ನ್ಯೂಸ್​ಫಸ್ಟ್ ವರದಿ ಬಳಿಕ ಬದಲಾವಣೆ: ಹೊಲಗಳಲ್ಲೇ ರೈತರಿಗೆ ವ್ಯಾಕ್ಸಿನೇಷನ್

ನ್ಯೂಸ್​ಫಸ್ಟ್ ವರದಿ ಬಳಿಕ ಬದಲಾವಣೆ: ಹೊಲಗಳಲ್ಲೇ ರೈತರಿಗೆ ವ್ಯಾಕ್ಸಿನೇಷನ್

ಬಳ್ಳಾರಿ: ನ್ಯೂಸ್ ‌ಫಸ್ಟ್ ವರದಿ ಬಳಿಕ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಬದಲಾವಣೆ ಕಂಡುಬಂದಿದ್ದು, ರೈತರು ಹೊಲದಲ್ಲಿಯೇ ಕೊರೊನಾ ಲಸಿಕೆ ಪಡೆದುಕೊಳ್ತಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಕುರೇಕುಪ್ಪ, ಹಳೆದರೋಜಿ ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕ್ತಿರೋ ಬಗ್ಗೆ ನ್ಯೂಸ್ ಫಸ್ಟ್ ಸುದ್ದಿ ಮಾಡಿತ್ತು. ಲಸಿಕೆ ಬೇಡವೆಂದಿದ್ದ ಮಂದಿ ಈಗ ಹೊಲಗಳಲ್ಲೇ ವ್ಯಾಕ್ಸಿನ್ ಪಡೀತಿದ್ದಾರೆ. ನ್ಯೂಸ್ ಫಸ್ಟ್ ವರದಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದ್ದು, ಈಗ ಹೊಲಗಳೇ ವ್ಯಾಕ್ಸಿನೇಷನ್‌ ಸೆಂಟರ್ ಆಗಿವೆ.

ಸಂಡೂರು ತಾಲೂಕು ಆಡಳಿತ ಅಧಿಕಾರಿಗಳು ಹಳೆ ದರೋಜಿ, ಕುರೇಕುಪ್ಪ ಗ್ರಾಮಗಳಲ್ಲಿ ರೈತರು ಕೆಲಸ ಮಾಡ್ತಿರೋ ಪ್ರತಿ ಹೊಲಕ್ಕೆ ತೆರಳಿ ವ್ಯಾಕ್ಸಿನ್ ಹಾಕುತ್ತಿದ್ದಾರೆ. ಸಂಡೂರು ತಹಶಿಲ್ದಾರ ರಶ್ಮಿ ಖುದ್ದಾಗಿ ತೆರಳಿ ಜನರಿಗೆ ವ್ಯಾಕ್ಸಿನೇಷನ್‌ ಬಗ್ಗೆ ತಿಳುವಳಿಕೆ ಹೇಳ್ತಿದ್ದಾರೆ.

ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಹೊಲಕ್ಕೆ ತೆರಳಿ ವ್ಯಾಕ್ಸಿನೇಷನ್‌ ಕಾರ್ಯದಲ್ಲಿ ತೊಡಗಿದ್ದಾರೆ. ಹೊಲದಲ್ಲಿ ಲಸಿಕೆ ಹಾಕಿಸಿಕೊಂಡು ರೈತರು ಖುಷಿ ಪಡ್ತಿದ್ದಾರೆ.

The post ನ್ಯೂಸ್​ಫಸ್ಟ್ ವರದಿ ಬಳಿಕ ಬದಲಾವಣೆ: ಹೊಲಗಳಲ್ಲೇ ರೈತರಿಗೆ ವ್ಯಾಕ್ಸಿನೇಷನ್ appeared first on News First Kannada.

Source: newsfirstlive.com

Source link