ಪಂಜಾಬ್: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಂಜಾಬ್​ ಜನರಿಗೆ ಇಂದು ಭರ್ಜರಿ ಆಫರ್ ನೀಡಿದ್ದಾರೆ. 2022ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ​​ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ “ಉಚಿತ ವಿದ್ಯುತ್” ಒದಗಿಸುವ ಬಗ್ಗೆ ಘೋಷಿಸಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಂಜಾಬ್​ನ ಪ್ರತಿ ಕುಟುಂಬಕ್ಕೆ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ​ ಸೇರಿದಂತೆ ಹಲವು ಆಶ್ವಾಸನೆಗಳನ್ನ ನೀಡಿದ್ರು.

  • ನಾವು ಇಲ್ಲಿ 3 ಪ್ರಮುಖ ಕೆಲಸಗಳನ್ನ ಮಾಡಲಿದ್ದೇವೆ. ಪ್ರತಿ ಕುಟುಂಬಕ್ಕೆ 300 ಯೂನಿಟ್​ ಉಚಿತ ವಿದ್ಯುತ್​ ನೀಡಲಿದ್ದೇವೆ.
  • ಬಾಕಿ ಉಳಿಸಿಕೊಂಡಿರೋ ಎಲ್ಲಾ ಡೊಮೆಸ್ಟಿಕ್(ಮನೆಬಳಕೆ) ವಿದ್ಯುತ್​ ಬಿಲ್ ಮನ್ನಾ ಮಾಡುತ್ತೇವೆ. ವಿದ್ಯುತ್​ ಸಂಪರ್ಕ ಮರಳಿ ನೀಡುತ್ತೇವೆ.
  • ಮೂರನೆಯದ್ದು.. 24 ಗಂಟೆಯೂ ವಿದ್ಯುತ್ ಪೂರೈಕೆ​ ನೀಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ರು.

ನಾವು 2013ರಲ್ಲಿ ದೆಹಲಿಯಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಸಂದರ್ಭದಲ್ಲಿ ಜನರಿಗೆ  ಗೊಂದಲಕಾರಿಯಾದ ವಿದ್ಯುತ್ ಬಿಲ್ ಬರುತ್ತಿತ್ತು. ಪಂಜಾಬ್‌ನಂತೆಯೇ ಅಲ್ಲಿ ಸರ್ಕಾರ ವಿದ್ಯುತ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಈಗ ದೆಹಲಿಯಲ್ಲಿ 24 ಗಂಟೆಯೂ  ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಇದೆ. ನಾವು ಇದನ್ನು ಪಂಜಾಬ್‌ನಲ್ಲಿಯೂ ಮಾಡಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ರು.

The post ಪಂಜಾಬ್​ನಲ್ಲಿ ‘ಆಪ್’ ಗೆದ್ದರೆ ಕರೆಂಟ್ ಭಾಗ್ಯ: ಪ್ರತಿ ಕುಟುಂಬಕ್ಕೆ 300 ಯೂನಿಟ್​ ಫ್ರೀ ವಿದ್ಯುತ್​ appeared first on News First Kannada.

Source: newsfirstlive.com

Source link