ಐಪಿಎಲ್ ಹರಾಜು ಮುಗಿದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದ ಗೊಂದಲ ಬಗೆ ಹರಿತು ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಮುಂದಿನ ಕ್ಯಾಪ್ಟನ್ ವಿಚಾರದಲ್ಲಿ ಪಂಜಾಬ್ ಪಡೆ ಇನ್ನೂ ಸ್ಪಷ್ಟತೆಗೆ ಬಂದಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದು ವಾರವೇ ಉರುಳಿದೆ. ಹರಾಜಿನ ಬಳಿಕ ತಂಡದ ಬಲ ಹಾಗೂ ದೌರ್ಭಲ್ಯಗಳ ಮೇಲೆ ಫ್ರಾಂಚೈಸಿಗಳು ವರ್ಕೌಟ್ ಮಾಡೋಕೆ ಆರಂಭಿಸಿವೆ. ತಂಡದಲ್ಲಿನ ಗೊಂದಲಗಳನ್ನ ಬಗೆಹರಿಸಿಕೊಂಡು ಐಪಿಎಲ್ 15 ಸೀಸನ್ಗೆ ಸಿದ್ಧತೆ ಈಗಾಗಲೇ ಗ್ರೌಂಡ್ ಲೆವೆಲ್ನಲ್ಲಿ ಆರಂಭವಾಗಿವೆ. ಆದ್ರೆ, ಪಂಜಾಬ್ ಕಿಂಗ್ಸ್ ತಂಡ ಮಾತ್ರ ನಾಯಕನ್ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಾಟದಲ್ಲಿ ಬ್ಯುಸಿಯಾಗಿದೆ.
ನಾಯಕತ್ವದ ವಿಚಾರದಲ್ಲಿ ಪಂಜಾಬ್ ಫ್ರಾಂಚೈಸಿಯ ಯೂ ಟರ್ನ್..!
ಐಪಿಎಲ್ ಮೆಗಾ ಹರಾಜು ಹತ್ತಿರವಾದಂತೆ ಪಂಜಾಬ್ನ ರಾಜ ಯಾರು ಎಂಬ ಪ್ರಶ್ನೆ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಹರಾಜಿಗೆ ಮುನ್ನ ಫ್ರಾಂಚೈಸಿ ನಾವು ನಾಯಕನ ಹುಡುಕಾಟದಲ್ಲಿವೆ ಎಂದು ಫ್ರಾಂಚೈಸಿ ಮೂಲಗಳು ಹೇಳಿಕೆ ನೀಡಿದ್ವು. ಅದರ ಬೆನ್ನಲ್ಲೇ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಂಡ ಮಯಾಂಕ್ ಅಗರ್ವಾಲ್ಗೆ ನಾಯಕತ್ವ ಸಿಗಲ್ವಾ ಎಂಬ ಪ್ರಶ್ನೆ ಹುಟ್ಟಿತ್ತು. ಇದಕ್ಕೆ ತಂಡದ ಮೂಲಗಳೇ ಮಯಾಂಕ್ ಮೊದಲ ಆಯ್ಕೆಯಲ್ಲ ಎಂಬ ಉತ್ತರ ನೀಡಿದ್ವು. ಆದ್ರೀಗ ಫ್ರಾಂಚೈಸಿ ಯೂಟರ್ನ್ ತೆಗೆದುಕೊಂಡಿದ್ಯಂತೆ.
ಹರಾಜಿನಲ್ಲಿ ಶಿಖರ್ ಧವನ್ರನ್ನ ತಂಡ ಖರೀದಿ ಮಾಡಿದ ಬೆನ್ನಲ್ಲೇ ಗಬ್ಬರ್ಗೆ ಪಂಜಾಬ್ ಕ್ಯಾಪ್ಟನ್ ಪಟ್ಟ ಕಟ್ಟಲಾಗುತ್ತೆ ಅನ್ನೋ ಗುಲ್ ಎದ್ದಿತ್ತು. ಇದೀಗ ಮತ್ತೆ ಫ್ರಾಂಚೈಸಿ ಯೂಟರ್ನ್ ತೆಗೆದುಕೊಂಡಿದೆ. ರಿಟೈನ್ ಮಾಡಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ನಾಯಕನ ಪಟ್ಟ ಕಟ್ಟೋ ಬಗ್ಗೆ ಫ್ರಾಂಚೈಸಿ ಒಲವು ತೋರಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಮಯಾಂಕ್ಗೆ ನಾಯಕತ್ವ ನೀಡೋ ನಿರ್ಧಾರದ ಹಿಂದೆ ಕುಂಬ್ಳೆ?
ಹೌದು..! ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಅಲಭ್ಯರಾದ ಪಂದ್ಯದಲ್ಲಿ ಮಯಾಂಕ್ ಪಂಜಾಬ್ ಪಡೆಯನ್ನ ಮುನ್ನಡೆಸಿದ್ರು. ಪಂದ್ಯದಲ್ಲಿ ಪಂಜಾಬ್ ಗೆಲ್ಲದಿದ್ರೂ, ಮಯಾಂಕ್, ಸ್ಮಾರ್ಟ್ ನಾಯಕತ್ವ ಗಮನ ಸೆಳೆದಿತ್ತು. ಇದರ ಜೊತೆಗೆ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಜೊತೆಗೂ ಮಯಾಂಕ್ ಉತ್ತಮ ಸಂಬಂಧ ಹೊಂದಿದ್ದಾರೆ. ಇವರಿಬ್ಬರ rapo ಕೂಡ ಸಖತ್ ಆಗಿದೆ. ನಾಯಕ – ಕೋಚ್ ನಡುವೆ ಸಮನ್ವಯತೆ ಇದ್ರೆ, ತಂಡ ಯಶಸ್ಸು ಕಾಣುತ್ತೆ ಅನ್ನೋದನ್ನ ಫ್ರಾಂಚೈಸಿ ಕೂಡ ಅರಿತಿದೆ. ಈ 2 ಕಾರಣಗಳಿಂದಲೇ ಮಯಾಂಕ್ ನಾಯಕತ್ವದ ಹೊಣೆಗಾರಿಕೆ ನೀಡೋ ನಿರ್ಧಾರಕ್ಕೆ ಪಂಜಾಬ್ ಪಡೆ ಬಂದಿರೋದು.
ಪಂಜಾಬ್ ಪಡೆ ಕೊನೆಯದಾಗಿ ಫೈನಲ್ ಪ್ರವೇಶಿಸಿದ್ದೇ 2014ರಲ್ಲಿ. ಕಳೆದ ಮೂರು ವರ್ಷಗಳಿಂದ ಅಂತೂ ಹೀನಾಯ ಪ್ರದರ್ಶನವನ್ನ ನೀಡಿದೆ. ಈ ಆವೃತ್ತಿಯಲ್ಲಿ ಬ್ಯಾಡ್ ರೆಕಾರ್ಡ್ ಬ್ರೇಕ್ ಮಾಡ್ಬೇಕು ಅನ್ನೋದು ಫ್ರಾಂಚೈಸಿಯ ಟಾರ್ಗೆಟ್ ಆಗಿದೆ. ಹೀಗಾಗಿಯೇ ಅಳೆದು ತೂಗಿ ಹರಾಜಿನಲ್ಲಿ ಬೆಸ್ಟ್ ಪಿಕ್ ಮಾಡಿರೋ ತಂಡ ಈಗ ನಾಯಕನ ವಿಚಾರದಲ್ಲೂ ಕಾದು ನೋಡೋ ತಂತ್ರ ಅನುಸರಿಸ್ತಾಯಿದೆ.