ನ್ಯೂಜಿಲೆಂಡ್​​​​ ಟೀಮ್​​ನಿಂದ IPL ಫ್ರಾಂಚೈಸಿಗಳಿಗೆ ಗುಡ್​​ನ್ಯೂಸ್​​.. ಏನದು?


ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿ ಮಾರ್ಚ್ 26ನೇ ತಾರೀಕಿನಿಂದ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಕ್ರಿಕೆಟಿಗರು ಭಾಗವಹಿಸುತ್ತಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ಐಪಿಎಲ್ ಟೂರ್ನಿ ಆರಂಭವಾಗುವ ಸಮಯದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ತಂಡಗಳ ನಡುವೆ 1 ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಹೀಗಾಗಿ ನ್ಯೂಜಿಲೆಂಡ್ ಆಟಗಾರರ ಲಭ್ಯತೆ ಬಗ್ಗೆ ಅನುಮಾನ ಮೂಡಿತ್ತು.

ಈ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ಕೋಚ್ ಗ್ಯಾರಿ, ನ್ಯೂಜಿಲೆಂಡ್​ನ ಪ್ರಮುಖ ಆಟಗಾರರು ಐಪಿಎಲ್​ಗೆ ಲಭ್ಯರಾಗುತ್ತಾರೆ. ಈ ಬಗ್ಗೆ ಬಿಸಿಸಿಐ ಮತ್ತು ಐಪಿಎಲ್​​ ಕ್ರೀಡಾ ಮಂಡಳಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ ಎಂದಿದ್ದಾರೆ.

The post ನ್ಯೂಜಿಲೆಂಡ್​​​​ ಟೀಮ್​​ನಿಂದ IPL ಫ್ರಾಂಚೈಸಿಗಳಿಗೆ ಗುಡ್​​ನ್ಯೂಸ್​​.. ಏನದು? appeared first on News First Kannada.

News First Live Kannada


Leave a Reply

Your email address will not be published. Required fields are marked *