14ನೇ ಆವೃತ್ತಿಯ ಐಪಿಎಲ್​​ನ ಇಂದಿನ ಹಣಾಹಣಿಯಲ್ಲಿ ಪಂಜಾಬ್​ ಕಿಂಗ್ಸ್​ ಹಾಗೂ ಕೊಲ್ಕತ್ತಾ ನೈಟ್​​ ರೈಡರ್ಸ್​​ ತಂಡಗಳು ಮುಖಾಮುಖಿಯಾಗ್ತಿವೆ. ಐಪಿಎಲ್​​ನ ಮೊದಲ ಪಂದ್ಯದ ಆಯೋಜನೆಗೆ ಅಹ್ಮದಾಬಾದ್​ನ ನಮೋ ಅಂಗಳ ಸಜ್ಜಾಗಿದೆ. ಆಡಿದ 5 ಪಂದ್ಯಗಳಲ್ಲಿ 2 ಮಾತ್ರ ಗೆದ್ದಿರೋ ಜಿಂಟಾ ಬಾಯ್ಸ್​ ಇಂದು ಗೆಲುವನ್ನ ಎದುರು ನೋಡ್ತಾ ಇದ್ದಾರೆ. ಮತ್ತೊಂದು ಕಡೆ ಸತತ ಸೋಲಿನಿಂದ ಕಂಗೆಟ್ಟಿರುವ ಶಾರೂಖ್​ ಹುಡುಗ್ರು ನಮೋ ಅಂಗಳದಲ್ಲಿ ಸೋಲಿನ ಸರಪಳಿ ಕಳಚೋ ಲೆಕ್ಕಾಚಾರದಲ್ಲಿದ್ದಾರೆ.

ಹ್ಯಾಟ್ರಿಕ್​ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಝಿಂಟಾ ಬಾಯ್ಸ್​ ಈಗ ನಮೋ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿದೆ. ಚೆಪಾಕ್​ನಲ್ಲಿ ಆಡಿದ ಕೊನೇ ಪಂದ್ಯದಲ್ಲಿ ಸಂಘಟಿತ ಹೋರಾಟದೊಂದಿಗೆ ಗೆಲುವಿನ ಟ್ರ್ಯಾಕ್​ಗೆ​ ಮರಳಿರೋದು ತಂಡದ ವಿಶ್ವಾಸ ಹೆಚ್ಚಿಸಿದೆ. ಅತ್ತ ಸತತ 4 ಸೋಲು ಕಂಡಿರೋದು ಕೆಕೆಆರ್​ ಪಾಳಯವನ್ನ ಚಿಂತೆಗೆ ದೂಡಿದೆ.

ನಮೋ ಅಂಗಳದಲ್ಲಿ ನಡೆಯುತ್ತಾ ರಾಹುಲ್​ ಮೇನಿಯಾ..?
ಸದ್ಯ ಐಪಿಎಲ್​​ನಲ್ಲಿ ರನ್​​​ಮಳೆ ಸುರಿಸ್ತಿರೋ ಪಂಜಾಬ್​ ನಾಯಕ ಕೆ,ಎಲ್.ರಾಹುಲ್​ ನಮೋ ಅಂಗಳದಲ್ಲಿ ಸಂಪೂರ್ಣ ಫೇಲ್​ ಆಗಿದ್ದಾರೆ. ಹೀಗಾಗಿಯೇ ನಮೋ ಅಂಗಳದಲ್ಲಿ ರಾಹುಲ್​ ಮೇನಿಯಾ ನಡೆಯುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ರಾಹುಲ್​ ಜೊತೆಗೆ ಮಾಯಾಂಕ್​ ಅಗರ್ವಾಲ್​, ಕ್ರಿಸ್​​ ಗೇಲ್​, ದೀಪಕ್​ ಹೂಡಾ ಮೇಲೂ ನಿರೀಕ್ಷೆಯ ಭಾರವೇ ಇದೆ. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್​ ಪೂರನ್​, ಶಾರೂಖ್​ ಖಾನ್​, ಹೆನ್ರಿಕ್ಸ್​​ ಕೂಡ ಸಿಡಿಯಬೇಕಾದ ಅನಿವಾರ್ಯತೆ ಇದೆ.

ಬೌಲಿಂಗ್​ ವಿಭಾಗದಲ್ಲಿ ಅನುಭವಿ ಮಹಮ್ಮದ್​ ಶಮಿ, ಆರ್ಶ್​ದೀಪ್​ ಸಿಂಗ್​​, ಸ್ಪಿನ್ನರ್​ ರವಿ ಬಿಷ್ನೋಯಿರನ್ನ ಒಳಗೊಂಡ ಪಂಜಾಬ್​ ಮೆಲ್ನೋಟಕ್ಕೆ ಬಲಿಷ್ಠವಾಗಿ ಕಾಣ್ತಿದೆ. ಆದ್ರೆ ಮುಂಬೈ ವಿರುದ್ಧದ ಕಳೆದ ಪಂದ್ಯ ಬಿಟ್ರೆ ಉಳಿದ್ಯಾವ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಸ್ಪರ್ಧಾತ್ಮಕ ಪಿಚ್​ನಲ್ಲಿ ನಡೆಯೋ ಇಂದಿನ ಪಂದ್ಯದಲ್ಲಿ ಬೌಲಿಂಗ್​​ ವಿಭಾಗ ಸಮರ್ಥ ಪ್ರದರ್ಶನ ನೀಡಬೇಕಿದೆ. ಜಾಯ್​​ ರಿಚರ್ಡ್​ಸನ್​ ಕೂಡ ಇಂದು ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ.

ಕಿಂಗ್ಸ್​​ ವಿರುದ್ಧ ಕಮಾಲ್​ ಮಾಡ್ತಾರಾ ಶಾರೂಖ್​ ಹುಡುಗ್ರು..?
ಐಪಿಎಲ್​ನಲ್ಲಿ ಶುಭಾರಂಭ ಮಾಡಿದ್ದ ಇಯಾನ್​ ಮಾರ್ಗನ್​ ನೇತೃತ್ವದ ಕೆಕೆಆರ್​ ನಂತರ ಬ್ಯಾಕ್​ ಟು ಬ್ಯಾಕ್​ ನಾಲ್ಕು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ. ತಂಡದ ಅಸ್ಥಿರ ಪ್ರದರ್ಶನ ಗೆಲುವಿನ ಅಂಚಿನಲ್ಲಿ ಸೋಲಿಗೆ ಗುರಿ ಮಾಡ್ತಿದೆ. ಪಂಜಾಬ್​ಗೆ ಪಂಚ್​ ನೀಡಬೇಕಂದ್ರೆ ಶಾರೂಕ್​ ಹುಡುಗ್ರು ಇಂದು ಸಂಘಟಿತ ಹೋರಾಟ ನಡೆಸಬೇಕಿದೆ.

ಇಂದಿನ ಪಂದ್ಯದಲ್ಲಿ ಕೆರಿಬಿಯನ್​ ದೈತ್ಯರೇ ಅಟ್ರಾಕ್ಷನ್​ !
ವಿಂಡೀಸ್​​ ದಾಂಡಿಗರೇ ಇಂದಿನ ಪಂದ್ಯದ ಸೆಂಟರ್​​ ಆಫ್​​ ಅಟ್ರಾಕ್ಷನ್​ ಪಂಜಾಬ್​ ಕಿಂಗ್ಸ್​ನಲ್ಲಿ ಕ್ರಿಸ್​​​ಗೇಲ್​, ನಿಕೋಲಸ್​ ಪೂರನ್​, ಕೊಲ್ಕತ್ತಾ ನೈಟ್​​ ರೈಡರ್ಸ್​​ ತಂಡದಲ್ಲಿ ಸುನಿಲ್​​ ನರೇನ್​, ಆಂಡ್ರೋ ರಸೆಲ್​, ಈ ನಾಲ್ವರ ಮುಖಾಮುಖಿ ಪಂದ್ಯದ ಕುತೂಹಲವನ್ನ ಡಬಲ್​​ ಮಾಡಿದೆ.

The post ಪಂಜಾಬ್​ಗೆ ಪಂಚ್​​ ನೀಡ್ತಾರಾ ನೈಟ್​ ರೈಡರ್ಸ್? ಇಂದಿನ ಪಂದ್ಯದಲ್ಲಿ ಕೆರಿಬಿಯನ್ ದೈತ್ಯರೇ ಅಟ್ರ್ಯಾಕ್ಷನ್ appeared first on News First Kannada.

Source: News First Kannada
Read More