ನ್ಯೂರೋಪಾಥಾಲಜಿಯ ನಿವೃತ್ತ ಪ್ರಾಧ್ಯಾಪಕ, ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಪ್ರೊ. ಶಂಕರ್ ವಿಧಿವಶ | Emeritus Profess of Neuropathology and former Director of NIMHANS Dr SK Shankar no more


ನರರೋಗಶಾಸ್ತ್ರ ಮತ್ತು ನರವಿಜ್ಞಾನದ ಅತ್ಯಂತ ಗೌರವಾನ್ವಿತ ಶಿಕ್ಷಕ, ದೇಶ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಸಹೋದ್ಯೋಗಿಗಳು ಮತ್ತು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಂದ ಪ್ರೀತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಪ್ರೊ. ಶಂಕರ್ ಅವರು ಶಿಕ್ಷಕರ ದಿನದಂದೇ ಇಹಲೋಕ ತ್ಯಜಿಸಿದ್ದಾರೆ

ನ್ಯೂರೋಪಾಥಾಲಜಿಯ ನಿವೃತ್ತ ಪ್ರಾಧ್ಯಾಪಕ, ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಪ್ರೊ. ಶಂಕರ್ ವಿಧಿವಶ

ಡಾ.ಎಸ್.ಕೆ.ಶಂಕರ್

ನ್ಯೂರೋಪಾಥಾಲಜಿಯ ನಿವೃತ್ತ ಪ್ರಾಧ್ಯಾಪಕ ಮತ್ತು ನಿಮ್ಹಾನ್ಸ್‌ನ (NIMHANS) ಮಾಜಿ ನಿರ್ದೇಶಕ ಪ್ರೊ.ಎಸ್.ಕೆ ಶಂಕರ್ (Dr SK Shankar) ಸೆಪ್ಟೆಂಬರ್ 5ರಂದು ನಿಧನರಾದರು. ಅವರು ಸಂಸ್ಥೆಯಲ್ಲಿ 38 ವರ್ಷಗಳ ವಿಶಿಷ್ಟ ಸೇವೆ ಸಲ್ಲಿಸಿದ್ದರು. ನರರೋಗಶಾಸ್ತ್ರ ಮತ್ತು ನರವಿಜ್ಞಾನದ ಅತ್ಯಂತ ಗೌರವಾನ್ವಿತ ಶಿಕ್ಷಕ, ದೇಶ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಸಹೋದ್ಯೋಗಿಗಳು ಮತ್ತು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಂದ ಪ್ರೀತಿಸಲ್ಪಟ್ಟ ಮತ್ತು ಗೌರವಿಸಲ್ಪಟ್ಟ ಪ್ರೊ. ಶಂಕರ್ ಅವರು ಶಿಕ್ಷಕರ ದಿನದಂದೇ ಇಹಲೋಕ ತ್ಯಜಿಸಿದ್ದಾರೆ ಎಂದು ನಿಮಾನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಅವರು ಬಯೋಬ್ಯಾಂಕಿಂಗ್‌ನಲ್ಲಿ ಪ್ರವರ್ತಕರಾಗಿದ್ದರು. ದೇಶದಲ್ಲಿ ನರವಿಜ್ಞಾನದಲ್ಲಿ ಸಂಶೋಧನೆಯನ್ನು ಬೆಂಬಲಿಸಲು ಅವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮೊದಲ ಮತ್ತು ಏಕೈಕ ಬ್ರೈನ್ ಬ್ಯಾಂಕ್ ಅನ್ನು ಸ್ಥಾಪಿಸಿದರು. ಅವರನ್ನು ಭಾರತದಲ್ಲಿ ಬ್ರೈನ್ ಬ್ಯಾಂಕಿಂಗ್‌ನ ಪಿತಾಮಹ ಎಂದು ಪರಿಗಣಿಸಲಾಗುತ್ತದೆ . ಶಂಕರ್ ಅವರು ಬಯೋಬ್ಯಾಂಕ್ ಆಫ್ ಇಂಡಿಯಾ ಫೆಡರೇಶನ್‌ನಿಂದ ಪಯೋನೀರ್ ಇನ್ ಬಯೋಬ್ಯಾಂಕಿಂಗ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಅಂಗಾಂಗ ದಾನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅವರು ದೇಶದಲ್ಲಿ ನರವಿಜ್ಞಾನ ಸಂಶೋಧನೆ ಮತ್ತು ಬೋಧನೆಯನ್ನು ಬೆಂಬಲಿಸಲು ತಮ್ಮ ಮೆದುಳು , ಕಣ್ಣುಗಳು ಮತ್ತು ಹೃದಯವನ್ನು ದಾನ ಮಾಡಿದರು. ಅವರು ನ್ಯೂರೋಪಾಥಾಲಜಿ ಬ್ರೈನ್ ಮ್ಯೂಸಿಯಂ ಅನ್ನು ಸ್ಥಾಪಿಸಿದ್ದಾರೆ. ನರವಿಜ್ಞಾನದ ಜ್ಞಾನವನ್ನು ಪ್ರಸಾರ ಮಾಡಲು ಮತ್ತು ಯುವಕರಲ್ಲಿ ನರವಿಜ್ಞಾನದ ಅರಿವಿಗಾಗಿ ಸಾರ್ವಜನಿಕ ಮತ್ತು ಶಾಲಾ ಮಕ್ಕಳಿಗಾಗಿ ಅದನ್ನು ತೆರೆದರು.
ಸಮರ್ಪಿತ ಶಿಕ್ಷಕ, ಸಮೃದ್ಧ ಸಂಶೋಧಕ, ಶಿಸ್ತು ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದ ಅವರು ಅನೇಕರ ಜೀವನವನ್ನು ಸ್ಪರ್ಶಿಸಿದ್ದಾರೆ. ನರವಿಜ್ಞಾನ ಕ್ಷೇತ್ರದಲ್ಲಿ ದಂತಕಥೆಯಾಗಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ  ಎಂದು  ನಿಮ್ಹಾನ್ಸ್  ನಿರ್ದೇಶಕರಾದ ಡಾ ಪ್ರತಿಮಾ ಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.