ನವದೆಹಲಿ: ಮುಂಬರುವ 2022 ರ ಪಂಜಾಬ್​ ಚುನಾವಣೆಯನ್ನು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿಯೇ ಎದುರಿಸಲಿದ್ದೇವೆ ಅಂತಾ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಂಜಾಬ್​​​ ರಾಜ್ಯ ರಾಜಕೀಯದಲ್ಲಿ ಸಿಎಂ ಅಮರಿಂದರ್​​ ಸಿಂಗ್​ ಮತ್ತು ನವಜೋತ್​​ ಸಿಂಗ್​ ಸಿಧು ನಡುವಿನ ಶೀತಲ ಸಮರದ ಮಧ್ಯೆಯೇ ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿಯಾಗಿರುವ ಖರ್ಗೆ ಕೆಲವು ಸ್ಪಷ್ಟನೆ ನೀಡಿದ್ದಾರೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್​​ ಹೈಕಮಾಂಡ್​​​​​ ಮುಂದಿಟ್ಟಿದ್ದು ಸಮಸ್ಯೆಗಳನ್ನ ಬಗೆಹರಿಸಲಾಗುತ್ತೆ ಎಂದಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಗೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್​​ ಗಾಂಧಿಯವರೇ ಚುನಾವಣೆಯ ಮುಂದಾಳತ್ವವನ್ನ ವಹಿಸಲಿದ್ದಾರೆ ಅಂತಾ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

The post ಪಂಜಾಬ್​ ಚುನಾವಣೆಗೂ ಸೋನಿಯಾ-ರಾಹುಲ್ ಗಾಂಧಿ ನೇತೃತ್ವ- ಖರ್ಗೆ ಸ್ಪಷ್ಟನೆ appeared first on News First Kannada.

Source: newsfirstlive.com

Source link