ನ್ಯೂಸ್​ ಟಿಆರ್​ಪಿ ವ್ಯವಸ್ಥೆ ಮರು ಜಾರಿ ವಿಳಂಬ: ಟಿವಿ9 ನೆಟ್​ವರ್ಕ್ ಅಸಮಾಧಾನ​​, NBDA ಗೆ ಬಹಿರಂಗ ಪತ್ರ | Arguing against suspension of only news genre ratings TV9 Network walks out of NBDA says TV9 Network CEO Barun Das in an open letter


ನ್ಯೂಸ್​ ಟಿಆರ್​ಪಿ ವ್ಯವಸ್ಥೆ ಮರು ಜಾರಿ ವಿಳಂಬ: ಟಿವಿ9 ನೆಟ್​ವರ್ಕ್ ಅಸಮಾಧಾನ​​, NBDA ಗೆ ಬಹಿರಂಗ ಪತ್ರ

ನ್ಯೂಸ್​ ಟಿಆರ್​ಪಿ ರೇಟಿಂಗ್​ ವ್ಯವಸ್ಥೆ ಮರು ಜಾರಿ ವಿಳಂಬವಾಗುತ್ತಿರುವುದರ ವಿರುದ್ಧ ಟಿವಿ9 ನೆಟ್​ವರ್ಕ್ ಅಸಮಾಧಾನ​​, NBDA ಗೆ ಬಹಿರಂಗ ಪತ್ರ

ನವದೆಹಲಿ: ಭಾರತದ ನಂಬರ್​ 1 ಸುದ್ದಿ ಸಂಸ್ಥೆಯಾದ ಟಿವಿ9 ನೆಟ್​ವರ್ಕ್ ಎನ್​ಬಿಡಿಎ ವ್ಯವಸ್ಥೆಯಿಂದ ಹೊರಬಂದಿದೆ. ದೇಶದ ಟಿವಿ ನ್ಯೂಸ್​ ಮಾಧ್ಯಮದ ಹಿತಾಸಕ್ತಿಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಟಿವಿ9 ನೆಟ್​ವರ್ಕ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಟಿಆರ್​ಪಿ ರೇಟಿಂಗ್​ ವ್ಯವಸ್ಥೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾಲ ವಿಳಂಬ ಮಾಡುತ್ತಿರುವ ಟಿವಿ ಮಾಧ್ಯಮ ಉದ್ಯಮ ಸಂಸ್ಥೆಯಾದ ಎನ್​ಬಿಡಿಎದ ಧೋರಣೆಯಿಂದ ಅಸಂತುಷ್ಟಗೊಂಡು ಟಿವಿ9 ನೆಟ್​ವರ್ಕ್ ಈ ನಿರ್ಧಾರಕ್ಕೆ ಬಂದಿದೆ.

ದೇಶದ ಟಿಆರ್​ಪಿ ರೇಟಿಂಗ್​ ವ್ಯವಸ್ಥೆಯಲ್ಲಿ ಅಗ್ರಗಣ್ಯ ಸ್ಥಾನ ಅಲಂಕರಿಸಿರುವ ಟಿವಿ9 ನೆಟ್​ವರ್ಕ್ ಟಿಆರ್​ಪಿ ರೇಟಿಂಗ್​ ವ್ಯವಸ್ಥೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾಲ ವಿಳಂಬ ಮಾಡುತ್ತಿರುವ ಟಿವಿ ಮಾಧ್ಯಮ ಉದ್ಯಮ ಸಂಸ್ಥೆಯಾದ ಎನ್​ಬಿಡಿಎದ (News Broadcasters & Digital Association-NBDA) ಧೋರಣೆಯಿಂದ ಅಸಂತುಷ್ಟಗೊಂಡು ಟಿವಿ9 ನೆಟ್​ವರ್ಕ್ (TV9 Network) ಈ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಟಿವಿ9 ನೆಟ್​ವರ್ಕ್​​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್​​​ ದಾಸ್ (Barun Das, TV9 Network CEO) ಅವರು NBDA ಆಡಳಿತ ಮಂಡಳಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. BARC data ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸುತ್ತಾ ಕಾಲಹರಣ ಮಾಡುತ್ತಿರುವ NBDA ಧೋರಣೆಯ ಬಗ್ಗೆ ಬರುಣ್​​​ ದಾಸ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸುದ್ದಿ ಮಾಧ್ಯಮದ ದತ್ತಾಂಶ ಮಾಹಿತಿಯನ್ನು ಬಿಡುಗಡೆಗೊಳಿಸುವಲ್ಲಿ NBDA ಇನ್ನೂ ವಿಳಂಬ ಮಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರವಷ್ಟೇ (ಜನವರಿ 14) NBDA ಸಂಸ್ಥೆಯು ಈ ಸಂಬಂಧ ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಟಿಆರ್​ಪಿ ರೇಟಿಂಗ್​ ವ್ಯವಸ್ಥೆಯನ್ನುಇನ್ನಷ್ಟು ಪಾರದರ್ಶಕಗೊಳಿಸಲು, ಸದೃಢಗೊಳಿಸಲು, ನಂಬಿಕಾರ್ಯಗೊಳಿಸಲು ಮತ್ತು ಈ ಪ್ರಯತ್ನದಲ್ಲಿ ಮಾನವಚಾಲಿತ ಹಸ್ತಕ್ಷೇಪವನ್ನು ತಡೆಯಲು ಟಿಆರ್​ಪಿ ರೇಟಿಂಗ್​ ವ್ಯವಸ್ಥೆ ಮರುಜಾರಿಗೆ ತರಲು ಇನ್ನೂ ಸಮಯ ಹಿಡಿಸಲಿದೆ ಎಂದು NBDA ಅಲವತ್ತುಕೊಂಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟಿವಿ9 ಸಿಇಒ ಬರುಣ್​​​ ದಾಸ್ ಅವರು NBDA ಸಂಸ್ಥೆಯ ಪೂರ್ಣಪ್ರಮಾಣದ ಸದಸ್ಯ ಸಂಸ್ಥೆಯಾದ ಟಿವಿ9 ನೆಟ್​ವರ್ಕ್ NBDA ತಳೆದಿರುವ ಈ ವಿಳಂಬ ಧೋರಣೆ ನಿರ್ಧಾರವನ್ನು ಒಪ್ಪುವುದಿಲ್ಲ. ಈ ನಿರ್ಧಾರವು NBDA ಸಂಸ್ಥೆಯ ಆಯ್ದ ಸದಸ್ಯರ ದೃಷ್ಟಿಕೋನವಾಗಿರಬಹುದು. ಖಂಡಿತವಾಗಿಯೂ ಇದು NBDA ಸಂಸ್ಥೆಯ ಇಡೀ ನಿರ್ಧಾರ ಆಗಿರುವುದಲ್ಲ ಎಂಬುದು ನಮ್ಮ ನಂಬಿಕೆ ಎಂದು ಬರುಣ್​​​ ದಾಸ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಣ ಸಚಿವಾಲಯವು (Information & Broadcasting -I&B) ಹೊಸದಾದ ನ್ಯೂಸ್​ ರೇಟಿಂಗ್​ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರುವಂತೆ ಸೂಚಿಸಿದ ಬಳಿಕ NBDA ಸಂಸ್ಥೆಯ ಈ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ. ಅನೇಕ ನ್ಯೂಸ್​ ಚಾನೆಲ್​ಗಳು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಆದಾಯ ಕಳೆದುಕೊಂಡು ಮತ್ತು ನಂಬಿಕಾರ್ಹತೆ ನಷ್ಟ ಅನುಭವಿಸುತ್ತಿವೆ. ಇದರ ಸಮ್ಮುಖದಲ್ಲಿ ಟಿವಿ ನ್ಯೂಸ್ ಮಾಧ್ಯಮ ಸಂಸ್ಥೆಗಳ ನಿರಂತರ ಪ್ರಯತ್ನದ ಫಲವಾಗಿ ಸಚಿವಾಲಯವು NBDAಗೆ ಈ ಸೂಚನೆ ನೀಡಿತ್ತು.

ಈ ಬೆಳವಣಿಗೆಗಳ ಸಮ್ಮುಖದಲ್ಲಿ NBDA ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ಸಂಸ್ಥೆಯಾದ ಟಿವಿ9 ನೆಟ್​ವರ್ಕ್, NBDA ಸಂಸ್ಥೆಗೆ ಈ ಬಗ್ಗೆ ನಿರಂತರವಾಗಿ ತಿಳಿಯ ಹೇಳಲು ಯತ್ನಿಸಿತು. ಅದರೆ ಅದು ನಿಷ್ಪ್ರಯೋಜಕವಾಗಿದೆ. ಹೇಳಬೇಕು ಅಂದರೆ ವಾಸ್ತವವಾಗಿ News TV ratings ಅನ್ನು ಮತ್ತೆ ಜಾರಿಗೆ ತರಲು NBDAಗೆ ಆಸಕ್ತಿಯೇ ಇದ್ದಂತಿಲ್ಲ. NBDA ಸಂಸ್ಥೆಯ ಮಾಧ್ಯಮ ಪ್ರಕಟಣೆಯು ಟಿವಿ ನ್ಯೂಸ್​ ಉದ್ಯಮದ ಪರಿಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿಸಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ಟಿವಿ9 ಸಿಇಒ ಬರುಣ್​​​ ದಾಸ್ ಅಭಿಪ್ರಾಯಪಟ್ಟಿದ್ದಾರೆ.

NBDA ಸಂಸ್ಥೆಯ ಸದಸ್ಯತ್ವದಿಂದ ಹಿಂದೆಸರಿಯುತ್ತಿರುವುದರ ಪರ ತಮ್ಮ ವಾದ ಮಂಡಿಸುತ್ತಾ ಟಿವಿ9 ಸಿಇಒ ಬರುಣ್​​​ ದಾಸ್ ಅವರು NBDA ಸಂಸ್ಥೆಯ ಜೊತೆ ನಾನು ಸತತವಾಗಿ ಮಾತುಕತೆಯಲ್ಲಿದ್ದೇನೆ. ಆದರೆ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನ್ಯೂಸ್​ ಮಾಧ್ಯಮಕ್ಕೆ ಸಂಬಂಧಪಟ್ಟಂತೆ ಅತ್ಯಂತ ನಿರ್ಣಾಯಕ ಸಂಗತಿಗಳ ಬಗ್ಗೆ NBDA ಸಂಸ್ಥೆಯು ಸಾರ್ವಜನಿಕ ವೇದಿಕೆಯಲ್ಲಿ ತನ್ನ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತಾ ಬಂದಿದೆ. ಇದನ್ನು ನಾನು ಸರ್ವತಾ ಅನುಮೋದಿಸಲಾರೆ. ಹಾಗಾಗಿ ಅನ್ಯಮಾರ್ಗವಿಲ್ಲದೆ ನಾನು ತಕ್ಷಣದಿಂದಲೇ ಜಾರಿಗೆ ಬರುವಂತೆ NBDA ಸಂಸ್ಥೆಯ ಸದಸ್ಯತ್ವದಿಂದ ಹೊರಬರುತ್ತಿದ್ದೇನೆ ಎಂದು ಟಿವಿ9 ಸಿಇಒ ಬರುಣ್​​​ ದಾಸ್ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

NBDA ಸಂಸ್ಥೆಯ ಸದಸ್ಯತ್ವದಿಂದ ಹೊರಬರಲು ಟಿವಿ9 ಸಿಇಒ ಬರುಣ್​​​ ದಾಸ್ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳು ಹೀಗಿವೆ:

1. ಇಡೀ ಟಿಆರ್​ಪಿ ರೇಟಿಂಗ್ ವಿಷಯದ ಬಗ್ಗೆ NBDA ಸಂಸ್ಥೆಯು ಸಾಗುತ್ತಿರುವ ಹಾದಿಯೇ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಅದು ನಾನು ಎತ್ತಿರುವ ಮೂಲ ಪ್ರಶ್ನೆಗೆ ಉತ್ತರವನ್ನೇ ನೀಡಿಲ್ಲ. BARC ratings ವ್ಯವಸ್ಥೆಯನ್ನು ತಡೆದಿದ್ದು ಯಾರು ಮತ್ತು ಯಾಕೆ? – ಇದು ನನ್ನ ಮೂಲ ಪ್ರಶ್ನೆ. ಆದರೆ ಇದಕ್ಕೆ NBDA ಸಂಸ್ಥೆಯ ಉತ್ತರ ಉದಾಸೀನವಾಗಿತ್ತು ಮತ್ತು ಬರುಬರುತ್ತಾ ಸಂಸ್ಥೆತು ಉತ್ತರ ನೀಡುವ ಗೋಜಿಗೇ ಹೋಗಿಲ್ಲ. ನಮ್ಮ ಕಂಪನಿಯ ಸೆಕ್ರೆಟರಿ 2021 ಡಿಸೆಂಬರ್ 13 ರಂದು ಈಮೇಲ್​ ಮೂಕ ಕೇಳಿರುವ ಈ ಕೆಳಗಿನ ಪ್ರಶ್ನೆಗಳಿಗೆ ಇದುವರೆಗೂ ತಾವು ಉತ್ತರ ಕೊಡುವ ಗೋಜಿಗೇ ಹೋಗಿಲ್ಲ.

ಎ) ನ್ಯೂಸ್​ ರೇಟಿಂಗ್ ಬಿಡುಗಡೆಯನ್ನು ಸ್ಥಗಿತಗೊಳಿಸುವುದಕ್ಕೆ ಕಾರಣಕರ್ತರು ಯಾರು ಮತ್ತು ಅದನ್ನು ನ್ಯೂಸ್​ ರೇಟಿಂಗ್ ಅನ್ನು ಸ್ಥಗಿತಗೊಳಿಸಿದ್ದು ಯಾಕೆ?

ಬಿ) ನ್ಯೂಸ್​ ರೇಟಿಂಗ್ ಬಿಡುಗಡೆಯನ್ನು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಸ್ಥಗಿತಗೊಳಿಸುವುದಕ್ಕೆ NBDA ಅವಕಾಶ ನೀಡಿದ್ದಾದರೂ ಹೇಗೆ? ಟಿವಿ ನ್ಯೂಸ್​ ಪ್ರಸಾರಕರ ಹಿತಾಸಕ್ತಿ ಕಾಯ್ದುಕೊಳ್ಳಲು ನ್ಯೂಸ್​ ರೇಟಿಂಗ್ ವ್ಯವಸ್ಥೆಯನ್ನು ಮರು ಜಾರಿಗೆ ತರುವ ನಿಟ್ಟಿನಲ್ಲಿ NBDA ಪರಿಣಾಮಕಾರಿಯಾಗಿ ಏಕೆ ಮಧ್ಯಸ್ಥಿಕೆ ವಹಿಸಲಿಲ್ಲ?

ಸಿ) ಟಿಆರ್​ಪಿ​ ರೇಟಿಂಗ್​ ವ್ಯವಸ್ಥೆಯಲ್ಲಿ ಕೇವಲ ನ್ಯೂಸ್​ ರೇಟಿಂಗ್ ವ್ಯವಸ್ಥೆ ಮಾತ್ರವೇ ಸ್ವಚ್ಛವಾಗಿಲ್ಲ, ಸದೃಢವಾಗಿಲ್ಲ, ಯಾವುದೇ ಮಾನವ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ ಎಂಬ ತೀರ್ಮಾನಕ್ಕೆ NBDA ಬಂದಿರುವುದೇಕೆ?

ಡಿ) ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ತಾಂತ್ರಿಕ ಸಮಿತಿಯು ನ್ಯೂಸ್​ ರೇಟಿಂಗ್ ವ್ಯವಸ್ಥೆಯಲ್ಲಿ ಸುಧಾರಣೆಗಳಿಗೆ ಸಲಹೆ ನೀಡಿದ್ದರೂ ನ್ಯೂಸ್​ ರೇಟಿಂಗ್ ವ್ಯವಸ್ಥೆ ಮರು ಜಾರಿಯಾಗಿಲ್ಲವೇಕೆ? ರೇಟಿಂಗ್​ ವ್ಯವಸ್ಥೆ ಇಲ್ಲದೇ ಜಾಹೀರಾತು ಆದಾಯಕ್ಕೆ ಭಾರೀ ಪೆಟ್ಟು ಬಿದ್ದಿರುವ ಸಂದರ್ಭದಲ್ಲಿ ನ್ಯೂಸ್​ ಚಾನೆಲ್​ಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಸುಧಾರಿತ ನ್ಯೂಸ್​ ರೇಟಿಂಗ್ ವ್ಯವಸ್ಥೆಯನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ NBDA ನಿಲುವು ಏನು?

6. NBDA ಮಾಧ್ಯಮ ಪ್ರಕಟಣೆಯಿಂದ ಮಾಧ್ಯಮ ಉದ್ಯಮಕ್ಕೆ ಆಗಿರುವ ಒಂದೇ ಒಂದು ಒಳಿತು ಏನೆಂದರೆ ನೀವು ಇದುವರೆಗೂ ಇದನ್ನೆಲ್ಲಾ ಅವಾಯ್ಡ್​ ಮಾಡುತ್ತಿರುವುದು ಜಗಜ್ಜಾಹೀರಾತಾಗಿದೆ ಎಂಬುದು ಸುಸ್ಪಷ್ಟವಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ನಿಸ್ಸಂದಿಗ್ಧ ಆದೇಶ ಮತ್ತು ನ್ಯೂಸ್​ ರೇಟಿಂಗ್​ ವ್ಯವಸ್ಥೆ ಮರು ಜಾರಿಗೊಳಿಸುವುದರ ಮಧ್ಯೆ NBDA ತೊಡಕಾಗಿ ನಿಂತಿರುವುದು ನೋಡಿದರೆ NBDA Boardಗೆ ಮಾತ್ರ BARC ratings ಬೇಡ ಎಂಬುದು ಸ್ಪಷ್ಟವಾಗುತ್ತದೆ. ಆದರೆ NBDA ಸದಸ್ಯ ಸಂಸ್ಥೆಯಾಗಿ ನಾವು ಮಂಡಳಿಯ ಈ ನಿರ್ಧಾರವನ್ನು ಸುತರಾಂ ಒಪ್ಪುವುದಿಲ್ಲ.

7. BARC ratings ಮರುಜಾರಿ ವಿಳಂಬವು ಆದಾಯ ಗಳಿಕೆ ದೃಷ್ಟಿಯಿಂದ ನೋಡಿದಾಗ ಟಿವಿ ನ್ಯೂಸ್​ ಉದ್ಯಮಕ್ಕೆ ತೊಡಕಾಗಿ ಪರಿಣಮಿಸಿದೆ. ಇದು ನ್ಯಾಯಯುತ ವಹಿವಾಟು ಪದ್ಧತಿ ಅಲ್ಲ ಎಂಬುದು ನನ್ನ ಭಾವನೆ. ಈ ಬೆಳವಣಿಗೆಗಳ ಸಮ್ಮುಖದಲ್ಲಿ ಹೆಚ್ಚು ಹೆಚ್ಚು ಜಾಹೀರಾತುದಾರರು ಹೊರಹೋಗಲು ತವಕಿಸುತ್ತಿರುವುದನ್ನು ನೋಡಿದಾಗ ಟಿವಿ ನ್ಯೂಸ್​ ಉದ್ಯಮವು ಅನಾನುಕೂಲಕ್ಕೆ ಈಡಾಗುವುದು ಖಚಿತ. ಮತ್ತೆ ಹೇಳಬೇಕು ಅಂದರೆ ಟಿವಿ ನ್ಯೂಸ್​ ಉದ್ಯಮದ ನೈಜ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿರುವುದು ಸ್ಷಷ್ಟವಾಗಿದೆ.

TV9 Kannada


Leave a Reply

Your email address will not be published. Required fields are marked *