ಸ್ಯಾಂಡಲ್​ವುಡ್​​ನ ಸಂಗೀತ ಸರೋವರ, ಸಾಹಿತ್ಯ ಶಿಖರ ಡಾ.ಹಂಸಲೇಖ ಸಂಗೀತ ಸಂಯೋಜನೆ ಅಮರ ಚಿತ್ರ ಕಥಾ ಸಿನಿಮಾದ ಪೋಸ್ಟರ್ ನಿಮ್ಮ ನ್ಯೂಸ್ ಫಸ್ಟ್​​​ನಲ್ಲಿ ಲಾಂಚ್ ಆಗಿದೆ.

ಪಿ.ವಿ.ಶಂಕರ್ ನಿರ್ದೇಶನ ಹಾಗೂ ನಿರ್ಮಾಣದ ಅಮರ ಚಿತ್ರ ಕಥಾ ಸಿನಿಮಾ ಪ್ರಕೃತಿ ಪ್ರೇಮವನ್ನ ಸಾರೋ ಸಿನಿಮಾವಾಗಿದೆ. ನಾದ ಬ್ರಹ್ಮ ಹಂಸಲೇಖ ಅವರ 70ನೇ ಬರ್ತ್​ಡೇ ಪ್ರಯುಕ್ತ ಅಮರ ಚಿತ್ರ ಕಥಾ ಸಿನಿಮಾದ ಮೊದಲ ಹಾಡು ‘ನರಮರ’ ಬಿಡುಗಡೆಯಾಗಿತ್ತು. ವಿಜಯ ಪ್ರಕಾಶ್ ಹಾಡಿರುವ ಹಾಡಿಗೆ ಚಿತ್ರಪ್ರೇಮಿಗಳು ಅದ್ಭುತ ರೆಸ್ಪಾನ್ಸ್ ಕೊಟ್ಟಿದ್ದರು.

ಈಗ ಚಿತ್ರದ ಪೋಸ್ಟರ್ ಸರದಿ.. ನ್ಯೂಸ್​​ ಫಸ್ಟ್​​​​ನ ನಿರೂಪಕರಾದ ನಿಖಿಲ್ ಜೋಶಿ ಹಾಗೂ ಜಾಹ್ನವಿ ಕಾರ್ತಿಕ್ ಪೋಸ್ಟರ್ ಲಾಂಚ್ ಮಾಡಿದ್ರು. ಸಿನಿಮಾದ ಕಥೆಯ ಪರಿಕಲ್ಪನೆಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಶ್ರೀಜೀತ್, ರಜಿನಿ ಭಾರಧ್ವಜ್, ಯಶ್ ಶೆಟ್ಟಿ ಸೇರಿದಂತೆ ಮುಂತಾದ ಕಲಾವಿದರು ಚಿತ್ರದ ಮುಖ್ಯಭೂಮಿಕೆಯ ಸದಸ್ಯರಾಗಿದ್ದಾರೆ. ಅಮರ ಚಿತ್ರ ಕಥಾ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಪೂರ್ತಿಯಾಗಿದ್ದು ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ.

The post ನ್ಯೂಸ್​ ಫಸ್ಟ್​​​ನಲ್ಲಿ ಹಂಸಲೇಖರ ‘‘ಅಮರ ಚಿತ್ರ ಕಥಾ’’ ಚಿತ್ರದ ಪೋಸ್ಟರ್ ಲಾಂಚ್ appeared first on News First Kannada.

Source: newsfirstlive.com

Source link