ಪಂತ್, ಜಡೇಜಾ ದಿಟ್ಟ ಹೋರಾಟ- ಟೀಮ್ ಇಂಡಿಯಾಕ್ಕೆ 98 ರನ್​​​​ಗಳ ಮುನ್ನಡೆ

ಪಂತ್, ಜಡೇಜಾ ದಿಟ್ಟ ಹೋರಾಟ- ಟೀಮ್ ಇಂಡಿಯಾಕ್ಕೆ 98 ರನ್​​​​ಗಳ ಮುನ್ನಡೆ

ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​ ಫೈನಲ್​ ಪಂದ್ಯದ 6ನೇ ದಿನದಾಟದ ಮೊದಲ ಸೆಷನ್​​ನಲ್ಲಿ, ನ್ಯೂಜಿಲೆಂಡ್​​ ಬೌಲರ್​ಗಳು ಪಾರಮ್ಯ ಮೆರೆದಿದ್ದಾರೆ. ಪ್ರಥಮ ಸೆಷನ್​​ನಲ್ಲಿ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡಿರುವ ಟೀಮ್​ ಇಂಡಿಯಾ, ಸಂಕಷ್ಟಕ್ಕೆ ಸಿಲುಕಿದೆ. 2 ವಿಕೆಟ್​​ ನಷ್ಟಕ್ಕೆ 64 ರನ್​​​ಗಳೊಂದಿಗೆ ದಿನದಾಟ ಆರಂಭಿಸಿದ ಭಾರತ, ದಿನದಾಟದ ಆರಂಭದಲ್ಲೇ ಆಘಾತ ಅನುಭವಿಸಿತು. ಕೊಹ್ಲಿ ಮತ್ತು ಪೂಜಾರ, ವೇಗಿ ಕೈಲ್ ಜೇಮಿಸನ್​ಗೆ ವಿಕೆಟ್ ಒಪ್ಪಿಸಿದ್ರು. ನಂತರ ರಹಾನೆ ಕೂಡ ಟ್ರೆಂಟ್​ ಬೋಲ್ಟ್​ ಓವರ್​​ನಲ್ಲಿ ನಿರ್ಗಮಿಸಿದರು. ಕೊಹ್ಲಿ 15, ಪೂಜಾರ 13 ಮತ್ತು ರಹಾನೆ 15 ರನ್​​ ಕಲೆಹಾಕಿದ್ದಾರೆ. ಇನ್ನು ರಿಷಭ್​​ ಪಂತ್​​ ಮತ್ತು ರವಿಂದ್ರ ಜಡೇಜಾ ಕುಸಿದ ತಂಡಕ್ಕೆ ಆಸರೆಯಾಗಿದ್ದು, ಕ್ರೀಸ್​​ನಲ್ಲಿ ಇದ್ದಾರೆ. ಪಂತ್​ 28ರನ್​ ಮತ್ತು ಜಡೇಜಾ 12ರನ್​ ಗಳಿಸಿದ್ದಾರೆ.

The post ಪಂತ್, ಜಡೇಜಾ ದಿಟ್ಟ ಹೋರಾಟ- ಟೀಮ್ ಇಂಡಿಯಾಕ್ಕೆ 98 ರನ್​​​​ಗಳ ಮುನ್ನಡೆ appeared first on News First Kannada.

Source: newsfirstlive.com

Source link