ಪಂಜಾಬ್​ನಲ್ಲಿ ಅಪಘಾತದಲ್ಲಿ ಕನ್ನಡಿಗ ಯೋಧ ಮೃತ: ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ | Karnataka Haveri soldier died in Accident in Punjab: Funeral today


ಪಂಜಾಬ್​ನಲ್ಲಿ ಬಟಿಂಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತದಲ್ಲಿ ಮೃತರಾಗಿದ್ದ ಶಿಗ್ಗಾಂವಿ ತಾಲೂಕಿನ ಶೀಲವಂತಸೋಮಾಪುರ ಗ್ರಾಮದ ಯೋಧ ಶಿವರಾಜ ಗಂಗಮ್ಮನವರ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ.

ಪಂಜಾಬ್​ನಲ್ಲಿ ಅಪಘಾತದಲ್ಲಿ ಕನ್ನಡಿಗ ಯೋಧ ಮೃತ: ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

ಮೃತ ಯೋಧ ಶಿವರಾಜ ಗಂಗಮ್ಮನವರ

ಹಾವೇರಿ: ಪಂಜಾಬ್​ನಲ್ಲಿ (Punjab) ಬಟಿಂಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತದಲ್ಲಿ ಮೃತರಾಗಿದ್ದ ಶಿಗ್ಗಾಂವಿ ತಾಲೂಕಿನ ಶೀಲವಂತಸೋಮಾಪುರ ಗ್ರಾಮದ ಯೋಧ ಶಿವರಾಜ ಗಂಗಮ್ಮನವರ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ. ಶಿಗ್ಗಾಂವಿ ಪಟ್ಟಣ, ದುಂಡಸಿ ಗಂಗ್ಯಾನೂರ ಗ್ರಾಮದ ಮೂಲಕ ಮೆರವಣಿಗೆ ಮುಖಾಂತರ ಪಾರ್ಥೀವ ಶರೀರ ಶೀಲವಂತಸೋಮಾಪುರ ಗ್ರಾಮಕ್ಕೆ ತಲುಪಿದೆ. ಗ್ರಾಮದ ಸರಕಾರಿ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ  ಗೌರವ ಸಲ್ಲಿಸಿದರು. ಸಾರ್ವಜನಿಕ ದರ್ಶನದ ನಂತರ ಗ್ರಾಮದ ಬಸ್ ನಿಲ್ದಾಣದ ಬಳಿ ಯೋಧನ ಅಂತ್ಯಕ್ರಿಯೆ ನಡೆಯಲಿದೆ.

ಅಕ್ಟೋಬರ್ 1 ಪಂಜಾಬ್​ದ ಬಟಿಂಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನ್ನಡಿಗ ಯೋಧ ಶಿವರಾಜ ಗಂಗಮ್ಮನವರ (23) ಅಪಘಾತದಲ್ಲಿ ಮೃತಪಟ್ಟಿದ್ದರು. ಶಿಗ್ಗಾಂವಿ ತಾಲೂಕಿನ ಶೀಲವಂತಸೋಮಾಪುರ ಗ್ರಾಮದ ಶಿವರಾಜ ಗಂಗಮ್ಮನವರ 2016ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಅ.1 ರಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಯೋಧ ಶಿವರಾಜ ಗಂಗಮ್ಮನವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದರು. ವೀರಯೋಧ ಶಿವರಾಜ್ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.