ಅಹ್ಮದಾಬಾದ್‌ : ಸೋಮವಾರದಿಂದ ಮೊದಲ್ಗೊಂಡ ಐಪಿಎಲ್‌ನ ಅಹ್ಮದಾಬಾದ್‌ ಲೀಗ್‌ ಸ್ಪರ್ಧೆಯಲ್ಲಿ ಬ್ಯಾಟಿಂಗ್‌ ಪರದಾಟ ಕಂಡುಬಂದಿದೆ. ಸಣ್ಣ ಮೊತ್ತದ ಮುಖಾಮುಖೀಯಲ್ಲಿ ಕೆಕೆಆರ್‌ 5 ವಿಕೆಟ್‌ಗಳಿಂದ ಪಂಜಾಬ್‌ ಗೆ ಸೋಲುಣಿಸಿ 2ನೇ ಜಯ ದಾಖಲಿಸಿದೆ.

ಪಂಜಾಬ್‌ ಕಿಂಗ್ಸ್‌ 9 ವಿಕೆಟಿಗೆ ಕೇವಲ 123 ರನ್‌ ಗಳಿಸಿದರೆ, ಕೆಕೆಆರ್‌ 16.4 ಓವರ್‌ಗಳಲ್ಲಿ 5 ವಿಕೆಟಿಗೆ 126 ರನ್‌ ಮಾಡಿತು.
ನಿತೀಶ್‌ ರಾಣಾ, ಶುಭಮನ್‌ ಗಿಲ್‌ ಮತ್ತು ಸುನೀಲ್‌ ನಾರಾಯಣ್‌ ಅವರನ್ನು 3 ಓವರ್‌ಗಳಲ್ಲೇ ಕಳೆದುಕೊಂಡ ಕೆಕೆಆರ್‌ ಕೂಡ ತೀವ್ರ ಕುಸಿತಕ್ಕೆ ಸಿಲುಕುವ ಎಲ್ಲ ಸಾಧ್ಯತೆ ಇತ್ತು. ಆಗ ಕೇವಲ 17 ರನ್‌ ಆಗಿತ್ತು. ಆದರೆ ರಾಹುಲ್‌ ತ್ರಿಪಾಠಿ (41) ಮತ್ತು ನಾಯಕ ಇಯಾನ್‌ ಮಾರ್ಗನ್‌ (ಔಟಾಗದೆ 47) ಸೇರಿಕೊಂಡು ಬಹಳ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸತೊಡಗಿದರು. 4ನೇ ವಿಕೆಟಿಗೆ 66 ರನ್‌ ಒಟ್ಟುಗೂಡಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.

ಇಂಗ್ಲೆಂಡ್‌ ಎದುರಿನ ಸರಣಿ ವೇಳೆ ಇಲ್ಲಿನ ಪಿಚ್‌ ವ್ಯಾಪಕ ಟೀಕೆಗೊಳಗಾಗಿತ್ತು. ರಾಹುಲ್‌-ಅಗರ್ವಾಲ್‌ ಪವರ್‌ ಪ್ಲೇ ವೇಳೆ ರನ್‌ ಚಡಪಡಿಕೆ ನಡೆಸಿದ್ದು ಇದರ ಮುಂದುವರಿದ ಭಾಗದಂತಿತ್ತು. 6 ಓವರ್‌ಗಳಲ್ಲಿ ಪಂಜಾಬ್‌ ಒಂದು ವಿಕೆಟಿಗೆ ಕೇವಲ 37 ರನ್‌ ಮಾಡಿತ್ತು. 20 ಎಸೆತಗಳಿಂದ 19 ರನ್‌ ಮಾಡಿದ ರಾಹುಲ್‌ ಮೊದಲಿಗರಾಗಿ ನಿರ್ಗಮಿಸಿದರು. ಈ ವಿಕೆಟ್‌ ಉರುಳಿಸಿದವರು ಪ್ಯಾಟ್‌ ಕಮಿನ್ಸ್‌. ದೊಡ್ಡ ಹೊಡೆತ ಬಾರಿಸಲು ಗರಿಷ್ಠ ಪ್ರಯತ್ನ ಮಾಡಿದ ರಾಹುಲ್‌ ಇನ್ನಿಂಗ್ಸ್‌ನಲ್ಲಿ 2 ಫೋರ್‌, ಒಂದು ಸಿಕ್ಸರ್‌ ಸೇರಿತ್ತು.

ಶಿವಂ ಮಾವಿ ಮುಂದಿನ ಓವರ್‌ನಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರನ್ನು “ಗೋಲ್ಡನ್‌ ಡಕ್‌’ ಸಂಕಟಕ್ಕೆ ತಳ್ಳಿದರು. ಡಿಆರ್‌ಎಸ್‌ ಮೂಲಕ ಈ ತೀರ್ಪು ಕೆಕೆಆರ್‌ ಪರವಾಗಿ ಬಂತು. ಅನಂತರದ ಓವರ್‌ನಲ್ಲಿ ವಿಕೆಟ್‌ ಬೇಟೆಯಾಡುವ ಸರದಿ ಪ್ರಸಿದ್ಧ್ ಕೃಷ್ಣ ಅವರದಾಯಿತು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಕೆ.ಎಲ್‌. ರಾಹುಲ್‌ ಸಿ ನಾರಾಯಣ್‌ ಬಿ ಕಮಿನ್ಸ್‌ 19
ಅಗರ್ವಾಲ್‌ ಸಿ ತ್ರಿಪಾಠಿ ಬಿ ನಾರಾಯಣ್‌ 31
ಕ್ರಿಸ್‌ ಗೇಲ್‌ ಸಿ ಕಾರ್ತಿಕ್‌ ಬಿ ಮಾವಿ 0
ದೀಪಕ್‌ ಹೂಡಾ ಸಿ ಮಾರ್ಗನ್‌ ಬಿ ಪ್ರಸಿದ್ಧ್ 1
ನಿಕೋಲಸ್‌ ಪೂರಣ್‌ ಬಿ ಚಕ್ರವರ್ತಿ 19
ಮೊಸಸ್‌ ಹೆನ್ರಿಕ್ಸ್‌ ಬಿ ನಾರಾಯಣ್‌ 2
ಶಾರೂಖ್‌ ಖಾನ್‌ ಸಿ ಮಾರ್ಗನ್‌ ಬಿ ಪ್ರಸಿದ್ಧ್ 13
ಕ್ರಿಸ್‌ ಜೋರ್ಡನ್‌ ಬಿ ಪ್ರಸಿದ್ಧ್ 30
ರವಿ ಬಿಷ್ಣೋಯಿ ಸಿ ಮಾರ್ಗನ್‌ ಬಿ ಕಮಿನ್ಸ್‌ 1
ಮೊಹಮ್ಮದ್‌ ಶಮಿ ಔಟಾಗದೆ 1
ಆರ್ಷದೀಪ್‌ ಸಿಂಗ್‌ ಔಟಾಗದೆ 1
ಇತರ 5
ಒಟ್ಟು(9 ವಿಕೆಟಿಗೆ) 123
ವಿಕೆಟ್‌ ಪತನ:1-36, 2-38, 3-42, 4-60, 5-75, 6-79, 7-95, 8-98, 9-121.
ಬೌಲಿಂಗ್‌; ಶಿವಂ ಮಾವಿ 4-0-13-1
ಪ್ಯಾಟ್‌ ಕಮಿನ್ಸ್‌ 3-0-31-2
ಸುನೀಲ್‌ ನಾರಾಯಣ್‌ 4-0-22-2
ಪ್ರಸಿದ್ಧ್ ಕೃಷ್ಣ 4-0-30-3
ಆ್ಯಂಡ್ರೆ ರೆಸಲ್‌ 1-0-2-0
ವರುಣ್‌ ಚಕ್ರವರ್ತಿ 4-0-24-1

ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಬಿ ಶಮಿ 9
ನಿತೀಶ್‌ ರಾಣಾ ಸಿ ಶಾರೂಖ್‌ ಬಿ ಹೆನ್ರಿಕ್ಸ್‌ 0
ರಾಹುಲ್‌ ತ್ರಿಪಾಠಿ ಸಿ ಶಾರೂಖ್‌ ಬಿ ಹೂಡಾ 41
ನಾರಾಯಣ್‌ ಸಿ ರವಿ ಬಿ ಆರ್ಷದೀಪ್‌ 0
ಇಯಾನ್‌ ಮಾರ್ಗನ್‌ ಔಟಾಗದೆ 47
ಆ್ಯಂಡ್ರೆ ರಸೆಲ್‌ ರನೌಟ್‌ 10
ದಿನೇಶ್‌ ಕಾರ್ತಿಕ್‌ ಔಟಾಗದೆ 12
ಇತರ 7
ಒಟ್ಟು(16.4 ಓವರ್‌ಗಳಲ್ಲಿ 5 ವಿಕೆಟಿಗೆ) 126
ವಿಕೆಟ್‌ ಪತನ:1-5, 2-9, 3-17, 4-83, 5-98
ಬೌಲಿಂಗ್‌; ಮೊಸೆಸ್‌ ಹೆನ್ರಿಕ್ಸ್‌ 1-0-5-1
ಮೊಹಮ್ಮದ್‌ ಶಮಿ 4-0-25-1
ಆರ್ಷದೀಪ್‌ ಸಿಂಗ್‌ 2.4-0-27-1
ರವಿ ಬಿಷ್ಣೋಯಿ 4-0-19-0
ಕ್ರಿಸ್‌ ಜೋರ್ಡನ್‌ 3-0-24-0
ದೀಪಕ್‌ ಹೂಡಾ 2-0-20-1

ಕ್ರೀಡೆ – Udayavani – ಉದಯವಾಣಿ
Read More

Leave a comment