14ನೇ ಐಪಿಎಲ್​​ ಆವೃತ್ತಿಯಲ್ಲಿ ಅಹ್ಮದಾಬಾದ್​ನ ನಮೋ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಕೊಲ್ಕತ್ತಾ ನೈಟ್​​ ರೈಡರ್ಸ್​​ ವಿರುದ್ಧ ಸೋಲುಂಡಿದೆ. 124 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಕೊಲ್ಕತ್ತಾ ಆಟಗಾರರು 20 ಎಸೆತ ಬಾಕಿ ಇರುವಂತೆ ಗುರಿ ತಲುಪಿ, 5 ವಿಕೆಟ್​​ಗಳ ಗೆಲುವು ಪಡೆದುಕೊಂಡಿದ್ದಾರೆ.

ಸತತ ಸೋಲಿನಿಂದ ಕಂಗೆಟ್ಟಿರುವ ಶಾರೂಖ್​ ಹುಡುಗ್ರು ನಮೋ ಅಂಗಳದಲ್ಲಿ ಸೋಲಿನ ಸರಪಳಿ ಕಳಚಿ ಕೊಂಡಿದ್ದು, ಗೆಲುವಿನ ಹಾದಿಗೆ ಮರಳಿದ್ದಾರೆ. ಇತ್ತ ಹ್ಯಾಟ್ರಿಕ್ ಸೋಲಿನ ಬಳಿಕ ಚೆಪಾಕ್​ನ ಕ್ರೀಡಾಂಗಣದಲ್ಲಿ ಗೆಲುವಿನ ಟ್ರ್ಯಾಕ್​ಗೆ​ ಮರಳಿದ್ದ ಜಿಂಟಾ ಬಾಯ್ಸ್​ ಮತ್ತೆ ಸೋಲಿನ ಕಹಿ ಉಂಡಿದ್ದಾರೆ. ಕೊಲ್ಕತ್ತಾ ಪರ ತಾಳ್ಮೆಯ ಪ್ರದರ್ಶನ ನೀಡಿದ ನಾಯಕ ಇಯಾನ್ ಮಾರ್ಗನ್​ ಅಜೇಯ 47 ರನ್​​ ಹಾಗೂ ರಾಹುಲ್​ ತ್ರಿಪಾಠಿ 41 ರನ್​ಗಳಿಸಿ ಗೆಲುವಿಗೆ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ 6 ಎಸೆತಗಳಲ್ಲಿ 12 ರನ್​ ಸಿಡಿಸಿದ ದಿನೇಶ್​ ಕಾರ್ತಿಕ್​ ಅಜೇಯರಾಗಿ ಉಳಿದರು.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್​ ಕಿಂಗ್ಸ್​ 9 ವಿಕೆಟ್​ ನಷ್ಟಕ್ಕೆ 123 ರನ್​ಗಳನಷ್ಟೇ ಗಳಿಸಿದ್ದರು. 18 ಓವರ್​​ಗಳು ಮುಗಿಯುವ ವೇಳೆಗೆ 7 ವಿಕೆಟ್​ ಕಳೆದುಕೊಂಡು 98 ರನ್​​ಗಳಿಸಿದ್ದ ಪಂಜಾಬ್​ ತಂಡಕ್ಕೆ ಕ್ರಿಸ್​ ಜೋರ್ಡಾನ್​ 18 ಎಸೆತಗಳಲ್ಲಿ 30 ರನ್​ ಗಳಿಸಿ ಗೌರವಯುತ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಪಂಜಾಬ್ ಪರ ನಾಯಕ ಕೆ.ಎಲ್​ ರಾಹುಲ್ 19 ರನ್​, ಮಯಾಂಕ್​ 31 ರನ್​​, ಪೊರನ್​ 19 ರನ್​ ಗಳಿಸಿದ್ದರು. ಕೊಲ್ಕತ್ತಾ ಪರ ಪ್ರಸಿದ್ಧ ಕೃಷ್ಣ ಮೂರು ವಿಕೆಟ್​ ಪಡೆದು ಮಿಂಚಿದರೆ, ಸುನಿಲ್ ನರೇನ್​, ಪ್ಯಾಟ್​ ಕಮ್ಮಿನ್ಸ್​, ಶಿವಂ ಮಾವಿ, ವರುಣ್​ ಚಕ್ರವರ್ತಿ ತಲಾ ಒಂದು ವಿಕೆಟ್​ ಪಡೆದರು.

The post ಪಂಜಾಬ್​ ವಿರುದ್ಧ 5 ವಿಕೆಟ್​ಗಳ​ ಗೆಲುವು ಪಡೆದ ಶಾರೂಖ್​ ಬಾಯ್ಸ್ appeared first on News First Kannada.

Source: News First Kannada
Read More