ಪಂಚ ರಾಜ್ಯಗಳ ‘ಚುನಾವಣೆ ಭವಿಷ್ಯ’ ನುಡಿದ ಸಿ-ವೋಟರ್; ನಾಯಕರ ಎದೆಬಡಿತ ಹೆಚ್ಚಿಸಿದ ಸಮೀಕ್ಷೆ


ಪಂಚರಾಜ್ಯದಲ್ಲಿ ಚುನಾವಣೆ ದಿನಾಂಕ ಹತ್ತಿರವಾಗ್ತಿದಂತೆ ಪ್ರಚಾರದ ಭರಾಟೆ ಜೋರಾದ್ರೆ, ಮತ್ತೊಂದಡೆ ಸಮೀಕ್ಷೆಯಲ್ಲಿ ಏನ್​ ಬರುತ್ತೆ ಅಂತ ಪಕ್ಷದ ನಾಯಕರು ಕಾಯುತ್ತಿದ್ದವರಿಗೆ ಇದೀಗ ಸಮೀಕ್ಷೆ ಹೊರಬಿಳುತ್ತಿದಂತೆ ನಾಯಕರಿಗೆ ಎದೆಬಡಿಬಡಿತ ಶುರುವಾಗಿದೆ.

ಯುಪಿಯಲ್ಲಿ ಮತ್ತೆ ಗದ್ದುಗೆ ಹಿಡಿಯಲಿದೆ ಬಿಜೆಪಿ!
ಪಂಚರಾಜ್ಯ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಾಯಕರು ಮಿಂಚಿನ ಸಂಚಾರ ನಡೆಸ್ತಿದ್ದಾರೆ. ಮತದಾರರ ಮನಗೆಲ್ಲಲು ಆಶ್ವಾಸನೆಗಳ ಸುರಿಮಳೆಗೈಯುತ್ತಿದ್ದಾರೆ. ಇದರ ಮಧ್ಯದಲ್ಲೇ ಮತ್ತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗದ್ದುಗೆ ಏರಲಿದೆ ಅಂತಾ ಎಬಿಪಿ ಮತ್ತು ಸಿ ವೋಟರ್​ ಸಮೀಕ್ಷೆ ಭವಿಷ್ಯ ನುಡಿದಿದೆ. ಇತ್ತ ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ತಲೆಕೆಳಗಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.

ಯಾವ ರಾಜ್ಯದಲ್ಲಿ ಎಷ್ಟೇಷ್ಟು..?

ಉತ್ತರ ಪ್ರದೇಶ

 • ಬಿಜೆಪಿ-225-237 ಸೀಟ್​
 • ಎಸ್​ಪಿ-139-155 ಸೀಟ್​
 • ಬಿಎಸ್​ಪಿ-13-21 ಸೀಟ್​
 • ಕಾಂಗ್ರೆಸ್​ -4-8 ಸೀಟ್
 • ಇತರೆ-2-6 ಸೀಟ್​

ಪಂಜಾಬ್​

 • ಎಎಪಿ-55 – 63 ಸ್ಥಾನ​
 • ಕಾಂಗ್ರೆಸ್​-24 – 30 ಸ್ಥಾನ
 • ಅಕಾಲಿದಳ-20-26 ಸ್ಥಾನ

ಉತ್ತರಾಖಂಡ

 • ಬಿಜೆಪಿ- 31-37 ಸ್ಥಾನ
 • ಕಾಂಗ್ರೆಸ್​-30-36 ಸ್ಥಾನ
 • ಎಎಪಿ-2-4 ಸ್ಥಾನ
 • ಇತರೆ-1 ಸ್ಥಾನ

ಗೋವಾ

 • ಬಿಜೆಪಿ-14- 18 ಸೀಟ್​
 • ಕಾಂಗ್ರೆಸ್-10-14 ಸೀಟ್​
 • ಎಎಪಿ-4-8 ಸೀಟ್​
 • ತೃಣಮೂಲ ಕಾಂಗ್ರೆಸ್-3-7 ಸೀಟ್​​

ಮಣಿಪುರ

 • ಬಿಜೆಪಿ-21-25 ಸ್ಥಾನ
 • ಕಾಂಗ್ರೆಸ್​-17-26 ಸ್ಥಾನ

ಒಲ್ಲದ ಮನಸ್ಸಿನಿಂದ ಮನೆ ಮನೆ ಪ್ರಚಾರ ನಡೆಸಿದ ಸಿಧು!
ಇತ್ತ ಪಂಜಾಬ್​ನಲ್ಲಿ ಕಾಂಗ್ರೆಸ್​ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕು ಕಾಂಗ್ರೆಸ್​ ನಾಯಕರು ಇಲ್ಲಸಲ್ಲದ ಕಸರತ್ತು ನಡೆಸುತ್ತಿದೆ. ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಪರ ಕಾಂಗ್ರೆಸ್​​ ಹೈಕಮಾಂಡ್​ ನಾಯಕರು ಭರ್ಜರಿ ಪ್ರಚಾರ ತೊಡಗಿದ್ದಾರೆ. ಆದ್ರೆ ಈ ಭಾರಿ ಆಡಳಿತರೂಢ ಕಾಂಗ್ರೆಸ್​ ಪಕ್ಷಕ್ಕೆ ಮುಳುಬಾಗಬಹುದು ಎಂದು ಎಬಿಪಿ ಮತ್ತು ಸಿವೋಟರ್​ ಸಮೀಕ್ಷೆ ತಿಳಿಸಿದ್ರೆ. ಇತ್ತ ಸಿಧುಗೆ ಸಿಎಂ ಅಭ್ಯರ್ಥಿ ಕೈತಪ್ಪಿದ್ದರಿಂದ ಬಾರದ ಮನಸ್ಸಿನಿಂದ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಇತ್ತ ಚರಣ್ ಜೀತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅಕ್ರಮ ಮರಳು ಗಣಿಗಾರಿಕೆ, ಜೊತೆಗೆ ಭ್ರಷ್ಟಾಚಾರದ ಆರೋಪ ಕಾಂಗ್ರೆಸ್​ ಮುಳುವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಇತ್ತ ಇಬ್ಬರ ನಡುವೆ ಮೂರನೇಯವರಿಗೆ ಲಾಭ ಎನ್ನುವಂತೆ ಬಿಜೆಪಿ ನಾಯಕ ಒಳಗೊಳಗೆ ಬಾಲಿವುಡ್​ ನಟಿ ಮಹಿ ಗಿಲ್‌ರನ್ನ ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಇತ್ತ ಪಂಜಾಬ್​. ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳಲ್ಲಿ ಬಿಜೆಪಿ- ಕಾಂಗ್ರೆಸ್​ ನೆಟ್​ ನೆಟ್​ ಫೈಟ್​ ನಡೆಸುತ್ತಿದೆ. ಆದ್ರೆ ಪಂಜಾಬ್​ನಲ್ಲಿ ಎಎಪಿ ಪಕ್ಷ ಮುನ್ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಪಂಚರಾಜ್ಯಗಳಲ್ಲಿ ಆಡಳಿತರೂಢ ಪಕ್ಷಗಳು ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ಇತ್ತ ಸಿ-ವೋಟರ್​ ಪ್ರಕಾರ ಪಂಜಾಬ್​ಗೆ ಕಾಂಗ್ರೆಸ್​ ತಲೆಕೆಳಗಾಗಬಹುದು ಎಂಬ ವರದಿಗೆ ಸಿಎಂ ಚರಣ್ ಜೀತ್ ಸಿಂಗ್ ಚನ್ನಿ ಎದೆಬಡಿತವನ್ನ ಹೆಚ್ಚು ಮಾಡಿಸಿದೆ.

News First Live Kannada


Leave a Reply

Your email address will not be published.