ಪಂಜಾಬ್ ಜೈಲಿನಲ್ಲಿರುವ ಕೈದಿಯ ಬೆನ್ನಮೇಲೆ ಭಯೋತ್ಪಾದಕ ಎಂದು ಬರೆದು ಚಿತ್ರಹಿಂಸೆ; ತನಿಖೆಗೆ ಆದೇಶ | Punjab prisoner allegedly tortured branded as terrorist on his back with an iron rod


ಪಂಜಾಬ್ ಜೈಲಿನಲ್ಲಿರುವ ಕೈದಿಯ ಬೆನ್ನಮೇಲೆ ಭಯೋತ್ಪಾದಕ ಎಂದು ಬರೆದು ಚಿತ್ರಹಿಂಸೆ; ತನಿಖೆಗೆ ಆದೇಶ

ಕೈದಿ ಕರಮ್ ಜಿತ್ ಬೆನ್ನಲ್ಲಿ ಅತ್ವಾದಿ ಎಂದು ಬರೆದಿರುವುದು (ಟ್ವಿಟರ್ ಚಿತ್ರ)

ಚಂಡೀಗಢ: ಪಂಜಾಬ್‌ನ ಬರ್ನಾಲಾದ ಜೈಲಿನಲ್ಲಿ 28 ವರ್ಷದ ಕೈದಿಯೊಬ್ಬನಿಗೆ ಕಬ್ಬಿಣದ ರಾಡ್‌ನಿಂದ ಅತ್ವಾದಿ (ಭಯೋತ್ಪಾದಕ) ಎಂದು ಬರೆದು ಚಿತ್ರಹಿಂಸೆ ನೀಡಿದ ಆರೋಪದ ಕುರಿತು ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ತನಿಖೆಗೆ ಆದೇಶಿಸಿದ್ದಾರೆ. ” ಬರ್ನಾಲಾ ಜೈಲಿನ ಕೈದಿ ಕರಮ್‌ಜಿತ್ ಸಿಂಗ್ ಅವರನ್ನು ಜೈಲು ಸೂಪರಿಂಟೆಂಡೆಂಟ್ ಅಮಾನುಷವಾಗಿ ಥಳಿಸಿದ್ದಾರೆ. “ಅತ್ವಾದಿ” ಎಂದರೆ ಭಯೋತ್ಪಾದಕ ಎಂಬ ಪದವನ್ನು ಅವನ ಬೆನ್ನಿನ ಮೇಲೆ ಕೆತ್ತಲಾಗಿದೆ. ಇದು ಅಘಾತಕಾರಿ ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಅಕಾಲಿದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಬುಧವಾರ ಟ್ವೀಟ್ ಮಾಡಿದ್ದಾರೆ.

ಸಿಖ್ಖರನ್ನು ಭಯೋತ್ಪಾದಕರೆಂದು ಬಣ್ಣಿಸಲು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ದುರುದ್ದೇಶಪೂರಿತ ಉದ್ದೇಶ  ಇದು ಎಂದು ಸಿರ್ಸಾ ಬಣ್ಣಿಸಿದ್ದಾರೆ. “ಪಂಜಾಬ್ ಪೊಲೀಸರು ವಿಚಾರಣಾಧೀನ ಸಿಖ್ ಕೈದಿಯನ್ನು ಥಳಿಸಿದ್ದಾರೆ ಮತ್ತು ಆತನ ಬೆನ್ನಿನ ಮೇಲೆ ‘ಅತ್ವಾದಿ’ ಎಂಬ ಪದವನ್ನು ಕೆತ್ತಲಾಗಿದೆ. ನಾವು ಜೈಲು ಅಧೀಕ್ಷಕರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೈದಿಯಾಗಿರುವ ಕರಮ್‌ಜಿತ್ ಸಿಂಗ್ ಅವರು ಎನ್‌ಡಿಪಿಎಸ್ ಕಾಯ್ದೆಯಡಿ ಬರುವ ಪ್ರಕರಣಗಳು ಸೇರಿದಂತೆ ಸುಮಾರು 11 ಪ್ರಕರಣಗಳಲ್ಲಿ ವಿಚಾರಣೆಯಲ್ಲಿದ್ದಾರೆ. ಎನ್‌ಡಿಪಿಎಸ್ ಪ್ರಕರಣದ ವಿಚಾರಣೆ ನಡೆಯುತ್ತಿರುವ ಮಾನ್ಸಾ ಜಿಲ್ಲೆಯ ನ್ಯಾಯಾಲಯದಲ್ಲಿ ಸಿಂಗ್ ಈ ಆರೋಪ ಮಾಡಿದ್ದಾರೆ. ಈ ಚಿತ್ರಹಿಂಸೆಯ ಆರೋಪ ಹೊತ್ತಿರುವ ಜೈಲು ಸೂಪರಿಂಟೆಂಡೆಂಟ್ ಆರೋಪವನ್ನು ನಿರಾಕರಿಸಿದ್ದಾರೆ. ಕರಮ್‌ಜಿತ್ ಪುನರಾವರ್ತಿತ ಅಪರಾಧಿಯಾಗಿದ್ದು, ಕೆಲವು ದಿನಗಳ ಹಿಂದೆ ಸೆಲ್ ಫೋನ್‌ನೊಂದಿಗೆ ಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಸಂಪತ್ತಿನ ಶೇ.85ರಷ್ಟನ್ನು ಶ್ರೀ ಶಿರಡಿ ಸಾಯಿಬಾಬಾಗೆ ಸಮರ್ಪಿಸಿದ ಕೆ.ವಿ.ರಮಣಿ; ಶಿಕ್ಷಣವೆಂದರೆ ಸೇವೆ ಎನ್ನುವ ಉದ್ಯಮಿ ಇವರು

TV9 Kannada


Leave a Reply

Your email address will not be published. Required fields are marked *