ಮಿರ ಮಿರ ಮೀಸೆ ಬಿಟ್ಟು ಹೊಸ ಲುಕ್​​ನಲ್ಲಿ ಕಿಕ್ ಕೊಡ್ತಿರೋ ನಟ ಶರಣ್ ತನ್ನ ಮಗಳ ಹಾಡಿಗೆ ತಾಳವಾಗಿದ್ದಾರೆ. ಹೌದು.. ಸ್ಯಾಂಡಲ್​ವುಡ್​​ನ ‘ಅಧ್ಯಕ್ಷ’ ಶರಣ್ ಹೃದಯ ‘ಅವತಾರ ಪುರುಷ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡ್ಕೊಂಡು ಜಡೇಶ್ ಕುಮಾರ್ ನಿರ್ದೇಶನದ ‘ಗುರು ಶಿಷ್ಯರು’ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು​​.

ಆದ್ರೆ ಈಗ ಲಾಕ್ ಡೌನ್ ಆದ ಕಾರಣ ಮನೆಯಲ್ಲೆ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ ಶರಣ್. ಈ ಸಂದರ್ಭದಲ್ಲಿ ಶರಣ್ ಅಕ್ಷಯ ತೃತಿಯ, ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷವಾಗಿ ಶುಭಾಶಯಗಳನ್ನ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

ಉತ್ತಮ ಅಭಿನಯದ ಜೊತೆಗೆ ಒಳ್ಳೆಯ ಗಾಯಕರಾಗಿರುವ ಶರಣ್ ತಮ್ಮ ಪುತ್ರಿ ಪುಣ್ಯ ಅವರ ಜೊತೆ ಸೇರಿ ಅಣ್ಣ ಬಸವಣ್ಣನವರ ‘‘ಕಳಬೇಡ ಕೊಲಬೇಡ’’ ವಚನವನ್ನ ಹೇಳಿ ಕನ್ನಡಿಗರಿಗೆ ಹಬ್ಬಗಳ ಶುಭಾಶಯಳಗನ್ನ ತಿಳಿಸಿದ್ದಾರೆ.

 

The post ನ್ಯೂ ಲುಕ್​ನಲ್ಲಿ ಶರಣ್​.. ಮಗಳ ಜೊತೆ ‘ಅಧ್ಯಕ್ಷರ’ ಗಾಯನ ಗೋಷ್ಠಿ ಹೇಗಿದೆ ಗೊತ್ತಾ? appeared first on News First Kannada.

Source: newsfirstlive.com

Source link