ಪಂಜಾಬ್​​ನಲ್ಲಿ ಭದ್ರತಾ ಲೋಪ.. ಕೊನೆಗೂ ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು..?


ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು. ಜನವರಿ 5ನೇ ತಾರೀಕಿನಂದು ಪ್ರಧಾನಿ ಮೋದಿ ಹುಸ್ಸೇನಿವಾಲಾ ರಾಷ್ಟ್ರೀಯ ಹುತಾತ್ಮರ ಸ್ಮಾರಕ್ಕೆ ರಸ್ತೆ ಮಾರ್ಗದ ಮೂಲಕ ಹೊರಟಿದ್ದರು. ಆಗ ಪ್ರಧಾನಿ ಹೊರಟಿದ್ದ ರಸ್ತೆಯನ್ನು ತಡೆದಿದ್ದು ರೈತರು.

ಇನ್ನು, ರೈತರು ರಸ್ತೆ ಬ್ಲಾಕ್ ಮಾಡಿದ್ದ ಕಾರಣ ಫ್ಲೈಓವರ್ ಮೇಲೆಯೇ ಮೋದಿಯವರು ಸುಮಾರು 20 ನಿಮಿಷ ಕಾಯುವಂತಾಯ್ತು. ಪ್ರಧಾನಿ ಮೋದಿ ಭದ್ರತಾ ಲೋಪ ಪ್ರಕರಣ ತನಿಖೆಗೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಈ ನಡುವೆ ಎಎನ್​ಐ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ತನಗಾದ ಭದ್ರತಾ ಲೋಪ ದೋಷದ ಬಗ್ಗೆ ಮಾತಾಡಿದ್ದಾರೆ.

ನಾನು ಅಂದಿನ ಘಟನೆ ಬಗ್ಗೆ ಮೌನವಹಿಸಿದ್ದೇನೆ. ಸದ್ಯ ಸುಪ್ರೀಂಕೋರ್ಟ್​ ಪ್ರಕರಣದ ತನಿಖೆಗೆ ಆದೇಶಿಸಿದೆ. ತನಿಖೆ ಹಂತದಲ್ಲಿರೋ ಕೇಸ್​ ಬಗ್ಗೆ ನಾನು ಮಾತಾಡೋದು ತಪ್ಪು. ನಾನು ಒಂದು ವೇಳೆ ಮಾತಾಡಿದ್ರೆ ಇದು ಬಹಳ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ ಮೋದಿ.

News First Live Kannada


Leave a Reply

Your email address will not be published.