ಚುನಾವಣಾ ರ್ಯಾಲಿಯಲ್ಲಿ ಪಂಜಾಬ್ ಸಿಎಂ ಚನ್ನಿ
ದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಗೆ (Punjab polls) ಕಾಂಗ್ರೆಸ್ (Congress) ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಒಂದು ಲಕ್ಷ ಸರ್ಕಾರಿ ಉದ್ಯೋಗ, ಮಹಿಳೆಯರಿಗೆ ತಿಂಗಳಿಗೆ 1,100 ರೂ., ವರ್ಷಕ್ಕೆ 8 ಉಚಿತ ಅಡುಗೆ ಅನಿಲ ಸಿಲಿಂಡರ್ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಎಣ್ಣೆಬೀಜ, ಬೇಳೆಕಾಳು ಮತ್ತು ಜೋಳವನ್ನು ಸರ್ಕಾರಿ ಸಂಸ್ಥೆಗಳಿಂದ ಸಂಗ್ರಹಿಸುವುದಾಗಿ ಪಕ್ಷ ಭರವಸೆ ನೀಡಿದೆ. “ಸಮುದ್ರ ಶಾಂತವಾಗಿರುವಾಗ ಯಾರಾದರೂ ನಾವಿಕ ಆಗಬಹುದು, ಆದರೆ ಚಂಡಮಾರುತ ಬಂದಾಗ, ನಾವು ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಇದು ಈ ಪ್ರಣಾಳಿಕೆಯ ಉದ್ದೇಶವಾಗಿದೆ ಎಂದು ನವಜೋತ್ ಸಿಂಗ್ ಸಿಧು ಹೇಳಿದರು. ಕಾಂಗ್ರೆಸ್ ಪಕ್ಷದ 13 ಅಂಶಗಳ ಕಾರ್ಯಸೂಚಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಿಧು ಹೇಳುವ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎಲ್ಲಾ ನಿರ್ಗತಿಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ರಾಜ್ಯದ ಜನರಿಗೆ 170 ಸೇವೆಗಳನ್ನು ಆನ್ಲೈನ್ನಲ್ಲಿ ತರುವ ಬಗ್ಗೆಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)