಮೆಟ್​ನಲ್ಲೂ ಸ್ಟಾರ್​ ಆಟಗಾರರನ್ನ ಹೊಂದಿರುವ ಸೌತ್​​ ಆಫ್ರಿಕಾ, ವಿಶ್ವ ಕ್ರಿಕೆಟ್​​ನಲ್ಲಿ ತನ್ನದೇ ಚಾಪು ಮೂಡಿಸಿದೆ. ಹರ್ಷಲ್ ಗಿಬ್ಸ್, ಜಾಂಟಿ ರೋಡ್ಸ್​, ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್, ಗ್ರೇಮ್ ಸ್ಮಿತ್​​ ರಂಥಹ ಶ್ರೇಷ್ಠ ಆಟಗಾರರನ್ನ ವಿಶ್ವಕ್ಕೆ ಪರಿಚಯಿಸಿದೆ. ಆದ್ರೆ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ವಿಶ್ವದ ಬಹುತೇಕ ರಾಷ್ಟ್ರೀಯ ತಂಡಗಳಲ್ಲಿ ಸೌತ್​ ಆಫ್ರಿಕಾ ಮೂಲದ ಆಟಗಾರರ ದಂಡೇ ಇದೆ. ಸೌತ್​ ಆಫ್ರಿಕಾ ಮೂಲದ ಆಟಗಾರರು, ಬೇರೆ ಬೇರೆ ರಾಷ್ಟ್ರೀಯ ತಂಡಗಳ ಪರ ಆಡ್ತಿದ್ದಾರೆ. ಇದಕ್ಕೆ ಸೌತ್​ ಆಫ್ರಿಕಾ ಆಯ್ಕೆ ಸಮಿತಿಯಲ್ಲಿನ ನಿಯಮವೇ, ಕಾರಣ ಆಗಿದೆ.

ವರ್ಣಭೇದ ನೀತಿಯಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ 21 ವರ್ಷಗಳ ಕಾಲ ಅಮಾನತಿಗೆ ಒಳಗಾಗಿತ್ತು. ಆದರೆ 1991ರಲ್ಲಿ ಸೌತ್​ ಆಫ್ರಿಕಾ ಮೇಲಿನ ಅಮಾನತು ತೆರವುಗೊಳಿಸಿದ ಐಸಿಸಿ, ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ನೀಡುತ್ತೆ. ನಂತರ ಕಪ್ಪುವರ್ಣೀಯರಿಗೆ ತಂಡದಲ್ಲಿ ಮೀಸಲು ಕಡ್ಡಾಯ ಹೋರಾಟದ ಪ್ರತಿಫಲ, 2016ರಲ್ಲಿ ಸೌತ್​ ಆಫ್ರಿಕಾ ಕ್ರಿಕೆಟ್​ ಬೌರ್ಡ್​ ಎಲ್ಲಾ ಮಾದರಿಯಲ್ಲಿ ಗರಿಷ್ಠ ಆರು ಮಂದಿ, ಕಡ್ಡಾಯ ಇಬ್ಬರು ಕಪ್ಪು ವರ್ಣೀಯ ಆಟಗಾರರು ತಂಡದಲ್ಲಿ ಇರಲೇಬೇಕೆಂಬ ಕಾನೂನು ರೂಪಿಸುತ್ತದೆ. ಇದರ ಪರಿಣಾಮವೇ ಸೌತ್ ಆಫ್ರಿಕಾ ಮೂಲದ ಆಟಗಾರರು, ಇತರೆ ದೇಶಗಳಿಗೆ ವಲಸೆ ಹೋಗಲು ಕಾರಣ ಎನ್ನಲಾಗಿದೆ. ಹೀಗೆ ವಲಸೆ ಹೋದ ಸೌತ್​​​ ಆಫ್ರಿಕಾ ಮೂಲದವರೇ ಇಂದು ವಿಶ್ವ ಕ್ರಿಕೆಟ್​​ನಲ್ಲಿ ಮೆರೆಯುತ್ತಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳಲ್ಲಿ, ಸೌತ್​ ಆಫ್ರಿಕನ್ಸ್​​ ಹೆಚ್ಚಾಗಿಯೇ ಇದ್ದಾರೆ.

ನ್ಯೂಜಿಲೆಂಡ್​ ತಂಡದಲ್ಲೇ ಅತಿ ಹೆಚ್ಚು ಆಫ್ರಿಕನ್ಸ್
ವಿಶ್ವ ಕ್ರಿಕೆಟ್​​ನಲ್ಲಿ ಬಲಿಷ್ಠ ತಂಡವಾಗಿ ನ್ಯೂಜಿಲೆಂಡ್ ಗುರುತಿಸಿಕೊಂಡಿದೆ ಎಂದಾದರೆ ಅದಕ್ಕೆ ಆಫ್ರಿಕನ್ ಮೂಲದ ಆಟಗಾರರ ಕೊಡುಗೆ ಅಪಾರವಾಗಿದೆ. ಲಾರ್ಡ್ಸ್​ನ ದ್ವಿಶತಕ ವೀರ ಡೆವೊನ್ ಕಾನ್ವೆಯಿಂದ ಹಿಡಿದು ಹಲವು ಆಟಗಾರರು ಸದ್ಯ ಕೇನ್ ವಿಲಿಯಮ್ಸನ್ ಬೆನ್ನೆಲುಬಾಗಿ ನಿಂತಿದ್ದಾರೆ.

ನಂ. 1: ಕಾಲಿನ್ ಮನ್ರೋ, ನ್ಯೂಜಿಲೆಂಡ್ ​​​​​​​​​​​​​​​
ವಿಶ್ವ ಕ್ರಿಕೆಟ್​​ನಲ್ಲಿ ಟಿ20 ಸ್ಪೆಷಲಿಸ್ಟ್​ಗಳಲ್ಲಿ ಒಬ್ಬರಾಗಿರುವ ಕಾಲಿನ್ ಮನ್ರೋ, ಸ್ಫೋಟಕ ಆರಂಭಿಕರಲ್ಲಿ ಒಬ್ಬರು. ಚಿಕ್ಕ ವಯಸ್ಸಿನಲ್ಲೇ ಸೌತ್​ ಆಫ್ರಿಕಾ ತೊರೆದು ನ್ಯೂಜಿಲೆಂಡ್ ಸೇರಿತ್ತು. ಆಕ್ಲೆಂಡ್​​​ ಪರ ಬ್ಯಾಟ್​​ ಬೀಸಿದ್ದ ಈತ, ನಂತರ ನ್ಯೂಜಿಲೆಂಡ್ ಎ, ಅಂಡರ್-19 ತಂಡವನ್ನೂ ಪ್ರತಿನಿಧಿಸಿದ್ದಾರೆ. ಸುಮಾರು 100ಕ್ಕೂ ಅಧಿಕ ಪಂದ್ಯಗಳನ್ನ ಕಿವೀಸ್​ ಪರ ಆಡಿದ್ದಾರೆ.

ನಂ. 2: ಬಿಜೆ ವಾಟ್ಲಿಂಗ್, ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಆಗಿರುವ ವಾಟ್ಲಿಂಗ್, ಸುಮಾರು 10 ವರ್ಷ ವಯಸ್ಸಿನಲ್ಲಿದ್ದಾಗಲೇ ಕುಟುಂಬದ ಜೊತೆ ಆಫ್ರಿಕದಿಂದ ನ್ಯೂಜಿಲೆಂಡ್​​ಗೆ ಹಾರಿದ್ದರು. ಸದ್ಯ ಟೆಸ್ಟ್​ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ಥಂಬ ಕೂಡ, ನ್ಯೂಜಿಲೆಂಡ್​ನ ಡಿಪೆಂಡಬಲ್ ಬ್ಯಾಟ್ಸ್​ಮನ್ ಆಗಿ ಗುರುತಿಸಿಕೊಳ್ಳುವ ಈತ, ನ್ಯೂಜಿಲೆಂಡ್ ಟೆಸ್ಟ್​ ತಂಡದ ತಡೆಗೋಡೆಯೂ ಆಗಿದ್ದಾರೆ. ಅಷ್ಟೇ ಅಲ್ಲ, ಈ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಬಳಿಕ ವೃತ್ತಿ ಜೀವನಕ್ಕೆ ಗುಡ್​ಬೈ ಹೇಳೋ ಸಾಧ್ಯತೆಯೂ ಇದೆ.

 ನಂ. 3: ನೇಲ್ ವಾಗ್ನರ್, ನ್ಯೂಜಿಲೆಂಡ್​
ಸೌತ್​ ಆಫ್ರಿಕಾದ ರಾಜಧಾನಿಯಲ್ಲಿ ಜನಿಸಿದ ನೇಲ್ ವಾಗ್ನರ್, 22 ವರ್ಷದ ವರೆಗೆ ಸೌತ್​ ಆಫ್ರಿಕಾದಲ್ಲೇ ಆಡಿ ಬೆಳೆದವರು. ಆದ್ರೆ, ಸೌತ್​ ಆಫ್ರಿಕಾ ತಂಡಕ್ಕೆ ಆಯ್ಕೆಯಾಗುವ ಅವಕಾಶದ ಕೊರತೆಯಿಂದ 22ರ ವಯಸ್ಸಿನಲ್ಲಿ ಸ್ವದೇಶವನ್ನ ತೊರೆದ ವಾಗ್ನರ್, ಈಗ ನ್ಯೂಜಿಲೆಂಡ್​​ ತಂಡದ ಡೇಂಜರಸ್ ಬೌಲರ್. ಸದ್ಯ ನ್ಯೂಜಿಲೆಂಡ್​ ಟೆಸ್ಟ್​ ತಂಡದ ಟಿಮ್ ಸೌಥಿ, ಬೋಲ್ಟ್​, ವಾಗ್ನರ್ ಕಾಂಬಿನೇಷನ್​​ ವಿಶ್ವ ಬೆಸ್ಟ್ TRIO ಆಗಿ ಗುರುತಿಸಿಕೊಂಡಿದೆ. ಎಂದರೆ ಇದರಲ್ಲಿ ನೇಲ್ ಪಾತ್ರ ದೊಡ್ಡದಿದೆ. ಈಗ ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್​​ನಲ್ಲಿ ಈತನೇ ಟೀಮ್ ಇಂಡಿಯಾಕ್ಕೆ ಕಂಟಕ ಅನ್ನೋದನ್ನ ಮರೆಯುವಂತಿಲ್ಲ.

ನಂ. 4: ಮಾರ್ನಸ್ ಲಬುಶೇನ್, ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ರನ್​​ಮಷಿನ್ ಮಾರ್ನಸ್​ ಲಬುಶೇನ್, ಸ್ಟೀವ್​ ಸ್ನಿತ್​ರ ಅಮಾನತಿನ ವೇಳೆ ಆಸಿಸ್ ತಂಡಕ್ಕೆ ಎಂಟ್ರಿಕೊಟ್ಟ ಈತ, ಈಗ ಆಸಿಸ್​​ನ ನಂಬಿಕಸ್ಥ ಬ್ಯಾಟ್ಸ್​ಮನ್ ಹಾಗೂ ರನ್​ಮಷಿನ್. ತಂದೆ ಆಸ್ಟ್ರೇಲಿಯಾದ ಮೈನಿಂಗ್ ಕಂಪನಿಯಲ್ಲಿ ಉದ್ಯೋಗ ಪಡೆದ ಕಾರಣ, ಕಾಂಗರೂ ನಾಡಿಗೆ ಶಿಫ್ಟ್​ ಆದ 10 ವರ್ಷದ ಹುಡುಗ ಮಾರ್ನಸ್​, ಇಂದು ಸ್ಟೀವ್​ ಸ್ಮಿತ್​​​​ರನ್ನೇ ಹಿಂದಿಕ್ಕಿ ಸ್ಟಾರ್​ ಬ್ಯಾಟ್ಸ್​ಮನ್​ ಆಗಿ ಗುರುತಿಸಿಕೊಂಡಿದ್ದಾರೆ.

ನಂ. 5: ಜೆಸನ್ ರಾಯ್, ಇಂಗ್ಲೆಂಡ್
ಇಂಗ್ಲೆಂಡ್ ತಂಡದ ಸ್ಫೋಟಕ ಓಪನರ್ ಜೆಸನ್ ರಾಯ್, ಫಿಯರ್ ಲೆಸ್ ಬ್ಯಾಟಿಂಗ್​​ಗೆ ಹೆಸರುವಾಸಿಯಾಗಿರುವ ರಾಯ್, ಇಂಗ್ಲೆಂಡ್​ನ ಯಶಸ್ವಿ ಓಪನರ್​​ಗಳಲ್ಲಿ ಒಬ್ಬರಾಗಿದ್ದಾರೆ. 10 ವರ್ಷದಲ್ಲಿದ್ದಾಗ ಕುಟುಂಬದ ಜೊತೆ ಇಂಗ್ಲೆಂಡ್​ಗೆ ಆಗಮಿಸಿದ ರಾಯ್, 96 ಏಕದಿನ ಪಂದ್ಯಗಳನ್ನ ಆಡಿದ್ದಾರೆ. ಮೋಸ್ಟ್ ಇಂಪಾರ್ಟೆಂಟ್​ ವಿಷ್ಯ ಏನಂದ್ರೆ ಕ್ರಿಕೆಟ್​ ಜನಕರು ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಈತನ ಪಾತ್ರ ಮಹತ್ವದ್ದು. ಇಷ್ಟೇ ಅಲ್ಲ, ಇಂಗ್ಲೆಂಡ್​ ತಂಡದ ಟಾಮ್ ಕರನ್, ಸ್ಯಾಮ್ ಕರನ್ ಕೂಡ ಸೌತ್​ ಆಫ್ರಿಕಾ ಮೂಲದರೇ ಅನ್ನೋದನ್ನ, ಮರೆಯುವಂತಿಲ್ಲ.

ಇವರಲ್ಲದೆ, ಇಂಗ್ಲೆಂಡ್​​ನ ಮಾಜಿ ಕ್ಯಾಪ್ಟನ್ ಕೆವಿನ್ ಪೀಟರ್ಸನ್, ಗ್ರ್ಯಾಂಟ್ ಇಲಿಯಟ್, ಮಿಚಲ್ ರಿಪ್ಪನ್, ಗ್ಲೇನ್ ಫಿಲಿಪ್ಸ್ ಕೂಡ ಸೌತ್​ ಆಫ್ರಿಕದಲ್ಲಿ ಹುಟ್ಟಿ, ಇತರೆ ದೇಶಗಳನ್ನ ಪ್ರತಿನಿಧಿಸಿದವರೇ ಆಗಿದ್ದಾರೆ. ಸೌತ್​ ಆಫ್ರಿಕಾದಲ್ಲೇ ಈ ಆಟಗಾರರು ಹುಟ್ಟಿದ್ರೂ, ವಿಶ್ವ ಕ್ರಿಕೆಟ್​​ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರೋದು ವಿಶೇಷ.

The post ನ್ಯೂಜಿಲೆಂಡ್, ಇಂಗ್ಲೆಂಡ್, ಆಸಿಸ್ ತಂಡಗಳಲ್ಲಿ ಆಫ್ರಿಕನ್ ಕ್ರಿಕೆಟಿಗರ ದರ್ಬಾರ್ appeared first on News First Kannada.

Source: newsfirstlive.com

Source link