ನವದೆಹಲಿ: ಪಂಚರಾಜ್ಯಗಳ ಫಲಿತಾಂಶ ಮೇ 2 ರಂದು ಹೊರಬೀಳಲಿದ್ದು, ವಿಜಯೋತ್ಸವಗಳನ್ನ ಆಚರಿಸದಂತೆ ಚುನಾವಣಾ ಆಯೋಗ ಖಡಕ್​ ಸೂಚನೆ ನೀಡಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇದನ್ನ ಸ್ವಾಗತಿಸಿದ್ದಾರೆ.

ಅಲ್ಲದೇ ಸಂಭ್ರಮಾಚರಣೆಯನ್ನ ಆನ್​​ಲೈನ್​​​ನಲ್ಲಿ ವರ್ಚ್ಯುಯಲ್​​ ಸಂವಾದದ ಮೂಲಕ ಆಚರಿಸಲು ನಿರ್ಧಾರ ಮಾಡಿದೆ. ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ತರುಣ್​ ಸಿಂಗ್​ ಪ್ರತಿಕ್ರಿಯೆ ನೀಡಿದ್ದು, ನಾವು ಚುನಾವಣೆಗಳಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಆದರೆ ಒಂದು ಜವಾಬ್ದಾರಿಯುತ ಪಕ್ಷವಾಗಿ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿಗಳಂತೆ ಸಂಭ್ರಮಾಚರಣೆ ಮಾಡಲಿದೆ ಎಂದು ತಿಳಿಸಿದ್ದಾರೆ.

The post ಪಂಚರಾಜ್ಯ ಚುನಾವಣೆ; ವರ್ಚ್ಯುವಲ್ ಮೂಲಕವೇ ಸಂಭ್ರಮಾಚರಣೆಗೆ ನಿರ್ಧರಿಸಿದ ಬಿಜೆಪಿ appeared first on News First Kannada.

Source: newsfirstlive.com

Source link