ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸಿಧು ಹೆಸರು; ಅಮರೀಂದರ್​ ಸಿಂಗ್​ ಅಸಮಾಧಾನ

ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸಿಧು ಹೆಸರು; ಅಮರೀಂದರ್​ ಸಿಂಗ್​ ಅಸಮಾಧಾನ

ನವದೆಹಲಿ: ಪಂಜಾಬ್​ ಸಿಎಂ ಅಮರೀಂದರ್​ ಸಿಂಗ್​ ಮತ್ತು ಮಾಜಿ ಸಚಿವ ನವಜೋತ್​ ಸಿಂಗ್​ ಸಿಧು ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸಿಧು ಹೆಸರು ಕೇಳಿ ಬಂದ ಕೂಡಲೇ ಸೋನಿಯಾ ಗಾಂಧಿಯವರಿಗೆ ಅಮರೀಂದರ್ ಸಿಂಗ್​​​ ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ಹಳಬರನ್ನು ಕಡೆಗಣಿಸಬೇಡಿ, ಇದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್​​ ಅಮರೀಂದರ್​ ಸಿಂಗ್​ ಜೊತೆಗೆ ಮಾತಾಡಲು​​ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಅವರನ್ನು ಕಳುಹಿಸಿದ್ದಾರೆ. 

ಈಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಭೇಟಿ ಬಳಿಕ ಅಸಮಾಧಾನಗೊಂಡಿರುವ ಅಮರೀಂದರ್ ಸಿಂಗ್, ಮಾಧ್ಯಮಗಳೊಂದಿಗೆ ಮಾತಾಡಿದರು. ಸೋನಿಯಾ ಗಾಂಧಿಯವರು ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹರೀಶ್​​ ರಾವತ್​​​​​ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಹಲವಾರು ವಿಚಾರಗಳನ್ನು ಚರ್ಚಿಸಿದ್ದೇನೆ. ರಾವತ್​ ಎಲ್ಲವನ್ನೂ ಕಾಂಗ್ರೆಸ್​ ಹೈಕಮಾಂಡ್​​​ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಒಂದು ವಾರದಿಂದಲೂ ನವಜೋತ್​​ ಸಿಂಗ್​ ಸಿಧುರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಪದೇಪದೇ ಕೇಳಿ ಬಂದವು. ಸಿಧುಗೆ ಪ್ರಮುಖ ಹುದ್ದೆ ನೀಡುವ ವಿಚಾರವಾಗಿ ಅಮರೀಂದರ್​ ಸಿಂಗ್​​​​ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಚುನಾವಣಾ ತಂತ್ರಜ್ಞನ ಜೊತೆ ರಾಹುಲ್ ರಹಸ್ಯ ಸಭೆ; ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯುವ ಪ್ಲಾನ್

ಇತ್ತೀಚೆಗೆ ನವಜೋತ್​ ಸಿಂಗ್​ ಸಿಧು ಆಮ್​ ಆದ್ಮಿ ಪಾರ್ಟಿ ಸೇರಲಿದ್ದಾರೆ ಎನ್ನಲಾಗಿತ್ತು. ಸಿಧು ಕೂಡ ತನ್ನ ಟ್ವಿಟರ್​​ ಖಾತೆಯಲ್ಲಿ ನಾನು ಪಂಜಾಬ್​ಗೆ ನೀಡಿದ ಕೊಡುಗೆಯನ್ನು ಆಮ್​ ಆದ್ಮಿ ಪಾರ್ಟಿ ಗುರುತಿಸಿದೆ ಎಂದು ಹೊಗಳಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಹೈಕಮಾಂಡ್​ ಸಿಧುಗೆ ಪಂಜಾಬ್​ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದೆ.

The post ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸಿಧು ಹೆಸರು; ಅಮರೀಂದರ್​ ಸಿಂಗ್​ ಅಸಮಾಧಾನ appeared first on News First Kannada.

Source: newsfirstlive.com

Source link