ಪಂಜಾಬ್​: ಪಂಜಾಬ್​ನಲ್ಲಿ 2022ಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದ್ದು ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ತಯಾರಿಗಳನ್ನ ನಡೆಸುತ್ತಿವೆ. ಈ ಮಧ್ಯೆ ಪಂಜಾಬ್​ನ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದಿರುವ ಶಿರೋಮಣಿ ಅಕಾಲಿದಳ ಪಾರ್ಟಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

ಇಂದು ಎರಡೂ ಪಕ್ಷಗಳು ಮೈತ್ರಿ ಘೋಷಿಸಿಕೊಂಡಿದ್ದು ನಂತರ ಹೇಳಿಕೆ ನೀಡಿರುವ ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖ್​ಬೀರ್ ಸಿಂಗ್ ಬಾದಲ್.. ಮುಂದಿನ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಲನ್ನಪ್ಪುವುದು ಖಚಿತ. ಅತಿಯಾಗಿ ದ್ವೇಷಿಸಿದ ವ್ಯಕ್ತಿಯ ಬಗ್ಗೆ ಚುನಾವಣೆ ನಡೆಸಿದ್ರೆ ಅಮರಿಂದರ್ ಸಿಂಗ್ ಅವರ ಫಲಿತಾಂಶ ಬರುತ್ತದೆ. ನಾವು ಮಾತ್ರವಲ್ಲ ಕಾಂಗ್ರೆಸ್​ನ ಎಮ್​ಎಲ್​ಎಗಳೂ ಸಹ ಅವರ ವಿರುದ್ಧವೇ ಇದ್ದಾರೆ.

ನಾವು ಬಿಎಸ್​ಪಿ ಜೊತೆಗೆ 1996 ರಲ್ಲಿ ಮೈತ್ರಿ ಮಾಡಿಕೊಂಡಿದ್ದೆವು. ಆಕಸ್ಮಿಕವಾಗಿ ನಾವು ಕಳೆದ 25 ವರ್ಷಗಳಿಂದ ಬೇರೆಯಾಗಿ ಉಳಿದೆವು. ನಮ್ಮ ಎರಡೂ ಪಕ್ಷಗಳ ಸಿದ್ಧಾಂತ ಒಂದೇ.. ನಮ್ಮ ಅತಿದೊಡ್ಡ ಅಡ್ವಾಂಟೇಜ್ ಎಂದರೆ 1+1 ಫಲಿತಾಂಶ 2 ಅಲ್ಲ. ಇದು 11 ಆಗುತ್ತದೆ. 1996 ರಲ್ಲಿ ನಾವು ಕ್ಲೀನ್ ಸ್ವೀಪ್ ಮಾಡಿದ್ದೆವು. ಈ ಬಾರಿಯೂ ಅದು ಪುನರಾವರ್ತನೆಯಾಗಲಿದೆ ಎಂದು ಸುಖ್​ಬೀರ್ ಸಿಂಗ್ ಬಾದಲ್ ಹೇಳಿಕೆ ನೀಡಿದ್ದಾರೆ,.

The post ಪಂಜಾಬ್​ನಲ್ಲಿ ಅಕಾಲಿದಳ-ಬಿಎಸ್​ಪಿ ಮೈತ್ರಿ: 1+1=11 ಎಂದ ಸುಖ್​ಬೀರ್ ಸಿಂಗ್ ಬಾದಲ್ appeared first on News First Kannada.

Source: newsfirstlive.com

Source link