ಶ್ರೇಯಸ್​ ಅಲಭ್ಯತೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ ಮುನ್ನಡೆಸುತ್ತಿರುವ ರಿಶಬ್​ ಪಂತ್​​​​ಗೆ ಕೆಲ ಮಾಜಿ ಕ್ರಿಕೆಟಿಗರು ಗುಣಗಾನ ಮಾಡಿದ್ರೆ ಟೀಮ್ ಇಂಡಿಯಾ ಮಾಜಿ ಓಪನರ್ ವಿರೇಂದ್ರ ಸೆಹ್ವಾಗ್ ಟೀಕಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ವಿರುದ್ಧದ ಕಾರ್ಯತಂತ್ರದ ಬಗ್ಗೆ ಟೀಕಿಸಿ, ಸಲಹೆ ನೀಡಿರುವ ಸೆಹ್ವಾಗ್, ಪಂತ್​ ಕ್ಯಾಪ್ಟನ್ಸಿಗೆ 10ಕ್ಕೆ 5 ಅಂಕವೂ ನೀಡಲ್ಲ. ಯಾಕಂದ್ರೆ ಆತ ದೊಡ್ಡ ತಪ್ಪೇ ಮಾಡಿದ್ದಾನೆ. ನಿಮ್ಮ ಪ್ರಮುಖ ಬೌಲರ್, ಬೌಲಿಂಗ್ ಮಾಡದಿದ್ದರೆ. ನಿಮ್ಮ ಕಾರ್ಯತಂತ್ರಗಳು ವಿಫಲವಾಗುತ್ತೆ. ನಾಯಕನಾಗಿ ಬೌಲಿಂಗ್​ ಅನ್ನ, ಪರಿಸ್ಥಿತಿಗೆ ತಕ್ಕಂತೆ ಬಳಸಿಕೊಳ್ಳುವುರ ಜೊತೆಗೆ ಫೀಲ್ಡಿಂಗ್​ನಲ್ಲಿನ ಬದಲಾವಣೆಯೂ ಮುಖ್ಯವಾಗಿರುತ್ತೆ. ಸಣ್ಣ ಸಣ್ಣ ವಿಚಾರಗಳಿಂದಲೇ ಸ್ಮಾರ್ಟ್​ ಕ್ಯಾಪ್ಟನ್ ಆಗಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.

The post ಪಂತ್​ ನಾಯಕತ್ವಕ್ಕೆ 10 ರಲ್ಲಿ 5 ಅಂಕವನ್ನೂ ಕೂಡ ನೀಡಲ್ಲ- ಸೆಹ್ವಾಗ್ ಶಾಕಿಂಗ್ ಹೇಳಿಕೆ appeared first on News First Kannada.

Source: newsfirstlive.com

Source link