ಪಂಜಾಬ್​​ ಕಾಂಗ್ರೆಸ್​​ನಲ್ಲಿ ನಾಯಕರಿಗೇನು ಕೊರತೆ ಇಲ್ಲ.. ಸಿಧುಗೆ ರಾಹುಲ್​​ ಗಾಂಧಿ ಶಾಕ್​​


ನವದೆಹಲಿ: ಎಐಸಿಸಿ ವರಿಷ್ಠ ರಾಹುಲ್​​ ಗಾಂಧಿಯವರು ಪಂಜಾಬ್​​​​ ಕಾಂಗ್ರೆಸ್ ಸಿಎಂ​​ ಅಭ್ಯರ್ಥಿಯನ್ನಾಗಿ ಚರಣ್​​ಜೀತ್ ಸಿಂಗ್ ಚನ್ನಿಯವರನ್ನು ಘೋಷಿಸಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿಯವರು ಈ ಬಾರಿ ಸಿಎಂ ಆಗಬೇಕು ಎಂದಿದ್ದ ಪಂಜಾಬ್​​​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​​ ಸಿಂಗ್​ ಸಿಧು ಅವರಿಗೆ ಶಾಕ್​​ ನೀಡಿದ್ದಾರೆ.

ಇನ್ನು, ವರ್ಚುವಲ್​​ ಮೀಟಿಂಗ್​ನಲ್ಲಿ ಸಿಎಂ ಅಭ್ಯರ್ಥಿ ಅನೌನ್ಸ್​ ಮಾಡಿದ ಬಳಿಕ ಮಾತಾಡಿದ ರಾಹುಲ್​ ಗಾಂಧಿಯವರು, ಪಂಜಾಬ್​ ಕಾಂಗ್ರೆಸ್​​ನಲ್ಲಿ ನಾಯಕರಿಗೇನು ಕೊರತೆ ಇಲ್ಲ. ನಾಯಕರು ಸಾಮಾಜಿಕ ಹೋರಾಟಗಳಿಂದ ಹುಟ್ಟುತ್ತಾರೆ. ಚನ್ನಿ, ನವಜೋತ್​ ಸಿಂಗ್​​​ ಸಿಧು ಕೂಡ ಹೋರಾಟಗಳ ಮೂಲಕವೇ ಬಂದವರು. ಇಬ್ಬರು ಆತ್ಮೀಯರು ಎಂದು ಹೇಳಿದರು.

News First Live Kannada


Leave a Reply

Your email address will not be published.