ಮೈಸೂರು:  ಜಿಲ್ಲಾ ಮಂತ್ರಿಗಳೇ ಬದುಕಿದ್ದೀರ..? ಮೈಸೂರು ಜಿಲ್ಲಾಡಳಿತ ಇದೆಯೇ? ಏನ್ ಮಾಡ್ತಿದೆ.  ಮೈಸೂರಿನಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲದೆ ಜನ ಸಾಯ್ತಾ ಇದ್ದಾರೆ ಅಂತ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಮಹಿಳೆಯೊಬ್ಬಳಿಗೆ ಆಕ್ಸಿಜನ್ ಬೆಡ್ ಕೊಡಿಸೋಕೆ ಆಗಲಿಲ್ಲ. ಆಕ್ಸಿಜನ್ ಇಲ್ಲದೆ ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದರು. ಕೆ.ಆರ್ ನಗರ ತಾಲ್ಲೂಕು ಆಸ್ಪತ್ರೆಯ ಎರಡು ವೆಂಟಿಲೇಟರ್ ತರಿಸಿಕೊಟ್ರೂ ಅದನ್ನ ಫಿಕ್ಸ್ ಮಾಡಲಿಲ್ಲ. ಅದನ್ನ ಫಿಕ್ಸ್ ಮಾಡಲು ಟೆಕ್ನಿಷಿಯನ್ ಬರಬೇಕೆಂದು ಹೇಳಿದ್ರು. ಆದ್ರೆ ಬೆಳಗಾಗುವುದರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದಾಳೆ. ನಾನು ರಾಜಕಾರಣ ಮಾಡುವುದಾಗಿದ್ರೆ ಆ ಮಹಿಳೆ ಶವವನ್ನ ಡಿಹೆಚ್‌ಓ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ಮಾಡ್ತಿದ್ವಿ ಎಂದು ಹೇಳಿದ್ರು. ಕೆ.ಆರ್ ನಗರಕ್ಕೆ 284 ವೈದ್ಯಕೀಯ ಸಿಬ್ಬಂದಿ ಬೇಕು. ಆದ್ರೆ ಕೇವಲ 50-60 ಮಂದಿ ಇದ್ದಾರೆ. ಏನ್ ಮಾಡ್ತಿದೆ ನಿಮ್ಮ ಜಿಲ್ಲಾಡಳಿತ, ಆರೋಗ್ಯ ಇಲಾಖೆ‌? ಎಂದು ಹರಿಹಾಯ್ದರು.

ಇದೇ ವೇಳೆ ಡಿ.ಸಿ ರೋಹಿಣಿ ಸಿಂಧೂರಿ ವಿರುದ್ದ ಕಿಡಿ ಕಾರಿದ ಸಾ.ರಾ.ಮಹೇಶ್, ಮೈಸೂರೇ ಪೋಸ್ಟಿಂಗ್ ಬೇಕು ಅಂತ ಹಠ ಹಿಡಿದು ಬಂದ್ರಲ್ಲ, ಏನ್ ಮಾಡ್ತಿದ್ದೀರ ನೀವು? ಎಂದು ಪ್ರಶ್ನಿಸಿದ್ರು. ಕಾರಿನ ಟೈರ್ ಪಂಕ್ಚರ್ ಹಾಕುವ ವಿಡಿಯೋ ಮಾಡಿಸಿ ಪಬ್ಲಿಸಿಟಿ ಪಡೆಯೋದಲ್ಲ.
ಏನ್ ಮಾಡ್ತಿದ್ದೀರ ನೀವು? ಬೆಂಗಳೂರು ಸ್ಥಿತಿಯನ್ನ ಮೈಸೂರಿಗೆ ತಂದೊಡ್ಡಬೇಡಿ. ಮೃತ ಕುಟುಂಬಗಳ ಶಾಪ‌ ನಿಮಗೆ ತಟ್ಟದೆ ಇರದು. ಮೈಸೂರು ಜನತೆಗೆ ಎಷ್ಟು ದಿನ ಅಂತ ಸುಳ್ಳು ಹೇಳ್ತೀರ ಅಂತ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: ‘ಮೇಡಂ ನೀವು ರೋಹಿಣಿ‌ ಸಿಂಧೂರಿ ತಾನೆ..’ ಕಾರಿಗೆ ಪಂಕ್ಚರ್ ಹಾಕಿದ ಡಿ.ಸಿ ಕಂಡು ಜನರಿಗೆ ಅಚ್ಚರಿ

ಗಾಡಿಗೆ ಪಂಕ್ಚರ್​ ಹಾಕಿದ ಡಿಸಿ ರೋಹಿಣಿ ಸಿಂಧೂರಿ

The post ‘ಪಂಕ್ಚರ್ ಹಾಕೋ ವಿಡಿಯೋ ಮಾಡಿಸಿ ಪಬ್ಲಿಸಿಟಿ ಪಡೆಯೋದಲ್ಲ..ಏನ್ ಮಾಡ್ತಿದ್ದೀರ?’ -ಸಾ.ರಾ ಮಹೇಶ್​ ವಾಗ್ದಾಳಿ appeared first on News First Kannada.

Source: newsfirstlive.com

Source link