ನ್ಯೂಟ್ರಿಷನ್ ಕೋಚ್ ಸಿಮ್ರಾನ್​​ಗೆ ಉನ್ಮುಕ್ತ್​ ಚಂದ್ ಕ್ಲೀನ್​ಬೌಲ್ಡ್; ಯಾರಿಕೆ..?


ಯುವ ಆಟಗಾರ ಉನ್ಮುಕ್ತ್​ ಚಂದ್ ತಮ್ಮ ಬಹುದಿನಗಳ ಪ್ರೇಯಿಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್​ 21 ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ವಿವಾಹ ಜರುಗಿದೆ.

ತಮ್ಮ ವಿವಾಹದ ಸುಂದರ ಕ್ಷಣಗಳ ಫೋಟೋಗಳನ್ನು ಉನ್ಮುಕ್ತ್​ ಚಂದ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್​ ಅಭಿಮಾನಿಗಳು ನವ ದಂಪತಿಗೆ ಶುಭ ಕೋರಿ ಪ್ರತಿಕ್ರಿಯೆ ನೀಡಿದ್ದಾರೆ.

ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ಉನ್ಮುಕ್ತ್​ ಚಂದ್, ಅಂಡರ್​ 19 ವಿಶ್ವಕಪ್​​ ಗೆದ್ದ ತಂಡದ ನಾಯಕರಾಗಿದ್ದರು. 2012ರಲ್ಲಿ ಉನ್ಮುಕ್ತ್​ ಚಂದ್ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಟೀಂ ಇಂಡಿಯಾ ವಿಶ್ವಕಪ್​​ನಲ್ಲಿ ಗೆಲುವು ಪಡೆದಿತ್ತು. ಆದರೆ ಟೀಂ ಇಂಡಿಯಾ ಪರ ಆಡಬೇಕೆಂಬ ಅವರ ಕನಸು ಮಾತ್ರ ನೆರವೇರಿರಲಿಲ್ಲ. ಈ ಹಿನ್ನೆಲೆಯಲ್ಲಿ ಉನ್ಮುಕ್ತ್​ ಚಂದ್ ವರ್ಷದ ಆರಂಭದಲ್ಲಿ ಅಮೆರಿಕಾಗೆ ತೆರಳಿದ್ದರು.

ಸದ್ಯ ಅಮೆರಿಕಾದಲ್ಲಿ ಮೈನರ್ ಲೀಗ್​​ ಕ್ರಿಕೆಟ್​​ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸುತ್ತಿರುವ 28 ವರ್ಷದ ಉನ್ಮುಕ್ತ್​ ಚಂದ್.. ಬಿಗ್​ ಬ್ಯಾಶ್​ ಲೀಗ್​​ ಆಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಉನ್ಮುಕ್ತ್​ ಚಂದ್ ಪತ್ನಿ ಸಿಮ್ರಾನ್​ ಫಿಟ್ನೆಸ್​​ ಹಾಗೂ ನ್ಯೂಟ್ರಿಷನ್ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

The post ನ್ಯೂಟ್ರಿಷನ್ ಕೋಚ್ ಸಿಮ್ರಾನ್​​ಗೆ ಉನ್ಮುಕ್ತ್​ ಚಂದ್ ಕ್ಲೀನ್​ಬೌಲ್ಡ್; ಯಾರಿಕೆ..? appeared first on News First Kannada.

News First Live Kannada


Leave a Reply

Your email address will not be published. Required fields are marked *