ಬೆಂಗಳೂರು: ಅಪಘಾತವಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಸ್ಯಾಂಡಲ್​​ವುಡ್ ನಟ ಸಂಚಾರಿ ವಿಜಯ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಜಯ್ ಅವರ ಹೃದಯಬಡಿತ ಇವತ್ತು ಮುಂಜಾನೆ 3.34ರ ಸುಮಾರಿಗೆ ನಿಂತಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರವನ್ನ ಅಂತಿಮದರ್ಶನಕ್ಕೆ ಇಡಲಾಗಿದ್ದು, ಹಲವಾರು ಸ್ಯಾಂಡಲ್​ವುಡ್​ ನಟ ನಟಿಯರು ಕಲಾವಿದರು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಸಂಜೆ ವಿಜಯ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ವಿಜಯ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಮಾಜಿ ಶಾಸಕ ವೈ.ಎಸ್​.ವಿ ದತ್ತಾ, 10 ಗಂಟೆಗೆ ಇಲ್ಲಿಂದ ಪಾರ್ಥಿವ ಶರೀರವನ್ನ ತಗೊಂಡು ಹೊರಡ್ತೀವಿ. ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಎಲ್ಲಾ ವ್ಯವಸ್ಥೆ ಆಗಿದೆ ಎಂದು ತಿಳಿಸಿದ್ರು. ಕಡೂರು ಮಾರ್ಗ ಅಥವಾ ಚಿಕ್ಕನಾಯಕನಹಳ್ಳಿ ಮಾರ್ಗವಾಗಿಯೂ ಹೋಗಬಹುದು. ಕಡೂರು ತಾಲ್ಲೂಕು ಕೇಂದ್ರವಾಗಿರೋ ಹಿನ್ನೆಲೆ. ಅಲ್ಲಿನವರು ವ್ಯವಸ್ಥೆ ಮಾಡಬೇಕು ಅಂದಿದ್ದಾರೆ. ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ತಾರೆ ನೋಡಬೇಕು ಎಂದರು.

ರಘು ಅವರ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯಲ್ಲಿ ಪಾಲ್ಗೊಳ್ಳಲು 25 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕುಟುಂಬದ ಸದಸ್ಯರಿಗೆ ಮಾತ್ರ ಮೀಸಲು. ಪಂಚನಹಳ್ಳಿಯಲ್ಲಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಹೊಲದಲ್ಲಿ ಅಂತಿಮ ಕ್ರಿಯೆ ಮಾಡಲು ತೀರ್ಮಾನಿಸಿದ್ದೀವಿ ಎಂದು ಅವರು ತಿಳಿಸಿದ್ರು.

The post ಪಂಚನಹಳ್ಳಿಯಲ್ಲಿ ವಿಜಯ್ ಅಂತ್ಯಕ್ರಿಯೆ, 25 ಜನರಿಗೆ ಅವಕಾಶ – ವೈ.ಎಸ್​.ವಿ ದತ್ತಾ appeared first on News First Kannada.

Source: newsfirstlive.com

Source link