ಒಂದು ಕೇಂದ್ರಾಡಳಿತ ಹಾಗೂ ನಾಲ್ಕು ರಾಜ್ಯಗಳ ಚುನಾವಣಾ ಸಮೀಕ್ಷೆ ಹೊರಬಿದ್ದಿದ್ದು, ಸಂಚಲನ ಸೃಷ್ಟಿಸಿದೆ. ಸಮೀಕ್ಷೆಯ ಪ್ರಕಾರ ಬಂಗಾಳದಲ್ಲಿ ದೀದಿ ಮತ್ತೆ ಸಿಎಂ ಆಗ್ತಾರಂತೆ, ಅತ್ತ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಮುಂದುವರೆಸುತ್ತಂತೆ. ಇನ್ನು ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್​​ಡಿಎಫ್, ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಂತೆ.

ದೀದಿಗೆ ಬಂಗಾಳ, ಮೋದಿಗೆ ಅಸ್ಸಾಂ, ತಮಿಳುನಾಡಲ್ಲಿ ಡಿಎಂಕೆ ಕಮಾಲ್​​?

ಒಂದು ಕೇಂದ್ರಾಡಳಿತ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭಾ ಮತದಾನ ಪೂರ್ಣಗೊಂಡಿದ್ದು, ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ. ಇದರ ನಡುವೆ ಇವತ್ತು ಸಂಜೆ 5 ಸಂಸ್ಥೆಗಳ ಚುನಾವಣಾ ಸಮೀಕ್ಷೆ ರಿಲೀಸ್ ಆಗಿದ್ದು, ದೇಶದಲ್ಲಿ ಸಂಚಲನ ಸೃಷ್ಟಿಸಿದೆ.

ಪಶ್ಚಿಮ ಬಂಗಾಳ 

ಚುನಾವಣೆ ನಡೆದ ಒಟ್ಟು ಕ್ಷೇತ್ರಗಳು (294)
ರಿಪಬ್ಲಿಕ್ ಸಿಎನ್​​ಎಕ್ಸ್: ಟಿಎಂಸಿ​​ 128-138, ಬಿಜೆಪಿ 138-148, ಎಡಪಕ್ಷಗಳು 11-21, ಇತರೆ 00
ಜನ್​​​​ ಕಿ ಬಾತ್: ಟಿಎಂಸಿ104-121, ಬಿಜೆಪಿ 162-185, ಎಡಪಕ್ಷಗಳು 3-9, ಇತರೆ 00
ಸಿ ಓಟರ್: ಟಿಎಂಸಿ​​​​ 152-164, ಬಿಜೆಪಿ 109-121, ಎಡಪಕ್ಷಗಳು 14-25, ಇತರೆ 00

ಅಸ್ಸಾಂ

ಚುನಾವಣೆ ನಡೆದ ಒಟ್ಟು ಕ್ಷೇತ್ರಗಳು (126)
ರಿಪಬ್ಲಿಕ್ ಸಿಎನ್​​ಎಕ್ಸ್​​: ಬಿಜೆಪಿ 74-84, ಕಾಂಗ್ರೆಸ್ 40-50 ಇತರೆ 1-3
ಌಕ್ಸಿಸ್ ಮೈ ಇಂಡಿಯಾ: ಬಿಜೆಪಿ 75-85. ಕಾಂಗ್ರೆಸ್ 40-50, ಇತರೆ 1-4
ಟುಡೇಸ್ ಚಾಣಕ್ಯ: ಬಿಜೆಪಿ 61-79, ಕಾಂಗ್ರೆಸ್ 47-65. ಇತರೆ 0-3

ತಮಿಳುನಾಡು

ಚುನಾವಣೆ ನಡೆದ ಒಟ್ಟು ಕ್ಷೇತ್ರಗಳು (234)
ರಿಪಬ್ಲಿಕ್ ಸಿಎನ್​​ಎಕ್ಸ್​​: ಡಿಎಂಕೆ 160-170, ಎಐಎಡಿಎಂಕೆ 58-68, ಎಂಎನ್​ಎಂ  0-2, ಇತರೆ 0
ಟುಡೇಸ್ ಚಾಣಕ್ಯ: ಡಿಎಂಕೆ 164-186, ಎಐಎಡಿಎಂಕೆ 46-68, ಎಂಎನ್​ಎಂ 00, ಇತರೆ 0-08
ಇಂಡಿಯಾ ಟುಡೇ: ಡಿಎಂಕೆ175-195, ಎಐಎಡಿಎಂಕೆ 38-54, ಎಂಎನ್​ಎಂ 00-02,ಇತರೆ 1-7

ಕೇರಳ

ಚುನಾವಣೆ ನಡೆದ ಒಟ್ಟು ಕ್ಷೇತ್ರಗಳು (140)
ರಿಪಬ್ಲಿಕ್ ಸಿಎನ್​​ಎಕ್ಸ್​​: ಎಲ್​ಡಿಎಫ್ 72-80, ಯುಡಿಎಫ್ 58-64, ಎನ್​ಡಿಎ 01-05, ಇತರೆ 00
ಌಕ್ಸಿಸ್ ಮೈ ಇಂಡಿಯಾ: ಎಲ್​ಡಿಎಫ್ 104-120, ಯುಡಿಎಫ್​ 20-36, ಎನ್​ಡಿಎ 00-02, ಇತರೆ 00
ಟುಡೇಸ್ ಚಾಣಕ್ಯ: ಎಲ್​ಡಿಎಫ್ 102, ಯುಡಿಎಫ್ 35, ಎನ್​ಡಿಎ 03, ಇತರೆ 00

ಪುದುಚೆರಿ

ಚುನಾವಣೆ ನಡೆದ ಒಟ್ಟು ಕ್ಷೇತ್ರಗಳು (30)
ಸಮೀಕ್ಷೆ ಬಿಜೆಪಿ ಕಾಂಗ್ರೆಸ್ ಇತರೆ
ರಿಪಬ್ಲಿಕ್ ಸಿಎನ್​​ಎಕ್ಸ್​​: ಬಿಜೆಪಿ 16-20, ಕಾಂಗ್ರೆಸ್​ 11-13 ಇತರೆ 0

ಸಮೀಕ್ಷೆಗಳೇನೋ ಒಂದು ರಿಸಲ್ಟ್​ ಅಂತೂ ಕೊಟ್ಟಿದೆ. ಆದ್ರೆ ಮತದಾರನ ನಿಜವಾದ ಒಲವು ಮಾತ್ರ ಮೇ 2ರಂದು ಗೊತ್ತಾಗಲಿದೆ.

The post ಪಂಚರಾಜ್ಯಗಳ ಚುನಾವಣೆ: ಯಾವ ರಾಜ್ಯದಲ್ಲಿ ಯಾರಿಗೆ ವಿಕ್ಟರಿ..? ಇಲ್ಲಿದೆ ಎಲ್ಲಾ ಸಮೀಕ್ಷೆಗಳ ಡೀಟೇಲ್ಸ್​​​ appeared first on News First Kannada.

Source: newsfirstlive.com

Source link